ವಾಟ್ಸಾö್ಯಪ್‌ನಲ್ಲಿ ಬಂದ ಒಂದು ಸಂದೇಶ voಣe ಜಿoಡಿ ಃಎP & ಡಿe-eಟeಛಿಣ ಥಿouಡಿ oಟಜ ಅoಟಿgಡಿess ಒ.ಐ.ಂ. ಈ ಸಂದೇಶವನ್ನು ಓದುವಾಗ ಮತ್ತು ಮಹಾರಾಷ್ಟçದಲ್ಲಿ ಕಾಂಗ್ರೆಸ್‌ನ ೫೫ ಕಾರ್ಪೋರೇಟರ್‌ಗಳು ಬಿಜೆಪಿ ಸೇರ್ಪಡೆ ಕಾಂಗ್ರೆಸ್‌ಗೇ ಭಾರೀ ಮುಖಭಂಗ ಎಂದು ಸುದ್ದಿವಾಹಿನಿಯಲ್ಲಿ ಸುದ್ದಿಯೊಂದು ಪ್ರಸಾರವಾದದ್ದನ್ನು ಕೇಳಿದಾಗ ಮನಸಲ್ಲಿ ಮೂಡುವ ಪ್ರಶ್ನೆ, ನಾವು ಎಂತ ಕಾಲಘಟ್ಟದಲ್ಲಿ ಇದ್ದೇವೆ? ನಮ್ಮ ರಾಜಕೀಯ ಪಕ್ಷಗಳ ಅಧೋಗತಿ ತೋರಿಸುತ್ತದೆ. ಇಲ್ಲಿ ಮೂಡುವ ಪ್ರಶ್ನೆ ಏನೆಂದರೆ ಹಡಗೊಂದು ಮುಳುಗುತ್ತದೆ ಎಂದಾಗ ಎಲ್ಲರೂ ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ಸರ್ವೇ ಸಾಮಾನ್ಯ. ಇನ್ನೊಂದು ಚುನಾವಣೆ ಬಂದಾಗ ಈ ಹಡಗನ್ನು ಬಿಡುವುದಿಲ್ಲ ಎಂಬ ಗ್ಯಾರಂಟಿ ಏನು ಅಂತ ಇಲ್ಲಿ ಚುನಾವಣೆಯ ಸಮಯದಲ್ಲಿ ಪಕ್ಷಗಳು ಸರ್ವೇ ಸಾಧಾರಣವಾಗಿ ಒಂದು ಪಕ್ಷದಲ್ಲಿ ಟಿಕೆಟ್ ಸಿಗದಿದ್ದರೆ ಇನೊಂದು ಪಕ್ಷಕ್ಕೆ ಹಾರುವುದು ಅಥವಾ ಗೆಲ್ಲುವ ಅಭ್ಯರ್ಥಿಗಳನ್ನು ಸೆಳೆಯುವುದು ರಾಜಕೀಯದಲ್ಲಿ ಒಂದು ರೀತಿಯ ಪ್ರಕ್ರಿಯೆ ಇದು ಪ್ರಜಾಪ್ರಭುತ್ವದ ರಾಜಕೀಯದ ಚದುರಂಗದಾಟದಲ್ಲಿ ಎಲ್ಲಾ ಪಕ್ಷಗಳು ನಡೆಸುವ ದೊಂಬರಾಟ.

