ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ೩೭೦ ನೇ ವಿಧಿಯನ್ನು ಸವೋಚ್ಚ ನ್ಯಾಯಾಲಯವು ೨೦೨೩ರ ಡಿಸೆಂಬರ್ ೧೧ ರಂದು ತೀರ್ಪಿನ ಮೂಲಕ ರದ್ದತಿ ಪಡಿಸಿತು. ಈ ತೀರ್ಪು ಕೊಡವ ಲ್ಯಾಂಡ್ ಬೇಡಿಕೆಗೆ ಪುಷ್ಟಿ ನೀಡಿದಂತಾಗಿದೆ. ಈ ಹಿಂದೆ ಕೊಡಗು ಕೂಡ ‘ಸಿ’ ರಾಜ್ಯವಾಗಿ ಸ್ವತಂತ್ರವಾಗಿ ಆಡಳಿತ ನಡೆಸುತ್ತಿತ್ತು. ಸುಪ್ರೀಂಕೋರ್ಟ್ ತೀರ್ಪು ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವ ಮರುಸ್ಥಾಪನೆಯಾಗಲಿದ್ದು, ಸಂವಿಧಾನದ ಆರ್ಟಿಕಲ್ ೨೪೪ ಆರ್/ಡಬ್ಲೂ÷್ಯ ೬ನೇ ಮತ್ತು ೮ನೇ ಶೆಡ್ಯೂಲ್ ಅಡಿಯಲ್ಲಿ ಲಡಾಖ್ ಹಾಗೂ ಲೇಹ್ ಬೌದ್ಧ ಸ್ವಾಯತ್ತ ಮಂಡಳಿಗಳು ಮತ್ತು ಪ್ರದೇಶಗಳ ಅನ್ವಯ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸೃಷ್ಟಿಯಾಗಬೇಕು.
ಈ ಹಿಂದಿನ ಕೂರ್ಗ್ ರಾಜ್ಯವು ಭಾರತದ ಆರು ‘ಸಿ' ರಾಜ್ಯಗಳಲ್ಲಿ ಕೇಂದ್ರ-ಭಾರತೀಯ ಒಕ್ಕೂಟದ ಆರ್ಥಿಕ ಅವಲಂಬನೆ ಮತ್ತು ಸಹಾಯವಿಲ್ಲದೆ ಸ್ವಂತAತ್ರವಾಗಿ ಆಡಳಿತ ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಏಕೈಕ ‘ಸಿ' ರಾಜ್ಯವಾಗಿತ್ತು. ಸುಪ್ರೀಂಕೋರ್ಟ್ನ ಈ ಐತಿಹಾಸಿಕ ತೀರ್ಪು ಸಿಎನ್ಸಿ ಬೇಡಿಕೆಯಾಗಿರುವ ಸ್ವಾಯತ್ತ ಕೊಡವ ತಾಯ್ನಾಡಿನ ಒಂದು ಗರಿ ಮೂಡಿಸಿದೆ. ಈ ಮಹತ್ವಪೂರ್ಣ ತೀರ್ಪಿನಿಂದಾಗಿ ಸಿ.ಎನ್.ಸಿ ೩೪ ವರ್ಷಗಳಿಂದ ನಡೆಸುತ್ತಿರುವ ಶಾಸನ ಬದ್ಧ ಹಕ್ಕೊತ್ತಾಯಕ್ಕೆ ಕಿರೀಟವಿಟ್ಟಂತಾಗಿದೆ.
ಜಮ್ಮು ಮತ್ತು ಕಾಶ್ಮೀರವು ವಾಯವ್ಯ ಭಾರತದಲ್ಲಿದ್ದರೆ, ಕೊಡವ ಲ್ಯಾಂಡ್ ನೈಋತ್ಯ ಭಾರತದಲ್ಲಿ ನೆಲೆಗೊಂಡಿದೆ. ಆದರೆ ಇವೆರಡೂ ಪ್ರದೇಶಗಳು ವಿವಿಧ ದೃಷ್ಟಿಗಳಲ್ಲಿ ಸಮಾನಾಗಿವೆ.
