ಒಂದು ಗುಬ್ಬಚ್ಚಿಯ ಕುಟುಂಬ. ಅಮ್ಮ ಮತ್ತು ಇಬ್ಬರು ಮಕ್ಕಳು ತುಂಬಾ ಸಂತೋಷದ ಜೀವನವನ್ನು ನಡೆಸುತ್ತಿದ್ದವು. ತಾಯಿ ಗುಬ್ಬಚ್ಚಿ ತನ್ನ ಮಕ್ಕಳಿಗೆ ರೆಕ್ಕೆ ಬಿಚ್ಚಿ ಹಾರುವುದು, ಈ ಮನುಷ್ಯರ ನಡುವೆ ಹೇಗೆ ಬದುಕುವುದು ಮತ್ತು ತನ್ನ ಆಹಾರವನ್ನು ಹೇಗೆ ಸಂಗ್ರಹ ಮಾಡುವುದು ಎಂಬುದರ ಬಗ್ಗೆ ದಿನವೂ ಪಾಠ ಮಾಡುತ್ತಿದ್ದಳು. ಹೀಗೆ ಗುಬ್ಬಚ್ಚಿಯ ಸಂಸಾರ ಸಂತೋಷದಿAದ ಕೂಡಿತ್ತು.

ಹೀಗಿರುವಾಗ ದಿನೇ ದಿನೇ ಗುಬ್ಬಚ್ಚಿಯ ಗೂಡಲ್ಲಿ ಏನೋ ಗದ್ದಲ, ತರಂಗಾAತರ ಶಬ್ದಗಳಿಂದ ನೆಮ್ಮದಿ ಇಲ್ಲದಂತಾಯಿತು! ಆಗ ತಾಯಿ ಗುಬ್ಬಚ್ಚಿ ಈ ಜಾಗದಲ್ಲಿ ಏನೋ ಸಮಸ್ಯೆ ಇರಬಹುದು ಅಂದುಕೊAಡು ತನ್ನ ಮಕ್ಕಳನ್ನು ಬೇರೆಡೆ ಕರೆದುಕೊಂಡು ಹೋದಳು. ಅಲ್ಲಿ ಸ್ವಲ್ಪ ದಿನ ಹೀಗೆ ಹಾರಾಡುತ್ತಾ ತಮಗೆ ಬೇಕಾದ ಆಹಾರವನ್ನು ತಿನ್ನುತ್ತಾ ತಮ್ಮದೇ ಆದ ಲೋಕದಲ್ಲಿ ಸುಖವಾಗಿ ಇದ್ದರೂ ಕೆಲವು ದಿನಗಳ ನಂತರ ಮತ್ತೆ ಅದೇ ಗದ್ದಲ, ಶಬ್ದ ಮತ್ತೆ ನೆಮ್ಮದಿ ಇಲ್ಲದಂತಾಯಿತು.

ಹೀಗೆ ಹತ್ತು ಹಲವಾರು ಕಡೆ ತಮ್ಮ ಮನೆಯನ್ನು ಬದಲಾಯಿಸುತ್ತಾ ಬದುಕುತ್ತಿದ್ದವು ಈ ಗುಬ್ಬಚ್ಚಿಯ ಕುಟುಂಬ.

