ಕುಶಾಲನಗರ, ಮಾ. ೧೯: ಕಾವೇರಿ ನದಿ ದಂಡೆಯಲ್ಲಿ ಮೀನು ಬೇಟೆಗೆಂದು ತೆರಳಿದ್ದ ಸಂದರ್ಭ ಕೋವಿಯಿಂದ ಆಕಸ್ಮಿಕವಾಗಿ ಗುಂಡು ತಗುಲಿ ಸ್ಥಳದಲ್ಲೇ ಯುವಕ ಮೃತಪಟ್ಟ ಘಟನೆ ಕುಶಾಲನಗರ ಬಳಿ ನಡೆದಿದೆ.

ಕುಶಾಲನಗರ ಹಾರಂಗಿ ರಸ್ತೆಯ ನಿವಾಸಿ ನಾರಾಯಣ ಎಂಬವರ ಪುತ್ರ ಸಂತೋಷ್ (೩೪) ಮೃತಪಟ್ಟ ಯುವಕ.

ಸಂತೋಷ್ ಸೇರಿದಂತೆ ನಾಲ್ಕು ಮಂದಿ ಯುವಕರು ಮಧ್ಯಾಹ್ನ ವೇಳೆ ಕುಶಾಲನಗರ ಬೈಚನಹಳ್ಳಿ ಬಳಿ ಮುತ್ತಪ್ಪ ದೇವಾಲಯದ ವ್ಯಾಪ್ತಿಯಲ್ಲಿ ತಮ್ಮ ಬೈಕ್‌ಗಳನ್ನು ನಿಲ್ಲಿಸಿ ನದಿ ದಾಟಿ, ಬೈಲುಕೊಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಹೊಸೂರು ಕಡೆಗೆ ತೆರಳಿ ಊಟ ಮಾಡಿ ಸಂಜೆ ವೇಳೆ ಹೊರಡುವ ಸಂದರ್ಭ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ರೈಫಲ್‌ನಿಂದ ಗುಂಡು ಹಾರಿ ಸಂತೋಷ್ ಮೃತಪಟ್ಟಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ರೈಫಲ್‌ನಿAದ ಹಾರಿದ ಗುಂಡು ಮೃತ ಸಂತೋಷ್ ಕಣ್ಣಿನ ಮೂಲಕ ತಲೆಯ ಭಾಗದಿಂದ ಹೊರಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬAಧಿಸಿದAತೆ ಕುಶಾಲನಗರ ಪಟ್ಟಣ ಮತ್ತು ಬೈಲಕೊಪ್ಪೆ ಪೊಲೀಸರು ಜಂಟಿಯಾಗಿ ವಿಚಾರಣೆ ನಡೆಸುತ್ತಿದ್ದು, ಘಟನೆ ಸಂದರ್ಭ ಸಂತೋಷ್ ಜೊತೆಗಿದ್ದ ಸ್ನೇಹಿತರಾದ ರವಿ, ನೂತನ್ ಮತ್ತು ಶರತ್ ಎಂಬವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಮೃತ ದೇಹವನ್ನು ಕುಶಾಲನಗರ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.