ಕಾಶ್ಮೀರವು ಹಿಮಾಲಯ ಪರ್ವತ ಶ್ರೇಣಿಯಿಂದ ಆವರಿಸಲ್ಪಟ್ಟಿದೆ, ಇದು ಪಾಕಿಸ್ತಾನಕ್ಕೆ ಹೊಂದಿಕೊAಡಿದೆ, ನೈಋತ್ಯದಲ್ಲಿ ಪಿರ್ಪಿಂಜಾಲ್ ಶ್ರೇಣಿ ಮತ್ತು ವಾಯವ್ಯದಲ್ಲಿ ಹಿಮಾಲಯ ಶ್ರೇಣಿಯಿಂದ ಸುತ್ತುವರಿದಿದೆ. ಇದು ನಿರಂತರ ಆರು ತಿಂಗಳ ಕಾಲ ಭಾರೀ ಹಿಮಪಾತವನ್ನು ಅನುಭವಿಸುತ್ತದೆ. ಕೊಡವ ಲ್ಯಾಂಡ್ ತ್ರಿಭುಜ ಸಾಂಸ್ಕೃತಿಕ ಪ್ರದೇಶಗಳಾದ ಮೈಸೂರು ಪ್ರಸ್ತಭೂಮಿ, ಮಲಯಾಳಂ ಪ್ರದೇಶದ ಮಲಬಾರ್ ಪರ್ವತ ಶ್ರೇಣಿ ಮತ್ತು ತುಳು ನಾಡಿನಿಂದ ಸುತ್ತುವರೆದಿದೆ. ಕೊಡವ ಲ್ಯಾಂಡ್ ಮಂಜಿನಿAದ ಕೂಡಿದ, ಪರ್ವತ ಭೂ ಪ್ರದೇಶಗಳಿಂದ ಆವೃತವಾಗಿದೆ ಮತ್ತು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಗಿರಿ ಕಂದರಗಳು ಮತ್ತು ದಟ್ಟಾರಣ್ಯಗಳ ಇಳಿಜಾರು ಪ್ರದೇಶಗಳಿಂದ ಕೂಡಿದೆ. ಆರು ತಿಂಗಳ ಧಾರಾಕಾರ ಮಳೆಯೊಂದಿಗೆ ಭಾರೀ ಮುಂಗಾರು ಮಾರುತವನ್ನು ಅನುಭವಿಸುತ್ತಿದೆ. ಕಾಶ್ಮೀರವನ್ನು ಭಾರತದ ಸ್ವಿಟ್ಜರ್ಲೆಂಡ್ ಎಂದು ಕರೆಯಲಾಗುತ್ತದೆ. ಕೊಡವ ಲ್ಯಾಂಡ್ ಕೂರ್ಗ್ ಅನ್ನು ಭಾರತದ ಸ್ಕಾಟ್ಲಾö್ಯಂಡ್ ಮತ್ತು ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ.
ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮಾತ್ರ ಹೇಗೆ ಆದಿಮ ಸಂಜಾತರೋ ಅದೇ ರೀತಿ ಕೊಡವರು ಕೂಡ ಕೊಡವ ಲ್ಯಾಂಡ್ಗೆ ಮಾತ್ರ ಆದಿಮ ಸಂಜಾತರು. ಕೊಡವ ಲ್ಯಾಂಡ್ ಹೊರತುಪಡಿಸಿ, ಕೊಡವ ಲ್ಯಾಂಡ್ನ ಹೊರಗೆ ಕೊಡವರಿಗೆ ಯಾವುದೇ ಸಾಂಸ್ಕöÈತಿಕ ಬೇರಿನ ಮೂಲವಿಲ್ಲ. ಕೊಡವರ ಅವಿಭಾಜ್ಯ ಮತ್ತು ಸಾಂಪ್ರದಾಯಿಕ ತಾಯಿನಾಡು ಕೊಡಗು ‘ಸಿ' ರಾಜ್ಯ ೧೯೫೬ ರಲ್ಲಿ ಕರ್ನಾಟಕದೊಂದಿಗೆ ವಿಲೀನವಾಯಿತು.
