ಕೂಡಿಗೆ, ಮಾ. ೨೨: ಈ ಬಾರಿ ಸಿಹಿ ಗೆಣಸಿನ ಬೆಲೆ ಏರಿಕೆಯಾದ ಕಾರಣದಿಂದಾಗಿ ಕುಶಾಲನಗರ ತಾಲೂಕು ವ್ಯಾಪ್ತಿಯ ನೂರಾರು ರೈತರು ತಮ್ಮ ಕೊಳವೆ ಬಾವಿಯ ನೀರನ್ನು ಬಳಕೆ ಮಾಡಿಕೊಂಡು ಸಹಿ ಗೆಣಸನ್ನು ಬೆಳೆಯುತ್ತಿದ್ದಾರೆ. ಆದರೆ ಈ ಸಾಲಿನ ಬೇಸಿಗೆಯ ತಾಪಮಾನಕ್ಕೆ ಸಿಹಿ ಗೆಣಸು ಬಳ್ಳಿಗೆ ರೋಗ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರು ಔಷಧಿ ಸಿಂಪಡಣೆ ಕಾರ್ಯದಲ್ಲಿ ತೊಡಗಿದ್ದಾರೆ.

ಸಿಹಿ ಗೆಣಸಿನ ಬೆಲೆ ಒಂದು ಕೆ.ಜೆ.ಗೆ ರೂ. ೧೭ ರಿಂದ ರೂ. ೧೮ ರವರೆಗೆ ನಿಗದಿಯಾಗಿದ್ದು, ಅಂತರ್ಜಲದ ನೀರಿನ ಮಟ್ಟ ಕುಸಿತದಿಂದಾಗಿ ಕಡಿಮೆ ನೀರನ್ನು ಉಪಯೋಗಿಸಿ ಉತ್ತಮವಾದ ಬೆಳೆಯನ್ನು ಬೆಳೆಯಲಾಗುತ್ತಿದೆ. ಈ ಬೆಳೆಗೆ ಕಡಿಮೆ ಪ್ರಮಾಣದ ಖರ್ಚಾಗುತ್ತದೆ ಎಂದು ಸಿಹಿ ಗೆಣಸು ಬೆಳೆಗಾರರಾದ ಮಂಜಣ್ಣ, ಕುಮಾರ್, ಸಣ್ಣೆಗೌಡ ತಿಳಿಸಿದ್ದಾರೆ.