ಕುಶಾಲನಗರ, ಮಾ.೨೦: ಕುಶಾಲನಗರ ಸಮೀಪ ಕಾವೇರಿ ನದಿ ತಟದಲ್ಲಿ ನಡೆದ ಗುಂಡೇಟಿಗೆ ಯುವಕ ಬಲಿಯಾದ ಪ್ರಕರಣಕ್ಕೆ ಸಂಬAಧಿಸಿದAತೆ ಬೈಲಕುಪ್ಪೆ ಪೊಲೀಸರು ಮೂರು ಮಂದಿ ಯುವಕರನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಇದರೊಂದಿಗೆ ಘಟನೆಗೆ ಸಂಬAಧಿಸಿದ ಕೋವಿ ಒಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮAಗಳವಾರ ಸಂಜೆ ನಾಲ್ಕು ಮಂದಿ ಸ್ನೇಹಿತರು ಬೈಚನಹಳ್ಳಿಯ ಬಳಿ ಕಾರು ನಿಲ್ಲಿಸಿ, ಕಾವೇರಿ ನದಿ ದಾಟಿ ಮೋಜು ಮಸ್ತಿ ಮಾಡಲು ನದಿ ತಟದಲ್ಲಿ ಸೇರಿದ್ದು ಮದ್ಯ ಸೇವಿಸಿದ್ದಾರೆ. ಈ ಸಂದರ್ಭ ಜೊತೆಗೆ ಒಯ್ದಿದ್ದ ಬಂದೂಕಿನಲ್ಲಿ ಮೀನು ಬೇಟೆಗೆಂದು ತಯಾರಿ ನಡೆಸುತ್ತಿದ್ದಾಗ ಕೋವಿಯಿಂದ ಆಕಸ್ಮಿಕವಾಗಿ ಗುಂಡು ಹಾರಿ ಸಂತೋಷ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನಾ ಸ್ಥಳ ಬೈಲಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿಯಲ್ಲಿ ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಮತ್ತಿತರ ಅಧಿಕಾರಿಗಳ ಸಹಕಾರದೊಂದಿಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುಶಾಲನಗರ ಪೊಲೀಸರ ವಶದಲ್ಲಿದ್ದ ಮೂವರು ಆರೋಪಿಗಳಾದ ಕುಶಾಲನಗರ ಗೋಪಾಲ್ ಸರ್ಕಲ್ ಬಳಿಯ ನೂತನ್, ಬಸವೇಶ್ವರ ಬಡಾವಣೆಯ ಶರತ್, ಕೊಪ್ಪ ಗ್ರಾಮ ವ್ಯಾಪ್ತಿಯ ಮರೂರು ನಿವಾಸಿ ರವಿ ಎಂಬವರುಗಳನ್ನು ಬೈಲಕುಪ್ಪೆ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ.

ಹುಣಸೂರು ಡಿವೈಎಸ್ಪಿ ಗೋಪಾಲಕೃಷ್ಣ ಪಿರಿಯಾಪಟ್ಟಣ ಸಿಪಿಐ ವೀಣಾ ಬೈಲಕುಪ್ಪೆ ಪಿಎಸ್‌ಐ ಜಿತೇಂದ್ರ ಕುಮಾರ್ ಆರೋಪಿಗಳಿಂದ ಸಮಗ್ರ ಮಾಹಿತಿ ಕಲೆ ಹಾಕಿ ಮೂವರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಮೈಸೂರಿನಿಂದ ಆಗಮಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿ ಸಿಬ್ಬಂದಿಗಳು ಘಟನೆಗೆ ಸಂಬAಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಗುAಡೇಟಿಗೆ ಕಾರಣವಾದ ಕೋವಿಯನ್ನು ವಶಪಡಿಸಿಕೊಂಡಿದ್ದು ಮಾಲೀಕರ ಬಗ್ಗೆ ವಿಚಾರಣೆ ನಡೆಯುತ್ತಿದೆ. ಕೋವಿ ಕುಶಾಲನಗರದ ಅನುದೀಪ್ ಎಂಬವರಿಗೆ ಸೇರಿದ್ದು ಅವರು ತನ್ನ ಕುಟುಂಬ ಸಂಬAಧಿ ನೂತನ್ ಎಂಬಾತನಿಗೆ ಸರಿಪಡಿಸಿಕೊಡಲು ನೀಡಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಮೃತ ಯುವಕ ಸಂತೋಷ್ ಗಡಿ ಭಾಗದ ಕೊಪ್ಪ ಗ್ರಾಮ ಚಿಕ್ಕ ಹೊಸೂರು ಬಳಿ ಸಾಹಸಿ ಬೈಕ್ ಚಾಲನೆ ಸಂಸ್ಥೆಯನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದು ಈ ಸಂಬAಧ ಸಂಸ್ಥೆಯ ಪಾಲುದಾರ ಹರೀಶ್ ಎಂಬಾತನನ್ನು ಕೂಡ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ..

ಮೃತನ ಸಹೋದರ ಜಯಪ್ರಕಾಶ್ ತನ್ನ ಅಣ್ಣನ ಸಾವಿನ ಘಟನೆಯಲ್ಲಿ ಸಂಶಯ ವ್ಯಕ್ತಪಡಿಸಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಸಂತೋಷ್ ಮೃತ ದೇಹವನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆಗೆ ಮಡಿಕೇರಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸಾಗಿಸಲಾಗಿದೆ. -ಚಂದ್ರಮೋಹನ್