ಕುಶಾಲನಗರ, ಮಾ.೨೦: ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿ ಹೆದ್ದಾರಿ ರಸ್ತೆಯಲ್ಲಿ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಸವಾರ ತೀವ್ರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸಲಾಗಿದೆ.
ಮಹಮ್ಮದ್ ಕುಯೂಂ ಎಂಬವರಿಗೆ ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಮ್ಮದ್ ಕುಯಂ ಅವರು ಸಾಗುತ್ತಿದ್ದ ಸ್ಕೂಟಿಗೆ (ಏಂ೧೨ ಖ೮೪೫೭) ಎದುರಿನಿಂದ ಬಂದ ಸ್ಕೂಟಿ (ಏಂ೧೨ ಗಿ೧೪೨೩) ಡಿಕ್ಕಿಯಾಗಿದ್ದು ಅದನ್ನು ಚಾಲನೆ ಮಾಡುತ್ತಿದ್ದ ಸವಾರರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕುಶಾಲನಗರ ಹಾರಂಗಿ ರಸ್ತೆಯ ಸುಂದರ ನಗರ ಬಳಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಬೈಕ್ ಸವಾರ ಮರಕ್ಕೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲಾಗಿದೆ.
ರಂಜನ್ (೨೪) ಎಂಬಾತ ಸುಂದರ ನಗರ ಬಳಿ ವೇಗವಾಗಿ ತನ್ನ ಆರ್ ಎಕ್ಸ್ ಬೈಕ್ (ಏಂ೦೯ಇಅ೯೦೨೯) ಚಲಾಯಿಸಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಉಂಟಾಗಿರುವುದಾಗಿ ಕುಶಾಲನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬAಧಿಸಿದAತೆ ಪ್ರಕರಣ ದಾಖಲಿಸಲಾಗಿದೆ.