ಪೊನ್ನಂಪೇಟೆ, ಮಾ. ೨೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊನ್ನಂಪೇಟೆ ಕಾರ್ಯಕ್ಷೇತ್ರದ ನಿಸರ್ಗ ಜ್ಞಾನ ವಿಕಾಸ ಕೇಂದ್ರದ ಸಭೆಯು ಎಂ. ಜಿ. ನಗರದಲ್ಲಿ ನಡೆಯಿತು.

ಶ್ರೀ ದುರ್ಗಾ ಸಂಘದ ಅಧ್ಯಕ್ಷೆ ತಂಗಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಿಸರ್ಗ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಮನೆಯಪಂಡ ಶೀಲಾ ಬೋಪಣ್ಣ ಉದ್ಘಾಟಿಸಿ ಮಾತನಾಡಿ, ಮಹಿಳೆ ಯರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ, ಕ್ರಿಯಾ ಶೀಲತೆಯನ್ನು ಮೈಗೂಡಿಸಿಕೊಂಡು ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಗೋಣಿಕೊಪ್ಪಲು ಕಾವೇರಿ ಕಾಲೇಜು ಸಿಬ್ಬಂದಿ ಎಂ. ಎಂ.ಚನ್ನನಾಯಕ ಮಾತನಾಡಿ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ, ಸುಸಂಸ್ಕೃತರ ನ್ನಾಗಿ ರೂಪಿಸಬೇಕು ಎಂದರು.

ಈ ಸಂದರ್ಭ ಸಂಘದ ಸದಸ್ಯರು ಹಾಡು, ನೃತ್ಯ, ಆಶು ಭಾಷಣದ

ಮೂಲಕ ರಂಜಿಸಿದರು. ಸದಸ್ಯರಿಗೆ ಏರ್ಪಡಿಸಲಾಗಿದ್ದ ಬಾಂಬ್ ಇನ್ ದ ಸಿಟಿ ಸ್ಪರ್ಧೆಯಲ್ಲಿ ಸುಮನ್ ಪ್ರಥಮ, ಗಂಗಾಮಣಿ ದ್ವಿತೀಯ ಸ್ಥಾನ ಪಡೆದುಕೊಂಡರು.

ಶ್ರೀ ದುರ್ಗಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶ್ರೀದೇವಿ, ವಿಜಯಲಕ್ಷ್ಮಿ, ರಾಜರಾಜೇ ಶ್ವರಿ, ಭದ್ರಕಾಳಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭ ವಲಯ ಮೇಲ್ವಿಚಾರಕ ನರಸಿಂಹ ಮೂರ್ತಿ, ಸೇವಾ ಪ್ರತಿನಿಧಿ ಗೌರಿ, ಪೊನ್ನಂಪೇಟೆ ಎ, ಒಕ್ಕೂಟ ಅಧ್ಯಕ್ಷೆ ಸುಮನ್, ಒಕ್ಕೂಟದ ಪದಾಧಿಕಾರಿ ಬೆನಿಟ, ಶ್ರೀ ದುರ್ಗಾ ಸಂಘದ ಸದಸ್ಯರಾದ ಶೃತಿ, ಸರಳ, ಶೀಬ, ಪದ್ಮಿನಿ ಹಾಜರಿದ್ದರು. ಶಾರದ ಸ್ವಾಗತಿಸಿ, ಪ್ರೇಮ ಪ್ರಾರ್ಥಿಸಿ, ಜಯಂತಿ ನಿರೂಪಿಸಿ, ಸರಸ್ವತಿ ವಂದಿಸಿದರು.