ಗುಡ್ಡೆಹೊಸೂರು, ಮಾ. ೨೨: ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಕಳಿಯಾಟ ಕೋಲ ಕಾರ್ಯಕ್ರಮ ನಡೆಯಲಿದೆ.

ತಾ. ೨೪ ರಂದು ಬೆಳಿಗ್ಗೆ ೮ ಗಂಟೆ ಯಿಂದ ಗಣಪತಿ ಹವನ ಮಧ್ಯಾಹ್ನ ೧೨ ಗಂಟೆಗೆ ಶ್ರೀ ವೆಂಕಟರಮಣ ದೇವರ ಹರಿಸೇವೆ, ರಾತ್ರಿ ೮ ಗಂಟೆಗೆ ಕಳಿಯಾಟಕ್ಕೆ ಕೂಡುವುದು. ೧೦ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ಮತ್ತು ಗುರು ಕಾರಣ ದೈವ ಕೋಲ ನಡೆಯಲಿದೆ.

ತಾ. ೨೫ ರಂದು ಸೋಮವಾರ ಶ್ರೀ ಪೊಟ್ಟ ದೈವ, ಶ್ರೀ ರಕ್ತೇಶ್ವರಿ ದೈವ, ರಾತ್ರಿ ೮.೩೦ ರಿಂದ ಶ್ರೀ ವಿಷ್ಣುಮೂರ್ತಿ, ಶ್ರೀ ಧರ್ಮದೈವ, ಶ್ರೀ ಪಾಷಾಣ ಮೂರ್ತಿ ದೈವಗಳ ಕೊಲ ನಡೆಯ ಲಿದೆ. ತಾ. ೨೬ ರಂದು ರಾತ್ರಿ ೮ ಗಂಟೆಯಿAದ ಶ್ರೀ ವಿಷ್ಣುಮೂರ್ತಿ ಪಾಷಾಣಮೂರ್ತಿ, ಧರ್ಮದೈವದ ಕೋಲ ನಡೆಯಲಿದೆ. ರಾತ್ರಿ ೧೧ ಗಂಟೆಯಿAದ ಶ್ರೀ ದೈವದ ಕಲಶ ಹೊರುವುದು ನಂತರ ಹರಕೆ ಪ್ರಸಾದ ಮತ್ತು ತುಲಾಭಾರ ಸೇವೆಗಳು ನಡೆಯಲಿವೆೆ. ಮೂರು ದಿನಗಳ ಕಾಲ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆ ಯಲಿದೆ ಎಂದು ಗುಡ್ಡೆಹೊಸೂರಿನ ಕೆ.ಎಲ್. ರಾಮಣ್ಣ ಗೌಡ ತಿಳಿಸಿದ್ದಾರೆ.