ಮಡಿಕೇರಿ: ನಗರದ ಶ್ರೀ ರಾಮಲಿಂಗ ಚೌಡೇಶ್ವರಿ ಮಹಿಳಾ ಸಮಾಜದ ವತಿಯಿಂದ ಶ್ರೀ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಅಂರ್ರಾಷ್ಟಿçÃಯ ಮಹಿಳಾ ದಿನವನ್ನು ಆಚರಿಸಲಾಯಿತು. ಹಿರಿಯ ಸಾಹಿತಿ ಕಸ್ತೂರಿ ಗೋವಿಂದಮ್ಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಹೆಣ್ಣು ಅಬಲೆಯಲ್ಲ ಸಬಲೆ. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಯಿಂದ ನಮ್ಮ ಆಚಾರ ವಿಚಾರ ಕುಸಿಯುತ್ತಿರುವುದು ಆತಂಕಕಾರಿ. ಜೊತೆಗೆ ಓದುವ ಅಭ್ಯಾಸ ರೂಢಿಸಿ ಕೊಳ್ಳುವಂತೆ ಕರೆ ನೀಡಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಭಾರತಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ಮಹಿಳೆಯ ರನ್ನು ಪೂಜನೀಯ ಸ್ಥಾನದಲ್ಲಿಡ ಲಾಗಿದೆ. ಇತ್ತೀಚೆಗೆ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಮಾಡುತ್ತಿರುವ ಸಾಧನೆ ಶ್ಲಾಘನೀಯ ಎಂದರು. ಆಡಳಿತ ಮಂಡಳಿಯ ಭಾರತಿ ಸುಬ್ಬು, ಪೂರ್ಣಿಮಾ ಜಗದೀಶ್, ಸರೋಜ ರಾಜು, ನಂದಿನಿ ಗಣೇಶ್, ವಿದ್ಯಾ ದೇವರಾಜು, ಮನೋನ್ಮಣಿ ಬಾಲರಾಜ್, ಲಕ್ಷಿö್ಮಮೋಹನ್ ಹಾಗೂ ನಿರ್ಮಲ ದಿವಾಕರ್ ಉಪಸ್ಥಿತರಿದ್ದರು.
ಮಹಿಳೆಯರಿಗೆ ಆಟೋಟ ಸ್ಪರ್ಧೆ ನಡೆಯಿತು. ಇಂದಿರಾ ಜಯರಾಂ ಸ್ವಾಗತಿಸಿ, ಜಯಶ್ರೀ ನಾಗೇಶ್ ಗವಿ ಸ್ವಾಗತಿಸಿ, ಭಾಗ್ಯ ಪ್ರಕಾಶ್ ನಿರೂಪಿಸಿ, ಭಾರತಿ ಮಂಜುನಾಥ್ ವಂದಿಸಿದರು.
ಕುಶಾಲನಗರ: ಮಾದಾಪಟ್ಟಣ ದೇವಿ ಸ್ತಿçÃಶಕ್ತಿ ಮತ್ತು ವಿನಾಯಕ ಸ್ತಿçà ಶಕ್ತಿ ಗುಂಪುಗಳ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮಾದಾಪಟ್ಟಣ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತಿರಾಜು ಅವರು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಪುರುಷರ ಸಹಭಾಗಿತ್ವದೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿಯೊಬ್ಬರ ಸಬಲೀಕರಣ ಸಾಧ್ಯ ಎಂದರು. ಕುಶಾಲ ನಗರ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಪ್ರಮುಖರಾದ ಲಲಿತಾ ಕುಮಾರಿ ಮಾತನಾಡಿ, ಮನಸ್ಸಿನ ಏಕಾಗ್ರತೆ, ಉತ್ತಮ ಚಿಂತನೆಗಳು, ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮ ದಲ್ಲಿ ಸಾಧನೆ ಮಾಡಿದ ೧೦ ಮಂದಿ ಮಹಿಳೆಯರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಮ್ಮ, ಈಶ್ವರಿ ವಿಶ್ವವಿದ್ಯಾಲಯದ ಸುರೇಶ್, ದೇವಿ ಸ್ತಿçÃಶಕ್ತಿ ಗುಂಪಿನ ಅಧ್ಯಕ್ಷೆ ನಾಗರತ್ನ, ವಿನಾಯಕ ಗುಂಪಿನ ಶೋಭಾ, ಮಾದಾಪಟ್ಟಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗುಲ್ಶಿರ್ ಬಾನು, ಅಂಗನವಾಡಿ ಕಾರ್ಯಕರ್ತೆಯರಾದ ನಾಗಮಣಿ, ಭವ್ಯಕುಮಾರಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.