ಕೂಡಿಗೆ, ಮಾ . ೨೧ : ಭವಿಷ್ಯದ ನಾಯಕರಿಗೆ ಸೇನಾ ನಾಯಕರಿಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಕರ್ನಾಟಕದ ಕಾರವಾರ ನೌಕಾನೆಲೆಯ ೧೩ ಅಧಿಕಾರಿಗಳ ತಂಡ ಕೂಡಿಗೆ ಸೈನಿಕ ಶಾಲೆಗೆ ಭೇಟಿ ನೀಡಿತು. ಶಾಲೆಗೆ ಆಗಮಿಸಿದ ಅಧಿಕಾರಿಗಳು ಸೈನಿಕ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಭಾರತೀಯ ನೌಕಾ ಇಲಾಖೆಯಲ್ಲಿ ಅಧಿಕಾರಿಗಳಾಗಿ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಿಸಿದರು.

ಕಾರವಾರದ ನೌಕಾನೆಲೆಯ ಉಪ ನೆಲೆ ವಿಕ್ಚುವಲಿಂಗ್ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಜೆ. ಸುಬ್ಬಯ್ಯ ಶಾಲಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ತಮ್ಮ ವಿದ್ಯಾಭ್ಯಾಸ ಮತ್ತು ಕರ್ತವ್ಯಕ್ಕೆ ಬದ್ಧರಾಗಿ ತಮ್ಮ ಭವಿಷ್ಯವನ್ನು ಭಾರತೀಯ ಸೇನೆಯಲ್ಲಿ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕೆಂದರು. ನೌಕಾ ಸೇನೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ರ‍್ಯಾಲಿಯ ಮಹತ್ವವನ್ನು ಕುರಿತು ಪರಿಚಯಿಸಿದರು. ಇದರೊಂದಿಗೆ ಭಾರತೀಯ ನೌಕಾ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಇರುವ ವಿವಿಧ ವೃತ್ತಿಪರ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಕಮಾಂಡರ್ ಸಜ್ವಾನ್ ಕೋಕಿಲಾ ಅವರು ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಗಳಾಗಿ ಸೇರಲು ಮಹಿಳೆಯರಿಗೆ ಲಭ್ಯವಿರುವ ಹೆಚ್ಚಿನ ಅವಕಾಶಗಳ ಕುರಿತು ಮಾತನಾಡಿದರು

ಲೆಫ್ಟಿನೆಂಟ್ ಆವಂತಿಕಾ ಅವರು ಐಎನ್‌ಎಸ್ ವಿಕ್ರಮಾದಿತ್ಯ ಹಡಗಿನಲ್ಲಿ ಸಹಾಯಕ ಲಾಜಿಸ್ಟಿಕ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವಾಗ ಪಡೆದ ತಮ್ಮ ಅಮೂಲ್ಯ ಅನುಭವಗಳನ್ನು ಹಂಚಿಕೊAಡರು, ಇದು ಶಾಲೆಯ ವಿದ್ಯಾರ್ಥಿನಿಯರು ಭಾರತೀಯ ಸಶಸ್ತç ಪಡೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಭಾರತೀಯ ನೌಕಾಪಡೆಯಲ್ಲಿ ವೃತ್ತಿಜೀವನವನ್ನು ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸಿತು. ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ರವರು ರ‍್ಯಾಲಿಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿಗಳನ್ನು ಸ್ವಾಗತಿಸಿ, ಭಾರತೀಯ ಸೇನೆಯ ಸಶಸ್ತçಪಡೆಗಳ ಭವಿಷ್ಯವನ್ನು ರೂಪಿಸುವಲ್ಲಿ ಇಂತಹ ಸಂವಾದಗಳು ಅವಶ್ಯವಾಗಿವೆ ಎಂದು ಹೇಳಿದರು. ಕರ್ನಲ್ ಅಮರ್ ಜೀತ್ ಸಿಂಗ್ ಮತ್ತು ಕಮಾಂಡರ್ ಎಸ್‌ಎಸ್‌ಪಿ ಸಿಂಗ್, ಕಮಾಂಡರ್ ರವೀಂದ್ರ ಕುಮಾರ್ ನಡುವೆ ಸೌಹಾರ್ದ ಭೇಟಿಯ ದ್ಯೋತಕವಾಗಿ ಪರಸ್ಪರ ಸ್ಮರಣಿಕೆಗಳ ವಿನಿಮಯ ಮಾಡಿಕೊಳ್ಳಲಾಯಿತು.