ಸಿದ್ದಾಪುರ, ಮಾ. ೧೮: ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ೧೨ ಮಂದಿ ಗಾಯಗೊಂಡು ಸಿದ್ದಾಪುರ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ವೀರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಕಾಫಿ ತೋಟವೊದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಕೆಲಸ ಮುಗಿಸಿ ಊಟಕ್ಕೆ ತೆರಳುತ್ತಿದ್ದ ವೇಳೆ ಹೆಜ್ಜೇನು; ಓರ್ವ ಕಾರ್ಮಿಕನ ಮೇಲೆ ದಾಳಿ ಮಾಡಿದೆ. ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಇತರ ಕಾರ್ಮಿಕರ ಬಳಿ ಓಡಿ ಬಂದ ಪರಿಣಾಮ ತೋಟದಲ್ಲಿ ಊಟ ಮಾಡಲು ಕುಳಿತಿದ್ದ ನಾಲ್ಕು ಮಕ್ಕಳು, ಮೂವರು ಮಹಿಳೆಯರು, ಐವರು ಪುರುಷರ ಮೇಲೆ ಏಕಕಾಲದಲ್ಲಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ. ಹೆಜ್ಜೇನು ಹುಳಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಕಾಫಿ ತೋಟದಿಂದ ಓಡಿ ಮುಖ್ಯ ೩ಮೂರನೇ ಪುಟಕ್ಕೆ
(ಮೊದಲ ಪುಟದಿಂದ) ರಸ್ತೆಗೆ ತಲುಪಿದ್ದಾರೆ. ಮಾರ್ಗವಾಗಿ ಬರುತ್ತಿದ್ದ ಆಟೋ ಚಾಲಕ ನವಾಜ್ ಗಾಯಗೊಂಡ ಕಾರ್ಮಿಕರನ್ನ ಕರೆತಂದು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯಾಧಿಕಾರಿ ರಾಘವೇಂದ್ರ ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ್ದಾರೆ. ಅಸ್ಸಾಂ ಮೂಲದ ಕಾರ್ಮಿಕರು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.
-ಮುಬಾರಕ್