ಮಡಿಕೇರಿ, ಮಾ. ೨೧: ಕೃಷಿ ಚಟುವಟಿಕೆಗಳಿಗೆ ನದಿ ಹಾಗೂ ನದಿಮೂಲಗಳಿಂದ ನೀರು ಬಳಸದಂತೆ ಜಿಲ್ಲಾಡಳಿತ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಗೆ ವಿರೋಧ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಬಹುಜನ ಸಮಾಜ ಪಕ್ಷ, ಕೂಡಲೇ ಆದೇಶವನ್ನು ಹಿಂಪಡೆಯುವAತೆ ಒತ್ತಾಯಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್, ಕೊಡಗಿನ ಆರ್ಥಿಕತೆಯು ಕಾಫಿ ಕೃಷಿಯನ್ನೇ ಅವಲಂಬಿಸಿದ್ದು, ವರ್ಷಕ್ಕೊಮ್ಮೆ ಕಾಫಿ ಗಿಡಗಳಿಗೆ ನೀರು ಹಾಯಿಸಬೇಕಾಗುತ್ತದೆ. ಸೂಕ್ತ ಸಮಯದಲ್ಲಿ ನೀರು ಒದಗಿಸದಿದ್ದರೆ ಮುಂದಿನ ವರ್ಷದ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಆರ್ಥಿಕತೆ ಬುಡಮೇಲಾಗಲಿದೆ. ಇದರಿಂದ ಬೆಳೆಗಾರರು ಮಾತ್ರವಲ್ಲ, ಕಾರ್ಮಿಕ ವರ್ಗವೂ ಸಮಸ್ಯೆಗೆ ಸಿಲುಕಲಿದೆ. ಮಾರ್ಚ್ನಲ್ಲಿ ಮಳೆಯಾಗದಿದ್ದರೆ ನೀರಾವರಿ ಮೂಲಕ ಗಿಡಗಳನ್ನು ರಕ್ಷಿಸಿಕೊಳ್ಳಬೇಕಿದ್ದು, ಬೆಳೆಗಾರರರ ಸಂಕಷ್ಟ ಅರಿತು ಜಿಲ್ಲಾಧಿಕಾರಿ ತಮ್ಮ ಆದೇಶವನ್ನು ಹಿಂಪಡೆಯಬೇಕೆAದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಪಕ್ಷದ ಉಸ್ತುವಾರಿ ಕಳ್ಳೀರ ಹರೀಶ್, ಜಿಲ್ಲಾ ಉಪಾಧ್ಯಕ್ಷೆ ಹಾಜಿರಾಬಿ, ನಗರಾಧ್ಯಕ್ಷ ಪ್ರದೀಶ್, ನಗರ ಉಪಾಧ್ಯಕ್ಷೆ ರೋಹಿಣಿ ಹಾಜರಿದ್ದರು.