ನಾಪೋಕ್ಲು, ಮಾ. ೨೦: ೨೦೨೨-೨೩ ನೇ ಸಾಲಿನಲ್ಲಿ ಕೈಗೊಂಡ ಸಾಕ್ಷರತಾ ಕಾರ್ಯಕ್ರಮ ದಡಿಯಲ್ಲಿ ಪರೀಕ್ಷೆ ಬರೆದ ಸಾಕ್ಷರರು ಎಂದು ಗುರುತಿಸಲಾದ ಮಡಿಕೇರಿ ತಾಲೂಕುಮಟ್ಟದ ನವ ಸಾಕ್ಷರರಿಗೆ ಸಾಕ್ಷರತಾ ಪ್ರಮಾಣ ಪತ್ರ ವಿತರಣಾ ಸಮಾರಂಭ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕಾರ್ಯಕ್ರಮದ ನೋಡೆಲ್ ಅಧಿಕಾರಿ ಬಿ.ಆರ್.ಪಿ. ಮಂಜುಳಾ ಚಿತ್ರಾಪುರ, ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಲಾ, ಮೇಕೇರಿ ಕ್ಲಸ್ಟರ್‌ನ ಸಿ.ಆರ್.ಪಿ. ಕಲ್ಪನಾ, ಆಶಾಕಾರ್ಯಕರ್ತೆಯರು, ಬೋಧಕರು ಹಾಜರಿದ್ದರು.