ಕಣಿವೆ, ಮಾ. ೨೨: ಕುಶಾಲನಗರದ ಕಾವೇರಿ ನಿಸರ್ಗಧಾಮದ ಬಳಿ ಕಾವೇರಿ ನದಿಯ ಒಡಲು ಬಟಾ ಬಯಲಿನಂತಿದ್ದು ನೀರಿಲ್ಲದೇ ಕಾದ ಕರಿ ಕಲ್ಲುಗಳ ಆರ್ತನಾದ ನೋಡುಗರನ್ನು ಚಿಂತೆ ಗೀಡು ಮಾಡಿದೆ.

ಸಕಲ ಜೀವ ಕೋಟಿಗಳನ್ನು ಪೊರೆವ ಕಾವೇರಿ ನದಿ ಬೇಸಿಗೆಯ ಆರಂಭದ ಕೇವಲ ಮಾರ್ಚ್ ತಿಂಗಳಿಗೆ ಹೀಗಾದರೆ ಇನ್ನು ಜುಲೈ ತಿಂಗಳ ತನಕ ನಾಲ್ಕು ತಿಂಗಳ ಅವಧಿಯ ಕಾಲಘಟ್ಟವನ್ನು ಊಹಿಸಿಕೊಳ್ಳುವುದಕ್ಕೆ ಅಸಾಧ್ಯ.

ಜೀವ ನದಿಯಲ್ಲಿ ನೀರು ಸ್ಥಗಿತಗೊಂಡು ಹಲವು ದಿನಗಳು ಕಳೆದಿವೆ. ನದಿಯ ಒಡಲಲ್ಲಿ ಇದ್ದಂತಹ ಜಲಚರಗಳು ಹಾಗೂ ಜೀವ ರಾಶಿಗಳು ಉರಿವ ಸೂರ್ಯನ ಪ್ರತಾಪಕ್ಕೆ ಸುಟ್ಟು ಕರಕಲಾಗಿವೆ. ನದಿಯ ಅಲ್ಲಲ್ಲಿ ಸಣ್ಣ ಪುಟ್ಟ ಗುಂಡಿಗಳಲ್ಲಿ ನಿಂತಿರುವ ನೀರಿನಲ್ಲಿ, ಪೂರಕವಾದ ಆಮ್ಲಜನಕ ದೊರಕದ ಕಾರಣ ಜಲಚರಗಳು ಉಸಿರು ನಿಲ್ಲಿಸಿ ತೇಲುತ್ತಿರುವ ಚಿತ್ರಣ ಒಂದೆಡೆ ಕಂಡು ಬಂದರೆ, ನದಿಯೊಡಲ ಗಿಡ ಮರಗಳನ್ನು ಆಶ್ರಯಿಸಿ ಗೂಡು ಕಟ್ಟಿ ಸಂತಾನೋತ್ಪತ್ತಿ ಗೈಯುತ್ತಿರುವ ಪಕ್ಷಿಗಳ ಸಂಕುಲ ನೀರಿಲ್ಲದ ನದಿಯಲ್ಲಿ ಬಿಸಿಯುಗುಳುವ ಕರಿ ಕಲ್ಲು ಬಂಡೆಗಳನ್ನು ತೊರೆದು ತವಕಿಸುತ್ತಿವೆ.

ನೀರೇ ಹರಿಯದ, ನೀರೇ ಇಲ್ಲದ ನದಿಯೊಳಗೆ ಒಂದು ಸುತ್ತು ಹೆಜ್ಜೆ ಹಾಕಿದರೆ ನದಿಯ ಹರಿವು ನಿಂತು ಎಷ್ಟೋ ತಿಂಗಳುಗಳು ಕಳೆದಂತೆ ಮನಸ್ಸಿಗೆ ನೋವಾಗುವ ಭಾವ ಒಂದೆಡೆ, ನೀರು, ಮಣ್ಣು ಗಾಳಿಯನ್ನು ದಿನೇ ದಿನೇ ವ್ಯಾಪಕವಾಗಿ ಕಲುಷಿತಗೊಳಿಸಿ ತನ್ನ ಸ್ವಾರ್ಥ ಮೆರೆಯುತ್ತಿರುವ ಮಾನವವ ನೀಚತನಕ್ಕೂ ಇಂತಹುದೇ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದೆನಿಸುತ್ತದೆ.

ಕಾಟಿಕೆರೆ ಒಣಗಿದರೆ ಮುಂದೇನು ಎಂಬ ಆತಂಕ ಇಲ್ಲಿನ ನಿವಾಸಿಗಳದ್ದಾಗಿದೆ.

- ಕೆ.ಎಸ್.ಮೂರ್ತಿ

ಸುಂಟಿಕೊಪ್ಪದಲ್ಲಿ ಮುಂದುವರಿದ ನೀರಿನ ಸಮಸ್ಯೆ

ಸುಂಟಿಕೊಪ್ಪ, ಮಾ. ೨೨: ಸುಂಟಿಕೊಪ್ಪದಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಕಳೆದ ೩ ದಿನಗಳಿಂದ ಬಹುತೇಕ ಬಡಾವಣೆಗಳಿಗೆ ನೀರಿನ ಸರಬರಾಜು ಆಗದೆ ಜನ ಸಂಕಷ್ಟಕ್ಕೀಡಾಗಿದ್ದಾರೆ. ನೀರುಗಂಟಿಗಳು ಮೋಟಾರು ದುರಸ್ತಿ ಎಂದು ನೆಪ ಹೇಳುತ್ತಾ, ದಿನ ದೂಡುತ್ತಿರುವುದು ದಿನನಿತ್ಯದ ಜೀವನ ಸಾಗಿಸುವ ಕೆಲ ಹೊಟೇಲ್‌ಗಳು ನೀರಿಲ್ಲದೆ ವ್ಯಾಪಾರ ಸ್ಥಗಿತಗೊಳಿಸಿವೆ. ನೀರಿಗಾಗಿ ಜಾನುವಾರುಗಳು ಇನ್ನಿತರ ಪ್ರಾಣಿಗಳು ಹಾತೊರೆಯುತ್ತಿವೆ. ಅದೇ ರೀತಿ ನಿತ್ಯ ಬಳಕೆಗೂ ನೀರಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದ ಸಾಲಿನ ಮಳೆ ತೀರಾ ಕಡಿಮೆಯಾಗಿ ಜಲಮೂಲಗಳು ಕ್ಷೀಣಿಸಿವೆ. ಪರಿಣಾಮ ಸಮಸ್ಯೆ ಉಲ್ಬಣಗೊಂಡಿದೆ. ಮಳೆ ಸುರಿಯದಿದ್ದಲ್ಲಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.

- ರಾಜುರೈ.