ಒAದು ದಿನ ತಾಯಿ ಗುಬ್ಬಚ್ಚಿ ತನ್ನ ಮಕ್ಕಳಿಗೆ ಆಹಾರ ತರಲು ಆಚೆ ಕಡೆ ಹೋಗುತ್ತಾಳೆ, ಎಷ್ಟು ಹೊತ್ತಾದರೂ ತಾಯಿ ಮರಳಿ ಮನೆಗೆ ಬರುವುದಿಲ್ಲ. ಪಾಪ... ಮರಿ ಗುಬ್ಬಚ್ಚಿಗಳು ತನ್ನ ತಾಯಿಗಾಗಿ ಕಾಯುತ್ತಾ ಭಯದಲ್ಲೇ ಕುಳಿತಿರುತ್ತವೆ. ಯಾವುದೋ ದೊಡ್ಡ ಪಕ್ಷಿ ಹಾರಾಡೋ ಶಬ್ದ, ಪ್ರಾಣಿಗಳು ಕಿರುಚೋ ಶಬ್ದ ಮರಿ ಗುಬ್ಬಚ್ಚಿಗಳು ಭಯದಲ್ಲೇ ಅಳುತ್ತಾ ತನ್ನ ತಾಯಿಗಾಗಿ ಕಾಯುತ್ತಿರುತ್ತವೆ. ಹೀಗೆ ದಿನಗಳು, ವಾರಗಳು ಕಳೆದು ಹೋಗುತ್ತವೆ. ಆದರೆ ತಾಯಿ ಗುಬ್ಬಚ್ಚಿ ಹಿಂತಿರುಗುವುದೇ ಇಲ್ಲ. ಮರಿ ಗುಬ್ಬಚ್ಚಿಗಳು ತನ್ನ ತಾಯಿ ಬರುವಿಕೆಯನ್ನೇ ಕಾಯುತ್ತಾ ತಮ್ಮ ಜೀವನವನ್ನು ನಡೆಸುತ್ತಿರುತ್ತವೆ. ಇಬ್ಬರು ತಮ್ಮ ತಾಯಿ ನಮ್ಮನ್ನು ಬಿಟ್ಟು ಎಲ್ಲಿ ಹೋಗಿರಬಹುದು ಎಂದು ತಮ್ಮಲ್ಲೇ ಮಾತನಾಡಿಕೊಳ್ಳುತ್ತಾ ಯೋಚಿಸುತ್ತಿರುತ್ತವೆ.

ಮುಂದೆ ಮರಿ ಗುಬ್ಬಚ್ಚಿಗಳು ಹಾರಾಡುವುದನ್ನು ಕಲಿತು ಜೀವನ ಮಾಡುವುದನ್ನು ಕಲಿತು ಬೆಳೆದು ದೊಡ್ಡವರಾಗುತ್ತವೆ. ಆದರೂ ತಮ್ಮ ತಾಯಿಯನ್ನು ಹುಡುಕುವುದು ಮಾತ್ರ ಬಿಡುವುದಿಲ್ಲ. ಹೀಗೆ ಆಹಾರವನ್ನು ತರಲು ಹೋದಾಗ ತಮ್ಮ ಸ್ನೇಹಿತರ ಜೊತೆ ಹುಡುಕಲು ಪ್ರಾರಂಭಿಸುತ್ತವೆ. ಒಂದು ದಿನ ತಮ್ಮ ತಾಯಿಯ ಗೆಳತಿ ಮರಿ ಗುಬ್ಬಚ್ಚಿಗಳಿಗೆ ಸಿಗುತ್ತಾಳೆ. ಅವಳನ್ನು ವಿಚಾರಿಸಿದಾಗ ಅವರ ತಾಯಿ ಸತ್ತಿರುವುದು ತಿಳಿಯುತ್ತದೆ. ತಮ್ಮ ಮಕ್ಕಳಿಗೆ ಆಹಾರ ತರುತ್ತೇನೆ ಎಂದು ಹೋದಾಗ ಮೈಕ್ರೋವೇವ್ ಟವರ್‌ಗೆ ಸಿಕ್ಕಿ ಸತ್ತಿದ್ದಾಳೆ ಎಂದು ಆ ಗುಬ್ಬಚ್ಚಿ ಮಕ್ಕಳಿಗೆ ತಿಳಿಯುತ್ತದೆ. ಇಬ್ಬರು ಮಕ್ಕಳು ತನ್ನ ತಾಯಿಯನ್ನು ನೆನೆದು ಕಣ್ಣೀರು ಹಾಕುತ್ತಾ ಗೋಳಾಡುತ್ತವೆ. ಹೀಗಿರುವಾಗ ಬೇಸಿಗೆಕಾಲ ಶುರುವಾಗುತ್ತದೆ. ಇಬ್ಬರಲ್ಲಿ ಒಂದು ಗುಬ್ಬಚ್ಚಿ ಆಹಾರ ತರಲು ಆಚೆ ಹೋಗುತ್ತದೆ. ಆದರೆ ಎಷ್ಟು ಹುಡುಕಿದರೂ ಆಹಾರ ಸಿಗುವುದಿಲ್ಲ. ಮಾನವ ಸಂಕುಲ ಇದ್ದ ಮರ-ಗಿಡಗಳನ್ನೆಲ್ಲಾ ಕಡಿದು ಸುತ್ತಮುತ್ತ ಬರಿ ಕಾಂಕ್ರಿಟ್ ಕಟ್ಟಡ ಕಟ್ಟಿರುವುದರಿಂದ ಪಕ್ಷಿಗಳಿಗೆ ತಿನ್ನಲು ಸೂಕ್ತ ಆಹಾರವಿಲ್ಲ. ಹೀಗಾಗಿ ಮರಿ ಗುಬ್ಬಚ್ಚಿ ಆಹಾರ ಹುಡುಕಿ ಹುಡುಕಿ ಬೇಸಿಗೆ ಕಾಲವಾದ್ದರಿಂದ ಗುಬ್ಬಚ್ಚಿಗೆ ಸುಸ್ತಾಗುತ್ತದೆ, ಬಾಯಾರಿಕೆ ಆಗಿ ಕುಡಿಯಲು ನೀರು ಹುಡುಕುತ್ತಾ ಹೊರಟರೂ ಒಂದು ಕಡೆಯಲ್ಲೂ ನೀರು ಸಿಗುವುದಿಲ್ಲ. ಬಾಯಾರಿಕೆಯಿಂದ ನೀರು ಸಿಗದೇ ಬಳಲಿ ಬಳಲಿ ಸತ್ತು ಹೋಗುತ್ತದೆ. ಇತ್ತ ತನ್ನ ಅಣ್ಣ ಗುಬ್ಬಚ್ಚಿ ಮರಳಿ ಬರುತ್ತದೆ ಎಂದು ಕಾದು ಕುಳಿತಿದ್ದ ತಮ್ಮ ಗುಬ್ಬಚ್ಚಿಗೆ ಏನೋ ತಳಮಳ ಭಯ!!! ತನ್ನ ಅಮ್ಮನಿಗೆ ಬಂದ ಸ್ಥಿತಿ ನನ್ನ ಅಣ್ಣನಿಗೆ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿತ್ತು. ಆದರೆ ಗುಬ್ಬಚ್ಚಿಯ ಪ್ರಾರ್ಥನೆ ದೇವರಿಗೆ ತಲುಪಲೇ ಇಲ್ಲ...

