ಶನಿವಾರಸಂತೆ, ಮಾ. ೧೯: ಕೇಂದ್ರ ಸರ್ಕಾರದ ಯೋಜನೆಯಡಿ “ಭಾರತ್ ಅಕ್ಕಿ’ ಎಲ್ಲೆಡೆ ವಿತರಣೆಯಾಗುತ್ತಿದ್ದು ಶನಿವಾರಸಂತೆ ಪಟ್ಟಣಕ್ಕೆ ಲಾರಿಯಲ್ಲಿ ಬಂದಾಗ ಸಾರ್ವಜನಿಕರು ಮುಗಿ ಬಿದ್ದು ಖರೀದಿಸಿದ ದೃಶ್ಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇತ್ತೀಚೆಗೆ ಕಂಡು ಬಂದಿತು.

ಮೈಸೂರಿನ ಉಗ್ರಾಣದಿಂದ ಬಂದ ಅಕ್ಕಿಯನ್ನು ೧ ಕೆ.ಜಿ.ಗೆ ರೂ.೨೯ ರಂತೆ ೧೦ ಕೆ.ಜಿ. ಚೀಲಕ್ಕೆ ರೂ.೨೯೦ ಕೊಟ್ಟು ೩೦೦ ಮಂದಿ ಖರೀದಿಸಿದರು.

ಈ ಸಂದರ್ಭ ಅಕ್ಕಿ ವಿತರಣೆಯ ನೇತೃತ್ವ ವಹಿಸಿದ್ದ ಹಿಂದುಳಿದ ವರ್ಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ರಘು ಮಾತನಾಡಿ, ಭಾರತ್ ಅಕ್ಕಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಮುಂದಿನ ೫ ವರ್ಷಗಳಿಗೆ ನಿರಂತರವಾಗಿ ನಡೆಯಲಿದೆ. ಮದ್ಯಮ ವರ್ಗದವರಿಗೆ, ಬಿಪಿಎಲ್ ಕಾರ್ಡ್ಗೆ, ಬಡಬಗ್ಗರಿಗೆ ಕೊಡುತ್ತಿದ್ದು ಕಾರ್ಡ್ ವಂಚಿತರಿಗೂ ಈ ಅಕ್ಕಿ ದೊರೆಯಲಿದೆ. ಹಸಿವು ಮುಕ್ತ ದೇಶವನ್ನಾಗಿ ಮಾಡುವ ಉದ್ದೇಶದಿಂದ ಮೋದಿ ಸರ್ಕಾರದ ಯೋಜನೆಯಾಗಿದೆ. ದಲಿತರಿಗೆ, ಹಿಂದುಳಿದ ವರ್ಗದವರಿಗೆ ಅನುಕೂಲವಾಗಿದೆ. ಎಲ್ಲರಿಗೂ ತಲುಪುವ ವ್ಯವಸ್ಥೆಯಾಗಿದ್ದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಿಜೆಪಿ ನಗರ ಅಧ್ಯಕ್ಷ ಯತೀಶ್, ಉಪಾಧ್ಯಕ್ಷ ನಿತಿನ್, ಮುಖಂಡರಾದ ಪ್ರವೀಣ್, ಯೋಗೇಂದ್ರ, ಮೋಹನ್, ಜಯಪ್ಪ ಇತರರು ಹಾಜರಿದ್ದರು.