ಪಾಲಿಬೆಟ್ಟ, ಮಾ. ೨೦: ಟೀಮ್ ಇಲೆವೆನ್ ಮಾಲ್ದಾರೆ ಮತ್ತು ಚೆನ್ನಯ್ಯನಕೋಟೆ ವತಿಯಿಂದ ಮೊದಲನೇ ವರ್ಷದ ವಿವಾಹಿತ ಮಹಿಳೆಯರ ಕ್ರಿಕೆಟ್ ಪಂದ್ಯಾಟ ಏಪ್ರಿಲ್ ೭ ರಂದು ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ನಡೆಯಲಿದೆ.

ಗೆಲುವು ಸಾಧಿಸಿದ ತಂಡಗಳಿಗೆ ಪ್ರಥಮ ಬಹುಮಾನ ರೂ. ೨೨,೨೨೨ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೧೧,೧೧೧ ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಪಂದ್ಯಾಟ ಐದು ಓವರ್‌ಗೆ ಸೀಮಿತವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.