ಸ್ವಲ್ಪ ದಿನದ ನಂತರ ತಮ್ಮ ಗುಬ್ಬಚ್ಚಿ ಇದ್ದ ಗಿಡದ ಸಮೀಪವಿದ್ದ ಮನೆಯವರು ಮನೆಯ ಸುತ್ತಮುತ್ತಲಿನ ಕಾಡು ಗಿಡಗಳಿಗೆ ಕೀಟನಾಶಕ ಸಿಂಪಡಿಸಿದ್ದರಿAದ ಆ ಸಣ್ಣ ಗುಬ್ಬಚ್ಚಿಯೂ ಸತ್ತು ಹೋಯಿತು.

ಮನುಷ್ಯರು ಜಗತ್ತನ್ನು ಡಿಜಿಟಲ್ ಯುಗ ಮಾಡುವ ಬರದಲ್ಲಿ ತಮಗೆ ಗೊತ್ತಿಲ್ಲದೆ ಪ್ರಾಣಿ, ಪಕ್ಷಿಗಳ ಜೀವ ತೆಗೆಯುತ್ತಿದ್ದಾರೆ. ನಾವುಗಳು ಚಿಕ್ಕವರಿದ್ದಾಗ ನಮ್ಮ ಅಜ್ಜ ಅಜ್ಜಿಯರು ಗುಬ್ಬಚ್ಚಿಯ ಕತೆ ಹೇಳುತ್ತಿದ್ದರು. ಗುಬ್ಬಚ್ಚಿಗಳು ಮನೆ ಹತ್ತಿರ ಬಂದರೆ ನಮಗೆಲ್ಲ ಏನೋ ಖುಷಿ... ಎರಡು, ಮೂರು ದಶಕಗಳ ಹಿಂದೆ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಗುಬ್ಬಚ್ಚಿಗಳ ಕಲರವ ಕೇಳುತ್ತಿತ್ತು. ಮನೆಯ ಜಗುಲಿಯಲ್ಲಿ ಬಿದ್ದ ಕಾಳು, ಅಂಗಳದಲ್ಲಿ ಬೆಳೆದ ಹುಲ್ಲಿನ ಬೀಜ, ಹುಳು-ಹುಪ್ಪಟೆಗಳನ್ನು ಹೆಕ್ಕಿ ತಿಂದು ಅವುಗಳು ಹೋಗುತ್ತಿದ್ದವು.

