ನಾಪೋಕ್ಲು, ಮಾ. ೨೨: ಬೆಟ್ಟಗೇರಿ ಭಗವತಿ ದೇವರ ವಾರ್ಷಿಕ ಉತ್ಸವ ತಾ. ೨೪ ಮತ್ತು ೨೫ ರಂದು ನಡೆಯಲಿದ್ದು, ತಾ. ೨೪ ರಂದು ಪಟ್ಟಣಿ, ಹಗಲು ವಿಶೇಷ ಪೂಜಾ ಕೈಂಕರ್ಯಗಳು, ಮಧ್ಯಾಹ್ನ ೧ ಗಂಟೆಗೆ ಕಟ್ರತಂಡ ಕುಟುಂಬದ ಭಂಡಾರದ ಮನೆಯಿಂದ ಭಂಡಾರ ಹೊರಡುವುದು, ೨ ಗಂಟೆಗೆ ಶಾಸ್ತಾವು ತೆರೆ, ಸಂಜೆ ೫ಕ್ಕೆ ಅಂಬಲದಲ್ಲಿ ಭಗವತಿ ಅಯ್ಯಪ್ಪ ತೆರೆ, ಆರು ಗಂಟೆಗೆ ದೇವರು ಬನಕ್ಕೆ ಹೋಗುವುದು, ರಾತ್ರಿ ೭.೩೦ ಗಂಟೆಗೆ ಚೌಂಡಿ ತೋತ ಹಾಗೂ ೯ ಗಂಟೆಗೆ ಮೇಲೇರಿ ಕುಂಟೆಗೆ ಅಗ್ನಿಸ್ಪರ್ಶ, ಮುಂಜಾನೆ ಮಂದಣ್ಣ ಮೂರ್ತಿ, ಅಂಜಿಕುಟ್ಟಿ ಮೂರ್ತಿ ಕರಿಬಾಳ ಹಾಗೂ ನುಚ್ಚಟ್ಟೆ ತೆರೆಗಳು ನಡೆಯಲಿವೆ. ತಾ. ೨೫ ರಂದು ಬೆಳಿಗ್ಗೆ ೧೧ ಗಂಟೆಗೆ ವಿಷ್ಣುಮೂರ್ತಿಯ ಕೆಂಡಸೇವೆ ಹಾಗೂ ಗುಳಿಗ ರಾಜನ ಕೋಲ, ಮಧ್ಯಾಹ್ನ ೧೨.೩೦ ಗಂಟೆಯಿAದ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.