ಕುಶಾಲನಗರ, ಮಾ. ೨೦: ಕಾರೊಂದು ಬೈಕಿಗೆ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಬೈಲಕುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಚಿಟ್ಟೆನಹಳ್ಳಿ ಬಳಿ ಹೆದ್ದಾರಿಯಲ್ಲಿ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ಮನು ಕುಮಾರ್ (೩೦) ಮತ್ತು ಚುಂಚನಕಟ್ಟೆ ನಿವಾಸಿ ಹೇಮಂತ್ (೨೫) ಮೃತಪಟ್ಟ ದುರ್ದೈವಿಗಳು.

ಕಗ್ಗುಂಡಿಯಿAದ ಪಿರಿಯಾಪಟ್ಟಣ ಮೂಲಕ ಬೈಲಕುಪ್ಪೆ ಕಡೆಗೆ ಬರುತ್ತಿದ್ದ ಬೈಕ್ (ಏಂ-೪೫-ಊ-೫೦೭೮) ಗೆ ಕುಶಾಲನಗರ ಕಡೆಯಿಂದ ಪಿರಿಯಾಪಟ್ಟಣ ಕಡೆಗೆ ತೆರಳುತ್ತಿದ್ದ ಕಾರು (ಏಂ-೦೯ ಒಉ-೩೬೮೩) ಡಿಕ್ಕಿಯಾಗಿ ಬೈಕ್ ಸವಾರ ಮನುಕುಮಾರ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ವೃತ ದೇಹವನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಯಿತು. ಹಿಂಬದಿ ಸವಾರ ಹೇಮಂತ್ ತೀವ್ರ ಗಾಯಗೊಂಡು ಪಿರಿಯಾಪಟ್ಟಣ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಪ್ರಯೋಜನವಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೈಲಕುಪ್ಪೆ ಪೊಲೀಸರು ಕಾರು ಚಾಲಕ ಚೇತನ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.