ಕಣಿವೆ, ಮಾ. ೧೭: ಕುಡಿಯುವ ನೀರಿನ ಕೊಳವೆ ಬಾವಿಗಳು ಕೈಕೊಟ್ಟ ಕಡೆಗಳಲ್ಲಿ ಅಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದAತೆ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತೊರೆನೂರು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಂಚಾಯಿತಿ ಅಧ್ಯಕ್ಷೆ ಜಿ.ಟಿ. ಶೋಭಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ಪಂಚಾಯಿತಿ ಸದಸ್ಯರು ಪಂಚಾಯಿತಿ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಯಾವುದೇ ತೊಂದರೆಯಾಗದAತೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.
ಸಿದ್ದಲಿAಗಪುರ, ಅರಿಶಿನ ಗುಪ್ಪೆ, ತೊರೆನೂರು, ಚಿಕ್ಕನಾಯಕನಹೊಸಳ್ಳಿ ಮತ್ತಿತರೆಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಿಸುತ್ತಿದೆ. ಹಾಗಾಗಿ ನಾಲ್ಕು ಟ್ಯಾಂಕರ್ಗಳಲ್ಲಿ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ಅಧ್ಯಕ್ಷೆ ಶೋಭಾ ಮಾಹಿತಿ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಲು ಚಿನ್ನೇನಹಳ್ಳಿಯಿಂದ ಎರೆಪಾರೆಯವರೆಗೆ ಅರಣ್ಯದಂಚಿನ ಉದ್ದಕ್ಕೂ ಸೂಕ್ತ ಆನೆ ಕಂದಕ ನಿರ್ಮಿಸಲು ಸಭೆಯಲ್ಲಿ ಸದಸ್ಯರಾದ ಎಂ.ಟಿ.ಬೇಬಿ ಹಾಗೂ ದೇವರಾಜು ಒತ್ತಾಯಿಸಿದರು.
ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷೆ ರೂಪ ಮಹೇಶ್, ಸದಸ್ಯರಾದ ಟಿ.ಸಿ. ಶಿವಕುಮಾರ್, ಎಂ.ಟಿ.ಬೇಬಿ, ಕೆ.ಬಿ.ದೇವರಾಜು, ತೀರ್ಥಾನಂದ, ಮಹಾದೇವ, ಸಾವಿತ್ರಿ, ಯಶೋಧ ಹಾಗು ಈರಾಜಮ್ಮ ಇದ್ದರು. ಪಂಚಾಯಿತಿ ಅಭಿವೃದ್ದಿ ಅಧಿಕಾರಿ (ಪ್ರಬಾರ) ಕಾವೇರಿ ಸ್ವಾಗತಿಸಿದರು.