ಕಾಶ್ಮೀರಿ ಪಂಡಿತರು ಬ್ರಾಹ್ಮಣರಲ್ಲಿ ಒಂದು ವಿಶೇಷ ತಳಿ, ಅಂತೆಯೆ ಕೊಡವರು ಇತರ ಜನಾಂಗಗಳಿಗಿAತ ಭಿನ್ನ.
ಕಾಶ್ಮೀರಿ ಪಂಡಿತರು ಚಾಂದ್ರಮಾನ ಕ್ಯಾಲೆಂಡರ್ ಅನ್ನು ಅನುಸರಿಸುತ್ತಾರೆ ಮತ್ತು ಮಾರ್ಚ್ನಲ್ಲಿ "ನವೇಶ್" ಅನ್ನು ತಮ್ಮ ಹೊಸ ವರ್ಷವನ್ನಾಗಿ ಆಚರಿಸುತ್ತಾರೆ. ಕೊಡವರು ಸೌರಮಾನ ಕ್ಯಾಲೆಂಡರ್ ಅನ್ನು ಅನುಸರಿಸುತ್ತೇವೆ ಮತ್ತು ಎಡ್ಮಾ÷್ಯರ್ ೧ ಅನ್ನು ಕೊಡವ ಹೊಸ ವರ್ಷವಾಗಿ ಆಚರಿಸುತ್ತೇವೆ. ಅದು ಏಪ್ರಿಲ್ ೧೪ ರಂದು ಬರುತ್ತದೆ. ಕಾಶ್ಮೀರಿ ಪಂಡಿತರು ಸಾರಿಕಾ ದೇವಿಗೆ ನೈವೇದ್ಯಗಳನ್ನು ಅರ್ಪಿಸುತ್ತಾರೆ. ನಾವು ಕೊಡವರು ನಮ್ಮ ಗುರು-ಕಾರೋಣರಿಗೆ ಅರ್ಪಣೆಗಳನ್ನು ಅರ್ಪಿಸುತ್ತೇವೆ. ಅವರು ಶಾರದಾ ದೇವಿ ಮತ್ತು ಅದೃಶ್ಯ ಸರಸ್ವತಿ ನದಿಯನ್ನು ಪೂಜಿಸುತ್ತಾರೆ. ಅವರು ಶಾರದಾ ಪೀಠವನ್ನು ತಮ್ಮ ಪವಿತ್ರ ಯಾತ್ರಾಸ್ಥಳವೆಂದು ಪರಿಗಣಿಸುತ್ತಾರೆ. ವೇದ ಕಾಲದ ೭ ಪವಿತ್ರ ನದಿಗಳಲ್ಲಿ ಸರಸ್ವತಿಯೂ ಒಂದು (ಸರಸ್ವತಿ, ಸಿಂಧು, ಗಂಗಾ, ಯಮುನಾ, ನರ್ಮದಾ, ಗೋದಾವರಿ, ಕಾವೇರಿ). ನಾವು ಕೊಡವರು ಕಾವೇರಿಯನ್ನು ಪೂಜಿಸುತ್ತೇವೆ ಮತ್ತು ಆಕೆಯ ಜನ್ಮ ಸ್ಥಳವಾದ ದಿವ್ಯ ಜಲಧಾರೆ ಪವಿತ್ರ ತೀರ್ಥಯಾತ್ರೆಯ ಸ್ಥಳವೆಂದು ಪರಿಗಣಿಸಿದ್ದೇವೆ.
