ಕುಶಾಲನಗರ, ಮಾ. ೨೨: ಕುಶಾಲನಗರ ಲಯನ್ಸ್ ಕ್ಲಬ್ ಮತ್ತು ಗೌಡ ಸಮಾಜ ಆಶ್ರಯದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು.
ಕುಶಾಲನಗರ ಗೌಡ ಸಮಾಜದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಶಿಬಿರವನ್ನು ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಉದ್ಘಾಟಿಸಿದರು.
ಶಿಬಿರದಲ್ಲಿ ಸುಮಾರು ೫೦ಕ್ಕೂ ಅಧಿಕ ರಕ್ತದಾನಿಗಳು ಪಾಲ್ಗೊಂಡಿದ್ದರು. ರಕ್ತನಿಧಿ ಕೇಂದ್ರದ ಡಾ. ಮಹಮ್ಮದ್ ಮತ್ತು ಸಿಬ್ಬಂದಿ ಕಾರ್ಯಕ್ರಮ ನಡೆಸಿಕೊಟ್ಟರು. ಲಯನ್ಸ್ ಕ್ಲಬ್ ಅಧ್ಯP್ಷÀ ಸುಮನ್ ಬಾಲಚಂದ್ರ, ಪ್ರಮುಖರಾದ ಟಿ.ಕೆ. ರಾಜಶೇಖರ್, ಕೊಡಗನ ಹರ್ಷ, ನಿತಿನ್ ಎನ್. ಗುಪ್ತ, ವಲಯ ಅಧ್ಯಕ್ಷÀ ಸತೀಶ್ ಕುಮಾರ್ ಗೌಡ, ಸಮಾಜದ ಪದಾಧಿಕಾರಿಗಳಾದ ದೊರೆ ಗಣಪತಿ, ಕಾಶಿ ಪೂವಯ್ಯ, ಕುಲ್ಲಚನ ಹೇಮಂತ್, ಗೌಡ ಸಮಾಜ ಮತ್ತು ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಇದ್ದರು.