ಅಂದು ಅಟಲ್ ಬಿಹಾರಿ ವಾಜಪೇಯಿ ಅವರಂತಹ ನಾಯಕರು ಅಧಿಕಾರಕ್ಕೆ ಭಿಕ್ಷೆ ಬೇಡಲಿಲ್ಲ, ಎಂದೂ ಅಧಿಕಾರಕ್ಕಾಗಿ ತನ್ನ ತನವನ್ನು ಬಿಡಲಿಲ್ಲ. ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಬೇಕಾಗಿದ್ದ ಒಂದೇ ಒಂದು ಮತವನ್ನು ಪಡೆಯಲು ಕುದುರೆ ವ್ಯಾಪಾರ ಮಾಡಲಿಲ್ಲ. ಅಂದು ಅವರು ಮನಸು ಮಾಡಿದ್ದರೆ ಅಧಿಕಾರ ಉಳಿಸಿಕೊಳ್ಳುವುದು ಕಷ್ಟಕರವಾಗಿರಲಿಲ್ಲ. ಅಂದು ಲೋಕಸಭೆಯಲ್ಲಿ ಮಾಡಿದ ಭಾಷಣಕ್ಕೆ ಇಡಿ ವಿಶ್ವವೇ ತಲೆದೂಗಿದರೆ ಬಹುತೇಕ ಭಾರತಿಯರು ಕಣ್ಣೀರಿಟ್ಟರು. ಆಗ ಯಾವ ಕಾಂಗ್ರೆಸ್ ಪಕ್ಷ ಅವರನ್ನು ಅವಮಾನ ಮಾಡಿತೋ ಅದೇ ಪಕ್ಷಕ್ಕೆ ಸವಾಲ್ ಹಾಕಿ ನಿಮ್ಮನ್ನು ಸರ್ವನಾಶ ಮಾಡುತ್ತೇನೆ ಎಂದು ರಾಜೀನಾಮೆ ನೀಡಿ ಹೊರ ಬಂದು ಪ್ರಜಾಪ್ರಭುತ್ವದ ಗೌರವವನ್ನು ಎತ್ತಿ ಹಿಡಿದರು. ಚುನಾವಣೆ ಮೂಲಕ ಜನತಾ ನ್ಯಾಯಾಲಯದಲ್ಲಿ ನ್ಯಾಯ ಬೇಡಿ ಗೆದ್ದು ಮತೊಮ್ಮೆ ಪ್ರಧಾನಿ ಆದದ್ದು ಇತಿಹಾಸ. ಅವರೆಂದೂ ಪಕ್ಷವನ್ನು ಅಧಿಕಾರಕ್ಕೆ ತರಲು ವಾಮ ಮಾರ್ಗ ಹಿಡಿಯಲಿಲ್ಲ. ತಾವು ನಂಬಿದ ಸಿದ್ಧಾಂತವನ್ನು ಬಿಡಲಿಲ್ಲ. ಅದೇ ರೀತಿಯಲ್ಲಿ ಅಡ್ವಾಣಿ ಕೂಡ ಎಂದೂ ಅಧಿಕಾರಕ್ಕಾಗಿ ತನ್ನ ತನವನ್ನು ಬಿಡಲಿಲ್ಲ.

ಆದರೆ ಇಂದು ಪಕ್ಷವು ನಡೆಯುವ ಹಾದಿ ನೋಡಿದರೆ ಬಹಳ ಬೇಸರವಾಗುತ್ತೆ. ಮೋದಿಯಂತ ನಾಯಕರು ಇದ್ದು ಇಡೀ ದೇಶವೆ ಮೋದಿಮಯವಾದರೂ ಆ ಪಕ್ಷಕ್ಕೆ ಅಧಿಕಾರ ತಪ್ಪಿ ಹೋಗುತ್ತೆ ಎಂಬ ಭಯ ಬಹುವಾಗಿ ಕಾಡುತ್ತಿದೆ ಎಂದು ಅನಿಸುತ್ತಿದೆ. ಅದಕ್ಕಾಗಿ ಆ ಪಕ್ಷ ತನ್ನ ಸಿದ್ಧಾಂತವನ್ನು ಗಾಳಿಗೆ ತೂರಿದೆ. ಅನೇಕ ರಾಜ್ಯಗಳಲ್ಲಿ ಹಾಗೂ ಕರ್ನಾಟಕದಲ್ಲಿ ಕೂಡ ಆಪರೇಷನ್ ಕಮಲದಿಂದ ಆರಂಭವಾಯಿತು. ಅಧಿಕಾರಕ್ಕಾಗಿ ಚುನಾಯಿತ ಪ್ರತಿನಿಧಿ ಬೇಟೆ ಇನ್ನು ಮುಂದುವರಿದಿದೆ. ಲೋಕಸಭಾ ಚುನಾವಣೆ ವರ್ಷ ಇರುವಾಗಲೇ ಸೀಟ್‌ಗಳ ಲೆಕ್ಕಾಚಾರ ಆರಂಭವಾಗಿತ್ತು. ಅದನ್ನು ಪಡೆಯಲು ಎಲ್ಲಾ ತರಹದ ಕಸರತ್ತು ಎಲ್ಲ ಪಕ್ಷಗಳು ನಡೆಸುವುದು ಸರ್ವೇ ಸಾಮಾನ್ಯ. ಆದರೆ ಬಿಜೆಪಿಯಂತಹ ಒಂದು ರಾಷ್ಟಿçÃಯ ಪಕ್ಷ ಅದು ಶಿಸ್ತಿಗೆ ಹೆಸರಾದ ಪಕ್ಷ ಅದು ಜನಪ್ರಿಯತೆಯ ಉತ್ತುಂಗದಲ್ಲಿ ಇರುವಾಗ ಮೋದಿಯಂತ ಏಕಮೇವ ನಾಯಕರು ಇರುವಾಗ ಕೇವಲ ಚುನಾವಣೆಯಲ್ಲಿ ಅಧಿಕ ಸೀಟ್ ಪಡೆಯಲು ಕೆಲವು ಪಕ್ಷಗಳೊಂದಿಗೆ ಮೈತ್ರಿ, ಹಾಗೆ ಪಕ್ಷ ಬಿಟ್ಟವರನ್ನು ಪುನಃ ಓಲೈಸುವುದು ಎಷ್ಟು ಸೂಕ್ತ? ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಹತ್ತಾರು ವರ್ಷ ಪಕ್ಷದ ಹಾಗೂ ಅಧಿಕಾರದ ಹುದ್ದೆಗಳನ್ನು ಅನುಭವಿಸಿ ಚುನಾವಣೆ ಸಂದರ್ಭದಲ್ಲಿ ತಮಗೆ ಅಥವಾ ತಾವು ಹೇಳಿದವರಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣದಿಂದಲೋ ಪಕ್ಷ ಬಿಟ್ಟವರನ್ನು ಪುನಃ ಒಲಿಸುವುದು ಎಷ್ಟು ಸೂಕ್ತ? ಇಲ್ಲಿ ಕೆಲವರಿಗೆ ಅನ್ಯಾಯ, ಅಪಮಾನವಾಗುತ್ತೆ ಒಪ್ಪಿಕೊಳ್ಳುವ. ಅದೇ ಕಾರಣಕ್ಕೆ ಪಕ್ಷ ಬಿಡುವುದು ಎಷ್ಟು ಸೂಕ್ತ ನಾಯಕರೇನೂ ಪಕ್ಷ ಬದಲಿಸಿಕೊಂಡು ಬಿಡುತ್ತಾರೆ. ಅದೇ ಕಾರ್ಯಕರ್ತರ ಮನಸ್ಥಿತಿ ಏನಾಗುತ್ತೆ ಅಂತ ಚಿಂತೆ ನಾಯಕರುಗಳಿಗೆ ಇರುವುದಿಲ್ಲ. ಒಂದು ಚುನಾವಣೆಯಲ್ಲಿ ಪಕ್ಷ ಬಿಟ್ಟ ನಾಯಕರಿಗೆ ಧಿಕ್ಕಾರ ಇನೊಂದು ಚುನಾವಣೆಯಲ್ಲಿ ಜಯಕಾರ. ಇಂಥ ಮುಜುಗರ ಪರಿಸ್ಥಿತಿ ಅವನಿಗೆ. ಏಕೆಂದರೆ ಅವನೊಬ್ಬ ನಿಷ್ಠಾವಂತ ಕಾರ್ಯಕರ್ತ. ಅವನು ಬಿಟ್ಟರೂ ಅಥವಾ ಬಂದರೂ ಕೇಳುವವರಿಲ್ಲ. ಅವನ ಕೆಲಸ ಕೇವಲ ಜಯಕಾರ ಅಥವಾ ಧಿಕ್ಕಾರ ಹಾಕುವುದು, ಪೋಸ್ಟರ್ ಅಂಟಿಸುವುದು, ಬಾವುಟ ಕಟ್ಟುವುದು ಮಾತ್ರ ಅವನ ಕೆಲಸ.

