ವೀರಾಜಪೇಟೆ, ಮಾ. ೨೦: ಹೆಗ್ಗಳ ಗ್ರಾಮದ ತಂಬುರಾನ್ ಫ್ರೆಂಡ್ಸ್ ವತಿಯಿಂದ ಮೂರು ದಿನಗಳ ಕಾಲ ಗ್ರಾಮಾಂತರ ಮಟ್ಟದ ಸೂಪರ್ ೯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ನಡೆಯಿತು.

ಅಂತಿಮ ಪಂದ್ಯಾಟದಲ್ಲಿ ನೆಲ್ಲಿಹುದಿಕೇರಿಯ ಗ್ಯಾಲಕ್ಸಿ ತಂಡವನ್ನು ಮಾಲ್ದಾರೆಯ ಪ್ಲೇ ಬಾಯ್ಸ್ ತಂಡ ಮಣಿಸಿ ನಗದು ಹಾಗೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಪAದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಸೈಕಲ್‌ನ್ನು ಮಾಲ್ದಾರೆ ತಂಡದ ರಿಯಾಜ್ ಪಡೆದುಕೊಂಡರು. ಕ್ರಿಕೆಟ್ ಪಂದ್ಯಾಟದ ಪ್ರಯುಕ್ತ ಮೈಸೂರಿನ ಮಣಿಪಾಲ್ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜಿಲ್ಲಾ ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹಾಗೂ ಸಮಾಜ ಸೇವಕರಿಗೆ ಸನ್ಮಾನ ಮಾಡಲಾಯಿತು. ತದನಂತರ ಸ್ಥಳೀಯ ಕಲಾವಿದರಿಂದ ಸಾÀಂಸ್ಕöÈತಿಕ ಕಾರ್ಯಕ್ರಮ ನಡೆಯಿತು.