ವೀರಾಜಪೇಟೆ, ಮಾ. ೨೦: ಮಲೆತಿರಿಕೆಬೆಟ್ಟ ಸಮೀಪದ ಸುಂಕದಕಟ್ಟೆಯ ಶ್ರೀ ಮುತ್ತಪ್ಪ ದೇವಾಲಯದ ಮೂರನೇ ವರ್ಷದ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ವಾರ್ಷಿಕೋತ್ಸವದ ಅಂಗವಾಗಿ ತೆಲುಗರ ಬೀದಿಯ ಶ್ರೀ ಮಾರಿಯಮ್ಮ ದೇವಾಲಯದಿಂದ ಮಲೆತಿರಿಕೆ ಬೆಟ್ಟದ ಮುತ್ತಪ್ಪ ದೇವಾಲಯದವರೆಗೆ ಕಳಶ ಮೆರವಣಿಗೆ ನಡೆಯಿತು. ನಂತರ ಮುತ್ತಪ್ಪ, ಗುಳಿಗ ಮತ್ತಿತರ ದೇವರ ತೆರೆ ಹಾಗೂ ಅನ್ನಸಂತರ್ಪಣೆ ನೆರವೇರಿತು.