ಸಂದರ್ಭಕ್ಕೆ ತಕ್ಕಂತೆ ತಮ್ಮ ಅಜೆಂಡಾದಲ್ಲಿ ಬದಲಾವಣೆ ಕಂಡುಕೊಳ್ಳುತ್ತಾರೆ. ಕರ್ನಾಟಕದಲ್ಲಿ ಬಿಜೆಪಿ ಜಾತ್ಯತೀತ ಸಿದ್ಧಾಂತ ಹೊಂದಿರುವ ಜನತಾದಳ ಒಟ್ಟಿಗೆ ಮೈತ್ರಿ ಮಾಡಿಕೊಂಡಿದೆ. ಪಕ್ಷದ ನಾಯಕರು ಬಿಜೆಪಿಯನ್ನು ಟೀಕಿಸಿದಷ್ಟು ಬೇರೆ ಯಾರು ಟೀಕಿಸಲಿಲ್ಲ. ಬಿಹಾರದಲ್ಲಿ ನಿತೀಶ ಕುಮಾರ್ ಅವರೊಡನೆ ಮೈತ್ರಿ, ಅವರು ಮೊದಲು ಬಿಜೆಪಿ ಒಟ್ಟಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಿ ಸಮಯ ಸಂದರ್ಭಕ್ಕೆ ರಾಜಕೀಯ ಮಾಡುವವರು. ಅಂತವರ ಒಟ್ಟಿಗೆ ಪುನಃ ಮೈತ್ರಿ ಮಾಡಿಕೊಂಡರೆ ರಾಜಕೀಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ. ಇಲ್ಲಿ ಮೂಡುವ ಪ್ರಶ್ನೆ ಏನೆಂದರೆ ಬಿಜೆಪಿಯಂತ ಪಕ್ಷ ತಳ ಮಟ್ಟದಿಂದ ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಕ್ಷ. ವಾಜಪೇಯಿ, ಅಡ್ವಾಣಿ ಅಂತ ನಾಯಕರ ಕನಸಿನ ಪಕ್ಷ ನಿರಂತರ ಸೋಲಿನ ನಡುವೆ ಗೆಲುವಿನ ದಡ ಸೇರಿಸಿದ್ದಾರೆ. ಅನೇಕ ರಾಜ್ಯಗಳಲ್ಲಿ ತಳ ಮಟ್ಟದಿಂದ ಬಂದು ಅಧಿಕಾರ ಪಡೆದುಕೊಂಡಿದೆ. ಈಗಾಗಲೇ ಅನೇಕ ಕಾಂಗ್ರೆಸ್ ನಾಯಕರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿ ಅನೇಕ ವರ್ಷಗಳ ಕಾಲ ಒಂದು ಸಿದ್ಧಾಂತದÀ ಅಡಿಯಲ್ಲಿ ಕೆಲಸ ಮಾಡಿದವರು ಚುನಾವಣೆ ಬಂದಾಗ ಇನ್ನೊಂದು ಪಕ್ಷಕ್ಕೆ ಸೇರುವುದು ಎಷ್ಟು ಸಮಂಜಸ. ಇಂತಹ ರಾಜಕಾರಣಿಗಳು ಪಕ್ಷದ ಮೂಲಕ್ಕೆ ಧಕ್ಕೆ ಉಂಟು ಮಾಡುತ್ತಾರೆ. ಇನ್ನು ಕೆಲವು ಪಕ್ಷಗಳು ಒಂದು ಕಾಲನ್ನು ಮೈತ್ರಿ ಕೂಟವಾದ ಎನ್‌ಡಿಎದಲ್ಲಿ ಮತ್ತೊಂದು ಕಾಲನ್ನು ಇಂಡಿಯಾ ಮೈತ್ರಿ ಕೂಟದಲ್ಲಿ ಇರಿಸಿದ್ದರು. ಯಾವಾಗ ಶ್ರೀ ರಾಮನ ಪ್ರತಿಷ್ಠಾಪನೆ ಆಯಿತೊ ಅನೇಕರು ಇಂಡಿಯಾ ಮೈತ್ರಿ ಕೂಟ ಸೇರಿದರೆ ಇನ್ನು ಕೆಲವು ನಾಯಕರು ಇಂಡಿಯಾ ಮೈತ್ರಿ ಕೂಟದಿಂದ ಹೊರಗೆ ಬಂದು ಕಾದು ನೋಡುವ ತಂತ್ರ ಅನುಸರಿಸಿದರು. ಈಗ ರಾಜಕಾರಣ ವ್ಯಾಪಾರವಾಗಿ ಬದಲಾವಣೆಯಾಗಿದೆ.

