ಮಡಿಕೇರಿ, ಮಾ. ೨೦: ಕರ್ನಾಟಕ ಲೇಖಕಿಯರ ಸಂಘ ಕೊಡಗು ಜಿಲ್ಲಾ ಘಟಕ ವತಿಯಿಂದ ನೆಲ್ಯಹುದಿಕೇರಿಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕವಿಗೋಷ್ಠಿ ಹಾಗೂ ಫ್ಯಾಷನ್ ಶೋ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಿರಿ ಬಳಗ ಅಧ್ಯಕ್ಷ ಲೋಕೇಶ್ ಸಾಗರ್, ಮಹಿಳೆಯರು ಸಾಹಿತಿ ಕೊಡಗಿನ ಗೌರಮ್ಮನವರ ಆದರ್ಶಗಳನ್ನು ಪಾಲಿಸಿಕೊಂಡು ಬರಬೇಕು. ಅವರ ವಿಚಾರಧಾರೆಗಳನ್ನು ಮಾದರಿಯಾ ಗಿಟ್ಟುಕೊಂಡಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸಬಹುದು. ಇಂದು, ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿಯಾಗಿ ಜೀವನ ನಡೆಸುವಷ್ಟು ಸಬಲರಾ ಗಿದ್ದಾರೆ. ಇದು ಮಹಿಳಾ ಸಾಮರ್ಥ್ಯ ವನ್ನು ಎತ್ತಿ ತೋರಿಸುತ್ತದೆ. ಮಹಿಳೆ ಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಚ್ಚು ಹೆಚ್ಚು ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಪ್ರಾಧ್ಯಾಪಕಿ ಡಾ. ಎ.ಎಸ್. ಪೂವಮ್ಮ ಮಾತನಾಡಿ, ಇಂದು ಪ್ರತೀ ಕ್ಷೇತ್ರದಲ್ಲಿಯೂ ಮಹಿಳೆ ತನ್ನ ಛಾಪನ್ನು ಮೂಡಿಸುತ್ತಾ ಸ್ವಾವಲಂಬಿಯಾಗಿದ್ದು, ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತು ಪಡಿಸುತ್ತಿದ್ದಾಳೆ. ಪ್ರತಿಯೊಂದು ಕೌಟುಂಬಿಕ ಹಾಗೂ ಸಾಮಾಜಿಕವಾಗಿ ತೂಗಿಸಿಕೊಂಡು ಹೋಗುವ ಜಾಣ್ಮೆ ಮಹಿಳೆಯರು ಹೊಂದಿದ್ದಾರೆ ಎಂದರು.
ಸಾಹಿತಿ ವಿಜಯ ವಿಷ್ಣು ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗಿನಲ್ಲಿ ಉತ್ತಮ ಸಾಹಿತ್ಯ ವಾತಾವರಣವಿದ್ದು ಅದನ್ನು ಬಳಸಿಕೊಂಡು ಸಶಕ್ತರಾಗಬೇಕು. ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಗುರುತಿಸುವಂತಹ ಕೃತಿಗಳ ರಚನೆಯಾಗಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಸಾಹಿತ್ಯದೆಡೆ ಇನ್ನಷ್ಟು ಅಭಿರುಚಿ ತೋರಿಸಬೇಕು ಎಂದು ಕರೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಶರ್ಮಿಳಾ ರಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭ ಸಾಹಿತಿ ಗೀತಾಮಂದಣ್ಣ ರಚಿಸಿದ ‘ಮುಚ್ಚಟೆ ಒಲವು' ಕಾದಂಬರಿ ಹಾಗೂ ಯುವ ಬರಹಗಾರ್ತಿ ಯಶಸ್ವಿ ಗಣೇಶ್ ರಚನೆಯ 'ಮೌನರಾಗ' ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಕೊಡಗಿನಲ್ಲಿ ಉತ್ತಮ ಸಾಹಿತ್ಯ ವಾತಾವರಣವಿದ್ದು ಅದನ್ನು ಬಳಸಿಕೊಂಡು ಸಶಕ್ತರಾಗಬೇಕು. ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಗುರುತಿಸುವಂತಹ ಕೃತಿಗಳ ರಚನೆಯಾಗಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಸಾಹಿತ್ಯದೆಡೆ ಇನ್ನಷ್ಟು ಅಭಿರುಚಿ ತೋರಿಸಬೇಕು ಎಂದು ಕರೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಶರ್ಮಿಳಾ ರಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭ ಸಾಹಿತಿ ಗೀತಾಮಂದಣ್ಣ ರಚಿಸಿದ ‘ಮುಚ್ಚಟೆ ಒಲವು' ಕಾದಂಬರಿ ಹಾಗೂ ಯುವ ಬರಹಗಾರ್ತಿ ಯಶಸ್ವಿ ಗಣೇಶ್ ರಚನೆಯ 'ಮೌನರಾಗ' ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.
ಜಿಲ್ಲೆಯ ಹಲವೆಡೆಗಳಿಂದ ಆಗಮಿಸಿದ ಲೇಖಕಿಯರಿಂದ ಕವನ ವಾಚನ ಹಾಗೂ ವಿವಿಧತೆಯಲ್ಲಿ ಏಕತೆ ಘೋಷಣೆಯೊಂದಿಗೆ ವಸ್ತçವಿನ್ಯಾಸ ಕಾರ್ಯಕ್ರಮಗಳು ನಡೆದವು. ವೇದಿಕೆಯಲ್ಲಿ ಶರ್ಮಿಳಾ ರಮೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಲಾಕಾಳಪ್ಪ, ರೇಣುಕಾ ಸೋಮಯ್ಯ, ಕವಿತಾ, ಗೀತಾಂಜಲಿ, ಜಲಜ, ರಾಗಿಣಿ ಮುಂತಾದವರಿದ್ದರು. ಶರ್ಮಿಳಾ ರಮೇಶ್ ಪ್ರಾರ್ಥಿಸಿದರು. ಉಳುವಂಗಡ ಕಾವೇರಿ ಉದಯ ಸ್ವಾಗತಿಸಿ, ಜಯಲಕ್ಷಿö್ಮ ಹಾಗೂ ರಾಣಿ ರವೀಂದ್ರ ಕಾರ್ಯಕ್ರಮ ನಿರ್ವಹಿಸಿದರು. ಮಾಲಾಮೂರ್ತಿ ವಂದಿಸಿದರು.