ಮಡಿಕೇರಿ, ಮಾ. ೨೧: ಅರಣ್ಯ ವನ್ಯಜೀವಿ ಉತ್ಪನ್ನ ಹಿಂದಿರುಗಿಸುವ ವಿಚಾರಕ್ಕೆ ಸಂಬAಧಿಸಿದAತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರಕಾರ ೧೦ ದಿನಗಳ ಕಾಲಾವಕಾಶ ಕೋರಿದೆ.

೧೯೭೩ರ ವನ್ಯಜೀವಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ನಿಟ್ಟಿನಲ್ಲಿ ರಾಜ್ಯ ಸರಕಾರ ವನ್ಯಜೀವಿ ಉತ್ಪನ್ನಗಳನ್ನು ಅರಣ್ಯ ಇಲಾಖೆ ಸ್ವಾಧೀನಕ್ಕೆ ನೀಡುವಂತೆ ಸೂಚಿಸಿತ್ತು. ಇದರನ್ವಯ ಪ್ರಕ್ರಿಯೆಗಳನ್ನು ನಡೆಸಿ ಏಪ್ರಿಲ್ ೯ ರೊಳಗಿನ ಗಡುವು ನೀಡಿತ್ತು. ಕೊಡಗು ಜಿಲ್ಲೆಯಲ್ಲಿ ಪಾರಂಪರಿಕವಾಗಿ ಬಂದ ಉತ್ಪನ್ನಗಳನ್ನು ಹಿಂದಿರುಗಿಸಲು ವಿರೋಧಗಳು ವ್ಯಕ್ತವಾಗಿದ್ದವು. ಜಿಲ್ಲೆಯಲ್ಲಿ ವನ್ಯಜೀವಿ ಉತ್ಪನ್ನಕ್ಕೆ ಪೂಜನೀಯ ಸ್ಥಾನವಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿಯೂ ಉತ್ಪನ್ನಗಳನ್ನು ಬಳಸಿಕೊಳ್ಳಲಾಗುವುದು. ಈ ಹಿನ್ನೆಲೆ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ನ್ಯಾಯಾಲ ಯದ ಮೊರೆ ಹೋಗಲಾಗುವುದು ಎಂದು ತಿಳಿಸಿದ್ದರು. ಅನಂತರ ಸರಕಾರದ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಕ್ರಮದ ವಿರುದ್ಧ ವೀರಾಜಪೇಟೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕಕ್ಕಬ್ಬೆ ನಾಲಡಿಯ ಕೋಡಿಮಣಿಯಂಡ ಕುಟ್ಟಪ್ಪ ಅವರುಗಳು ಹೈಕೋರ್ಟ್ ವಕೀಲ ಕೊಟ್ಟಂಗಡ ಸೋಮಣ್ಣ ಅವರ ಮೂಲಕ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಕೋರಿ ತಡೆಯಾಜ್ಞೆಯೂ ದೊರೆತು ತಾ. ೧೮ಕ್ಕೆ ಮೊದಲ ವಿಚಾರಣೆ ನಡೆದಿದೆ.

ಸರಕಾರದ ಪರ ವಕಾಲತ್ತು ವಹಿಸಿದ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ಸರಕಾರದಿಂದ ಆಕ್ಷೇಪಣೆ ಸಲ್ಲಿಸಲು ೧೦ ದಿನಗಳ ಕಾಲಾವಕಾಶ ಬೇಕೆಂದು ಕೋರಿದರು. ನ್ಯಾಯಾಧೀಶರು ಮನವಿಯನ್ನು ಪುರಸ್ಕರಿಸಿ ಕಾಲಾವಕಾಶವನ್ನು ನೀಡಿದ್ದು, ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ.