ಮಡಿಕೇರಿ, ಮಾ. ೧೯: ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ದಕ್ಷಿಣ ಕನ್ನಡದ ಸುಬ್ರಹ್ಮಣ್ಯಕ್ಕೆ ಹತ್ತಿರವಿರುವ ಕೂಜಿಮಲೆಯಲ್ಲಿ ನಕ್ಸಲರು ಕಾಣಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆ ಚುರುಕುಗೊಂಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೂಜಿಮಲೆಯ ಕಲ್ಮಕಾರು ಎಂಬಲ್ಲಿ ಶಸ್ತಾçಸ್ತç ಸಹಿತವಾಗಿ ಕಾಣಿಸಿಕೊಂಡ ನಾಲ್ವರು ನಕ್ಸಲರೆಂದು ಗೊತ್ತಾಗಿದೆ. ಅಲ್ಲಿನ ಅಂಗಡಿಯೊAದಕ್ಕೆ ತೆರಳಿದ್ದ ಅವರುಗಳು ೨೫ ಕೆ.ಜಿ. ಅಕ್ಕಿ, ೩ ಕೆ.ಜಿ. ಸಕ್ಕರೆ ಸೇರಿದಂತೆ ಇನ್ನಿತರ ದಿನಸಿ ಪದಾರ್ಥಗಳನ್ನು ಖರೀದಿಸಿ, ನಾವು ಮಾವೋವಾದಿಗಳಾಗಿದ್ದು, ಬಡವರ ಪರ ಹೋರಾಟ ಮಾಡುತ್ತಿದ್ದೇವೆ; ನಮಗೆ ಬೆಂಬಲ ನೀಡಬೇಕೆಂದು ಅಂಗಡಿಯವರಿಗೆ ಹೇಳಿ, ಖರೀದಿಸಿದ ಪದಾರ್ಥಗಳಿಗೆ ಹಣ ಪಾವತಿಸಿ ಅರಣ್ಯದೊಳಕ್ಕೆ ತೆರಳಿದ್ದಾರೆ ಎಂದು ಎಸ್ಪಿ ತಿಳಿಸಿದರು. ನಾಲ್ವರಲ್ಲಿ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ೪೦ ರಿಂದ ೪೫ ವರ್ಷ ಪ್ರಾಯದ ಇಬ್ಬರು ಪುರುಷರು, ಓರ್ವ ಮಹಿಳೆ ಹಾಗೂ ೩೦ ರಿಂದ ೩೫ ವರ್ಷ ಪ್ರಾಯದ ಓರ್ವ ಮಹಿಳೆ ಇದ್ದುದಾಗಿ ತನಿಖೆಯಿಂದ ತಿಳಿದು ಬಂದಿದೆ. ಅವರ ಪೈಕಿ ಓರ್ವ ಮೋಸ್ಟ್ ವಾಂಟೆಡ್ ನಕ್ಸಲೈಟ್ ವಿಕ್ರಂ ಗೌಡನ ತರಹದವನಿದ್ದ ಎಂಬುದಾಗಿಯೂ ವಿಚಾರಣೆ ವೇಳೆ ಮಾಹಿತಿ ಸಿಕ್ಕಿದ್ದು, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ನಕ್ಸಲ್ ನಿಗ್ರಹ ದಳದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ್ ಅವರು ಜಿಲ್ಲೆಯಲ್ಲಿದ್ದು, ಅವರ vಮಾರ್ಗದರ್ಶನದಲ್ಲಿ ನಕ್ಸಲ್ ನಿಗ್ರಹದಳ ಕಾರ್ಯಾಚರಣೆ ಕೈಗೊಂಡಿದೆ. ಕೊಡಗು ಪೊಲೀಸ್ ತಂಡ ಕೂಡ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಸುಮಾರು ೪೦ ಮಂದಿಯ ತಂಡ ಕೂಂಬಿAಗ್ ಕಾರ್ಯಾಚರಣೆ ಕೈಗೊಂಡಿದೆ. ಶ್ವಾನದಳವನ್ನು ಕೂಡ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ರಾಮರಾಜನ್ ಹೇಳಿದರು. ಈ ರೀತಿ ಶಸ್ತçಧಾರಿಗಳು ಎಲ್ಲಿಯೇ ಕಂಡುಬAದರೂ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.