ಕುಶಾಲನಗರ, ಮಾ. ೨೨: ಯಾವುದೇ ದಾಖಲೆಗಳಿಲ್ಲದೆ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ನಾಲ್ಕು ಲಕ್ಷ ರೂ. ನಗದು ಹಣವನ್ನು ಕುಶಾಲನಗರ ವಾಹನ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿ ಕೊಂಡಿದ್ದಾರೆ. ಟಿಬೇಟಿಯನ್ ನಿರಾಶ್ರಿತ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಲಿ (ಏಂ೪೫ ಇಆ೬೬೧೦) ಬೈಲಕೊಪ್ಪ ಕಡೆಯಿಂದ ಕುಶಾಲನಗರ ಪಟ್ಟಣ ಕಡೆಗೆ ಹಣ ಸಾಗಿಸುತ್ತಿದ್ದ ಸಂದರ್ಭ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕೇಂದ್ರದ ಚುನಾವಣಾ ಅಧಿಕಾರಿ ಪೂವಯ್ಯ, ಮಹಾದೇವ್, ಅಭಿಷೇಕ್ ಹಾಗೂ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿ ಬಿ.ಎಸ್. ಉಮಾ, ಸಿಬ್ಬಂದಿಗಳಾದ ಅರುಣ್ ಕುಮಾರ್, ಶಶಿಕುಮಾರ್ ಜಯಪ್ರಕಾಶ್ ಈ ಸಂದರ್ಭ ಇದ್ದರು.