ಮಕ್ಕಳು ಗುಬ್ಬಚ್ಚಿ ಬಂತು! ಗುಬ್ಬಚ್ಚಿ ಬಂತು! ಅಂತ ಚಪ್ಪಾಳೆ ತಟ್ಟುತ್ತಾ ನೋಡುತ್ತಾ ಆನಂದಿಸುತ್ತಿದ್ದರು. ಆದರೆ ಈಗಿನ ಮಕ್ಕಳು ಗುಬ್ಬಚ್ಚಿ ಎಂದರೆ ಏನು ಎಂದು ಕೇಳುವ ಪರಿಸ್ಥಿತಿ ಬಂದಿದೆ. ನಾವು ಈಗ ಗುಬ್ಬಚ್ಚಿ ಹುಡುಕಲು ಶುರು ಮಾಡಿದರೆ ಅಲ್ಲೊಂದು ಇಲ್ಲೊಂದು ಕಾಣಬಹುದು ಅಷ್ಟೇ, ಇದಕ್ಕೆಲ್ಲ ಕಾರಣ ಮಾನವ ಜೀವಿಗಳು. ಎಲ್ಲಾ ಕಡೆ ಕಟ್ಟಡಗಳನ್ನು ಕಟ್ಟಿ ಪ್ರಾಣಿ-ಪಕ್ಷಿಗಳಿಗೆ ಜೀವಿಸಲು ಜಾಗವಿಲ್ಲದೆ ಮಾಡಿರುವುದು.

ಪಕ್ಷಿಗಳಿಗೆ ಕುಡಿಯಲು ನೀರು ಇಲ್ಲದಷ್ಟು ಕಟ್ಟಡ ನಿರ್ಮಾಣವಾಗುತ್ತಿರುವುದು, ಟವರ್ ಮೇಲೆ ಟವರ್ ಕಟ್ಟಿ ಹಲವು ನೆಟ್‌ವರ್ಕ್ಗಳ ಫೋನ್ ರೇಡಿಯೇಷನ್ ಶಬ್ದದಿಂದ ಗುಬ್ಬಚ್ಚಿಗಳು ಸಾಯುತ್ತಿವೆ. ಇದನ್ನು ತಡೆಗಟ್ಟಲು "ಊಚಿಠಿಠಿಥಿ Iಟಿಣeಡಿಟಿಚಿಣioಟಿಚಿಟ Sಠಿಚಿಡಿಡಿoತಿ ಆಚಿಥಿ" ಅಂತ ಸ್ಟೇಟಸ್ ಹಾಕುವ ಬದಲು, ಮರ ಹಣ್ಣು ಗಿಡಗಳನ್ನು ಮನೆಯ ಸುತ್ತಮುತ್ತಲಿನಲ್ಲಿ ನೆಡುವುದರಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರ ಮೂಲವನ್ನು ನೀಡಬಹುದಾಗಿದೆ. ಮನೆ ಮುಂಭಾಗ ಅಥವಾ ಟೆರೇಸ್‌ಗಳ ಮೇಲೆ ಕುಡಿಯಲು ನೀರು ಇಡುವುದರಿಂದ ನಾವು ಗುಬ್ಬಚ್ಚಿಗಳ ರಕ್ಷಣೆ ಮಾಡಲು ಸಾಧ್ಯ.