ಕೊಡಗು ಕಾವೇರಿ ಜಲ ಉತ್ಪಾದಿಸುವ ಪ್ರಮುಖ ಕ್ಯಾಚ್ ಮೆಂಟ್ ಏರಿಯಾ ಆಗಿದ್ದು, ಕಾವೇರಿ ನದಿಯ ನೀರಿನ ವಾರ್ಷಿಕ ಇಳುವರಿ ೭೪೦ ಟಿ.ಎಂ.ಸಿ ಆಗಿದ್ದು, ಇದರಲ್ಲಿ ಕೊಡಗಿನ ಉತ್ಪಾದನೆ ೨೦೦ ಟಿ.ಎಂ.ಸಿ. ಆಗಿದೆ. ೧೯೬೬ರಲ್ಲಿ ವಿಶ್ವ ರಾಷ್ಟç ಸಂಸ್ಥೆ ನೇತೃತ್ವದಲ್ಲಿ ಫಿನ್ಲ್ಯಾಂಡ್ನ ಹೆಲ್ಸಿಂಕಿಯಲ್ಲಿ ನಡೆದ ಅಂರ್ರಾಷ್ಟಿçÃಯ ಜಲವಿವಾದ ಒಪ್ಪಂದದಲ್ಲಿ ಜಲ ಉತ್ಪತ್ತಿಯಾಗುವ ಸ್ಥಳಕ್ಕೆ ನೀರಿನ ಅಧಿಕ ಪಾಲು ನೀಡ ಬೇಕೆಂಬ ಘೋಷಣೆ ಹೊರಡಿ ಸಿದ್ದರೂ ಕೊಡಗಿನ ವಿಷಯದಲ್ಲಿ ಈ ಹೆಲ್ಸಿಂಕಿ ನಿಯಮವನ್ನು ರಾಜ್ಯ ಸರ್ಕಾರ ಉಲ್ಲಂಘನೆ ಮಾಡಿ ನಮಗೆ ವಂಚಿಸುತ್ತಿದೆ.
ಕಾರ್ಯಾAಗ ಮತ್ತು ಶಾಸಕಾಂಗವು ಕೊಡವ ಕುಂದು ಕೊರತೆಗಳನ್ನು ಅಂಗೀಕರಿಸುವಲ್ಲಿ ವಿಫಲವಾಗಿದೆ. ಎಸ್ಟಿ ಪಟ್ಟಿಗೆ ಸೇರ್ಪಡೆಗೊಳ್ಳುವ ನಮ್ಮ ಹಕ್ಕು. ನಮ್ಮ ಅನನ್ಯ ಗುರುತು, ಸಂಸ್ಕöÈತಿ ಮತ್ತು ನಮ್ಮ ಐತಿಹಾಸಿಕ ನಿರಂತರತೆ ಯನ್ನು ಅನುಮೋದಿಸಲು ಮತ್ತು ನಮ್ಮ ಕ್ಷೀಣಿಸುತ್ತಿರುವ ಸ್ಥಿತಿ ಮತ್ತು ಅಳಿವಿನಿಂದ ರಕ್ಷಿಸಲು ಸಾಂವಿಧಾನಿಕ ರಕ್ಷಣೆಗಾಗಿ ಮಾತ್ರ. ಆದ್ದರಿಂದ ನ್ಯಾಯ ಮತ್ತು ಸಮಾನತೆಯ ಹಿತಾಸಕ್ತಿಯಲ್ಲಿ ನಮ್ಮ ಸಂವಿಧಾನದ ೩೨ನೇ ವಿಧಿ ಮತ್ತು ಯುಎನ್ ಚಾರ್ಟರ್ ಅನ್ನು ಚಲಾಯಿ ಸುವ ಮೂಲಕ ನಮ್ಮ ೩೪ ವರ್ಷಗಳ ದೀರ್ಘಾವಧಿಯ ಗುರಿಗಳನ್ನು ಮತ್ತು ನಮ್ಮ ಪಾಲಿಸಬೇಕಾದ ಕಾನೂನುಬದ್ಧ ಆಕಾಂಕ್ಷೆಗಳನ್ನು ಕೇಂದ್ರ ಸರಕಾರ ಒಪ್ಪಿಕೊಳ್ಳುವ ಅಗತ್ಯವಿದೆ.
- ಎನ್.ಯು. ನಾಚಪ್ಪ, ಸಿ.ಎನ್.ಸಿ. ಅಧ್ಯಕ್ಷ