ಪೊನ್ನಂಪೇಟೆ, ಮಾ. ೧೯: ಪೊನ್ನಂಪೇಟೆ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಮುಂಭಾಗ ಗೂಡ್ಸ್ ಆಟೋ (ಕೆ.ಎಲ್. ೭೨, ೩೯೫೨) ಹಾಗೂ ಟಿಪ್ಪರ್ (ಕೆ. ಎಲ್. ೧೮, ಎಫ್.೪೨೪೧) ನಡುವೆ ಅಪಘಾತ ಸಂಭವಿಸಿದ್ದು, ಗೂಡ್ಸ್ ಆಟೋದಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗೂಡ್ಸ್ ಆಟೋ ಜಖಂಗೊAಡಿದೆ.

ಗೂಡ್ಸ್ ಆಟೋ ಟಿ. ಶೆಟ್ಟಿಗೇರಿಯಿಂದ ಪೊನ್ನಂಪೇಟೆಗೆ, ಟಿಪ್ಪರ್ ಪೊನ್ನಂಪೇಟೆಯಿAದ ಕಾನೂರು ಕಡೆಗೆ ತೆರಳುತ್ತಿದ್ದಾಗ ಆಟೋ ನಿಯಂತ್ರಣ ಕಳೆದುಕೊಂಡು ಟಿಪ್ಪರ್‌ಗೆ ಮುಖಾಮುಖಿ ಗುದ್ದಿದೆ. ಟಿಪ್ಪರ್ ಚಾಲಕ ಅಕ್ರಂ ಪಾಷ ಎಂಬವರು ಗೂಡ್ಸ್ ಆಟೋ ಚಾಲಕನ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊನ್ನಂಪೇಟೆಯ ಬಸ್ ನಿಲ್ದಾಣದಿಂದ ರಾಮಕೃಷ್ಣ ಆಶ್ರಮದವರೆಗೆ ಕೆಲವರು ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವುದರಿಂದ ವಾಹನ ಸಂಚಾರಕ್ಕೆ ಪ್ರತಿದಿನ ಅಡಚಣೆ ಉಂಟಾಗುತ್ತಿದ್ದು, ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿರುತ್ತವೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಂಚಾರ ವ್ಯವಸ್ಥೆ ಸುಗಮಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.