ವಿಶ್ವ ಗುಬ್ಬಚ್ಚಿ ದಿನ ಪ್ರತಿ ವರ್ಷ ಮಾರ್ಚ್ ೨೦ ರಂದು ಆಚರಿಸಲಾಗುತ್ತದೆ. ಗುಬ್ಬಚ್ಚಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ದೇಶಿಯ ಗುಬ್ಬಚ್ಚಿಗಳನ್ನು ಸಂರಕ್ಷಿಸುವ ಕ್ರಮಗಳ ಬಗ್ಗೆ ಜನರಿಗೆ ತಿಳಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ. ಗುಬ್ಬಚ್ಚಿಗಳು ಭೂಮಿಯ ಮೇಲಿನ ಅತ್ಯಂತ ಸಾಮಾನ್ಯ ಮತ್ತು ಹಳೆಯ ಪಕ್ಷಿ ಪ್ರಭೇದಗಳಲ್ಲಿ ಒಂದಾಗಿದೆ. ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಪ್ರಭೇದಗಳ ಮತ್ತು ಕ್ಷೀಣಿಸುತ್ತಿರುವ ಗುಬ್ಬಚ್ಚಿಗಳ ಬಗ್ಗೆ ಬಹಳ ಕಾಳಜಿ ವಹಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗುಬ್ಬಚ್ಚಿಗಳು ಮತ್ತು ಇತರ ಕಣ್ಮರೆಯಾಗುತ್ತಿರುವ ಪಕ್ಷಿಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಈ ದಿನವನ್ನು ಆಚರಿಸುವ ಬಗ್ಗೆ ಯೋಚಿಸುವುದು ನಿಜವಾಗಿಯೂ ಶ್ಲಾಘನೀಯವಾಗಿದೆ.

ನೇಚರ್ ಫಾರ್ ಎವರ್ ಸೊಸೈಟಿ (ಓಚಿಣuಡಿe ಜಿoಡಿeveಡಿ Soಛಿieಣಥಿ) ಮತ್ತು ಇಕೋಸಿಸ್ ಆಕ್ಷನ್ ಫೌಂಡೇಶನ್ (ಫ್ರಾನ್ಸ್) ಸಂಯೋಗ ದಿಂದ ಪ್ರತಿವರ್ಷ ಮಾರ್ಚ್ ೨೦ ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತಿದೆ. ಮೊಹಮ್ಮದ್ ದಿಲ್ವಾರ್ ಭಾರತೀಯ ಸಂರಕ್ಷಣಾವಾದಿ ಮತ್ತು ನೇಚರ್ ಫಾರ್ ಎವರ್ ಸೊಸೈಟಿ ಸಂಸ್ಥಾಪಕ ಗುಬ್ಬಚ್ಚಿ ದಿನವನ್ನು ಮೊದಲು ೨೦೧೦ರಲ್ಲಿ ಆಚರಿಸಿದರು.

ಪ್ರಾಣಿ-ಪಕ್ಷಿಗಳು ಪರಿಸರ ಹಾಗೂ ಗುಬ್ಬಚ್ಚಿ ರಕ್ಷಣೆಯ ಹೊಣೆ ಮನುಷ್ಯನದ್ದೆ. ಮಾನವಕೃತ ಕಾರಣಗಳಿಂದ ಗುಬ್ಬಿಗಳು ವಿನಾಶದ ಹಾದಿ ಹಿಡಿದಿದೆ. ಹಾಗಾಗಿ ಅವುಗಳನ್ನು ರಕ್ಷಿಸುವುದು ಮಾನವಕುಲದ ಕರ್ತವ್ಯವೂ ಹೌದು. ಈ ಜಗತ್ತು ಮಾನವಕುಲದೊಂದಿಗೆ ಪ್ರಾಣಿ-ಪಕ್ಷಿಗಳಿಗೂ ಸೇರಿದ್ದು ಎಂಬ ನೈತಿಕ ಪ್ರಜ್ಞೆಯಿಂದ ಅರಿತುಕೊಂಡು ಎಲ್ಲ ಜೀವ ಸಂಕುಲಗಳನ್ನು ಉಳಿಸಿ-ಬೆಳೆಸಿ ರಕ್ಷಿಸುವ ಮೂಲ ಮಂತ್ರವಾಗಬೇಕು.

- ಈರಮಂಡ ಹರಿಣಿ ವಿಜಯ್, ಕೋಡಂಬೂರು,

ಮೊ. ೯೭೪೦೯೭೦೮೪೦