೭೦-೮೦ ದಶಕದಲ್ಲಿ ರಾಷ್ಟçದಲ್ಲಿ ಕಡಿಮೆ ಅಂದರೆ ೫೦ಕ್ಕೂ ಮೇಲೆ ಪ್ರಧಾನಿ ಆಗುವ ಅರ್ಹತೆ ಇರುವ ಅಭ್ಯರ್ಥಿಗಳಿದ್ದರು. ರಾಜ್ಯಗಳಲ್ಲಿ ಅಷ್ಟೇ ಪ್ರಮಾಣದಲ್ಲಿ ಮುಖ್ಯಮಂತ್ರಿ ಆಗುವ ಅಭ್ಯರ್ಥಿಗಳಿದ್ದರು. ಈಗ ಒಬ್ಬನೇ ಒಬ್ಬ ಅಭ್ಯರ್ಥಿ ಕಾಣುವುದಿಲ್ಲ. ಏಕೆಂದರೆ ರಾಜಕೀಯ ಇಂದು ಉದ್ದಿಮೆ ಆಗಿ ಪರಿವರ್ತನೆ ಆಗಿದೆ. ಅದು ಚಳವಳಿ ಆಗಿ ಉಳಿದಿಲ್ಲ. ದೇಶದಲ್ಲಿ ಇಂದು ಬಿಜೆಪಿ ಒಂದೇ ದೊಡ್ಡ ರಾಷ್ಟಿçÃಯ ಪಕ್ಷವಾಗಿದೆ. ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗಿ ಪರಿವರ್ತನೆ ಆಗಿದೆ. ಕಮ್ಯುನಿಸ್ಟ್ ಇಂದು ತನ್ನ ನೆಲೆ ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯು ಗೆಲುವಿನ ಆಸೆಗೆ ಕಂಡ ಕಂಡವರಿಗೆ ಮಣೆ ಹಾಕಿದರೆ ಮುಂದೆ ಕಾಂಗ್ರೆಸ್ ದಾರಿ ಹಿಡಿಯುವುದರಲ್ಲಿ ಸಂಶಯವಿಲ್ಲ. ಹಿಂದೆ ಒಂದು ಬಾರಿ ಅಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿ ಬಳ್ಳಾರಿಯ ಗಣಿ ದೊರೆಗಳಿಗೆ ಪಕ್ಷದಲ್ಲಿ ಜಾಸ್ತಿ ಸಲುಗೆ ನೀಡಿ ಪಕ್ಷಕ್ಕೆ ಆದ ಮುಖಭಂಗ ಇನ್ನೊಮ್ಮೆ ಬಾರದಿರಲಿ. ಬಲವಾದ ರಾಷ್ಟç ನಿರ್ಮಾಣಕ್ಕೆ ದೇಶಕ್ಕೆ ಎರಡು ರಾಜಕೀಯ ಪಕ್ಷಗಳ ಅವಶ್ಯಕತೆ ಇದೆ. ಚುನಾವÀಣೆ ಸಮಯದಲ್ಲಿ ಎಲ್ಲರೂ ಗೆಲ್ಲುವÀ ಕುದುರೆಯ ಬಾಲ ಹಿಡಿದರೆ ಪ್ರಬಲ ವಿರೋಧ ಪಕ್ಷ ಇಲ್ಲದಾಗುತ್ತದೆ. ಆಡಳಿತ ಪಕ್ಷ ಎಷ್ಟು ಬಲಿಷ್ಠವಾಗಿರುತ್ತದೋ ಅಷ್ಟೇ ಬಲಿಷ್ಠವಾಗಿ ವಿರೋಧ ಪಕ್ಷದ ಅವಶ್ಯಕತೆ ಇರುತ್ತದೆ.

- ಬಾಳೆಯಡ ಕಿಶನ್ ಪೂವಯ್ಯ

ವಕೀಲರು ಮತ್ತು ನೋಟರಿ, ಮಡಿಕೇರಿ ಮೊ.೯೪೪೮೮೯೯೫೫೪