ಮಡಿಕೇರಿ, ಮಾ. ೨೧: ತಾ. ೧೫ ರಂದು ಪೊನ್ನಂಪೇಟೆ ತಾಲೂಕು ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆ ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆಸಲಾಯಿತು.
ಸಮಿತಿಯ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಕಾಳಿಮಾಡ ಪ್ರಶಾಂತ್ ಅವರು ಈ ಸಂದರ್ಭ ಮಾತನಾಡಿ ವಿವಿಧ ಗ್ಯಾರೆಂಟಿ ಯೋಜನೆಗಳಾದ ಗೃಹಲಕ್ಷಿö್ಮ, ಶಕ್ತಿ, ಗೃಹಜ್ಯೋತಿ, ಯುವನಿಧಿ ಹಾಗೂ ಉಚಿತ ಪಡಿತರ ಯೋಜನೆಗಳನ್ನು ಸಕಾಲದಲ್ಲಿ ಅಧಿಕಾರಿಗಳು ಜನರಿಗೆ ತಲುಪಿಸುವಂತೆ ಸಹಕರಿಸುವಂತೆ ಕೋರಿದರು. ಪೊನ್ನಂಪೇಟೆ ತಾಲೂಕಿನಲ್ಲಿ ೨೦೪ ಮಂದಿ ಗೃಹಜ್ಯೋತಿ ಫಲಾನುಭವಿಗಳಲ್ಲಿ ಸಮಸ್ಯೆ ಉಂಟಾಗಿದ್ದು ಒಂದೇ ಫಲಾನುಭವಿಗೆ ಹಲವು ಮನೆಗಳಿರುವ ಕಾರಣ ಈ ಸಮಸ್ಯೆ ಸೃಷ್ಟಿಯಾಗಿರುವುದಾಗಿ ತಾಲೂಕಿನ ಸಹಾಯಕ ಕಾರ್ಯಪಾಲಕ ಅಭಿಯಂತರರು ಮಾಹಿತಿ ಇತ್ತರು. ಗೃಹಲಕ್ಷಿö್ಮÃ ಯೋಜನೆಯ ೪೭೬ ಫಲಾನುಭವಿಗಳಿಗೆ ಯೋಜನೆಯ ಹಣ ದೊರಕದೆ ಇದ್ದು, ಮೊಬೈಲ್ ಫೋನ್ ಸಂಖ್ಯೆ ಬದಲಾದ ಕಾರಣ ಒ.ಟಿ.ಪಿ ಹಳೆ ಸಂಖ್ಯೆಗೆ ಹೋಗುತ್ತಿರುವ ಕಾರಣ ಈ ಸಮಸ್ಯೆ ಉಂಟಾಗಿದ್ದು, ಫೋನ್ ಸಂಖ್ಯೆ ಬದಲಾಯಿಸಿದ್ದಲ್ಲಿ ಸಮಸ್ಯೆ ಬಗೆಹರಿಯುವುದಾಗಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಅಧಿಕಾರಿಗಳು ಮಾಹಿತಿ ಇತ್ತರು. ಉಚಿತ ಪಡಿತರ ಯೋಜನೆಯಲ್ಲಿ ೨೧೪ ಮಂದಿಯ ಇ.ಕೆ.ವೈ.ಸಿ ಆಗದೆ ಇರುವ ಕಾರಣ ಹಣ ಜಮೆಗೆ ಸಮಸ್ಯೆಯಾಗಿರುವುದಾಗಿ ಆಹಾರ ನಿರೀಕ್ಷಕರು ಮಾಹಿತಿ ಇತ್ತರು.
ಸಭೆಯಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.