ಮುತ್ತಪ್ಪ ದೇವರ ವಾರ್ಷಿಕೋತ್ಸವ
ಗೋಣಿಕೊಪ್ಪ ವರದಿ: ಮೈಸೂರಮ್ಮ ನಗರದ ಆಶೀರ್ವಾದ ಮುತ್ತಪ್ಪ ಭಕ್ತ ಮಂಡಳಿಯ ಮುತ್ತಪ್ಪ ದೇವರ ವಾರ್ಷಿಕೋತ್ಸವ ತಾ. ೨೩ ಮತ್ತು ೨೪ ರಂದು ಜರುಗಲಿದೆ.
ತಾ. ೨೩ ರಂದು ಬೆಳಿಗ್ಗೆ ೬.೩೦ ಗಂಟೆಗೆ ಗಣಪತಿ ಹೋಮದ ಮೂಲಕ ಆರಂಭಗೊಳ್ಳಲಿದೆ. ಧ್ವಜಾರೋಹಣ, ಕಲಶಪೂಜೆ, ಅಪರಾಹ್ನ ದೇವರ ಮಲೆ ಇಳಿಸುವುದು, ಸಂಜೆ ಮುತ್ತಪ್ಪ ದೇವರ ವೆಳ್ಳಾಟಂ, ಬಾಲಕಿಯರ ತಾಲಪ್ಪೊಲಿ ಆರತಿ, ರಾತ್ರಿ ವಸೂರಿಮಾಲ ತೆರೆ, ಅನ್ನಸಂತರ್ಪಣೆ, ಗುಳಿಗ ವೆಳ್ಳಾಟಂ, ಭಗವತಿ ವೆಳ್ಳಾಟಂ ನಡೆಯಲಿದೆ.
ತಾ. ೨೪ ರಂದು ಮುತ್ತಪ್ಪನ್ ಮತ್ತು ತಿರುವಪ್ಪನ್ ವೆಳ್ಳಾಟಂ, ಮಸೂರಿಮಾಲ ತೆರೆ, ಭಗವತಿ ತೆರೆ, ಗುಲಿಗ ತೆರೆ, ಅನ್ನಸಂತರ್ಪಣೆ ನೆರವೇರಲಿದೆ.
ಶ್ರೀ ಭಗವತಿ ದೇವಸ್ಥಾನದಲ್ಲಿ ಪೀಠ-ಬಿಂಬ ಪ್ರತಿಷ್ಠೆ ಸಂಪನ್ನ ವೀರಾಜಪೇಟೆ: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕುಕ್ಲೂರು ಗ್ರಾಮದ ಶ್ರೀ ಮುತ್ತಪ್ಪನ್ ದೇವರ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಗುರುವಾರ ಮಧ್ಯಾಹ್ನ ಬಸುರೀಮಾಲ ತೆರೆಯ ಮೂಲಕ ವಾರ್ಷಿಕ ತೆರೆ ಮಹೋತ್ಸವ ಅಂತ್ಯವಾಯಿತು. ಮುತ್ತಪ್ಪನ್ ವೆಳ್ಳಾಟಂ, ಶ್ರೀ ಶಾಸ್ತಪ್ಪ ವೆಳ್ಳಾಟಂ, ಗುಳಿಗ ವೆಳ್ಳಾಟಂ, ಪ್ರಮುಖ ಆಕರ್ಷಣೆಯಾದ ಬಸುರಿಮಾಲ ವೆಳ್ಳಾಟಂ, ಕರಿಂಗುಟ್ಟಿ ಶಾಸ್ತಪ್ಪನ್ ವೆಳ್ಳಾಟಂ, ಗುಳಿಗನ ತೆರೆ, ಮುತ್ತಪ್ಪನ್ ಮತ್ತು ತಿರುವಪ್ಪನ್ ತೆರೆ ನಡೆದವು.
ಎರಡು ದಿನಗಳು ನಡೆದ ವಾರ್ಷಿಕ ತೆರೆ ಮಹೋತ್ಸವ ಕಾರ್ಯಕ್ರಮದಲ್ಲಿ ದೇಗುಲದ ಆಡಳಿತ ಮಂಡಳಿಯ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇಗುಲದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಕುಕ್ಲೂರು ಗ್ರಾಮಸ್ಥರು, ನಗರ ಸೇರಿದಂತೆ ಸ್ಥಳೀಯ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತೆರೆ ದರ್ಶನದ ಆಶೀರ್ವಾದ ಪಡೆದರು.ಮಡಿಕೇರಿ: ಕೊಯಮತ್ತೂರಿನ ಈಶ ಫೌಂಡೇಶನ್ ವತಿಯಿಂದ ಮಹಾಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ಸದ್ಗುರುಗಳು, ಶಂಕರ್ ಮಹದೇವನ್ ಮತ್ತು ಸಂದೀಪ್ ನಾರಾಯಣ್ ಅವರುಗಳಿಂದ ಕಾವೇರಿ ಕುರಿತ ಹಾಡು ಪ್ರಸ್ತುತಗೊಂಡಿತು.
ಸAಜೆ ೬ ರಿಂದ ಮಾರನೇ ದಿನ ಬೆಳಿಗ್ಗೆ ೬ ರವರೆಗೆ ನಡೆದ ಈಶ ಮಹಾಶಿವರಾತ್ರಿ ಆಚರಣೆಯಲ್ಲಿ ಸದ್ಗುರುಗಳು ಬರೆದ ಮತ್ತು ಈ ಹಿಂದೆ ಪುನೀತ್ ರಾಜ್ಕುಮಾರ್ ಅವರು ಹಾಡಿದ್ದ "ಕಾವೇರಿ ಹಾಡು" ಎಂಬ ಕನ್ನಡ ಗೀತೆಯನ್ನು ಮೂವರು ಮಂದಿ ಹಾಡುವ ಮೂಲಕ ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಿದರು.
"ಕಾವೇರಿ ಹಾಡು" ದಕ್ಷಿಣ ಭಾರತದಲ್ಲಿ ಲಕ್ಷಾಂತರ ಜನರ ಜೀವನಾಡಿಯಾಗಿರುವ ಕಾವೇರಿ ನದಿಯನ್ನು ಸಂರಕ್ಷಿಸುವುದು ಮತ್ತು ಪುನರುಜ್ಜೀವನಗೊಳಿಸುವ ಸಂದೇಶವನ್ನು ಎತ್ತಿಹಿಡಿಯುತ್ತದೆ. ಪುನೀತ್ ರಾಜ್ಕುಮಾರ್ ಅವರು ಹಾಡಿದ್ದ ಈ ಹಾಡು ನದಿಯನ್ನು ಉಳಿಸಿ ಎಂಬ ಸಂದೇಶದೊAದಿಗೆ ಅನುಕರಣಿಸುವ ಮೂಲಕ ಮೂಡಿಬಂದಿತು.
ಶ್ರೀ ಅಗಸ್ತೆö್ಯÃಶ್ವರ ವಾರ್ಷಿಕೋತ್ಸವ ಸಂಪನ್ನನಾಪೋಕ್ಲು: ಸಮೀಪದ ಹೊದ್ದೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಭಗವತಿ ದೇವಸ್ಥಾನದಲ್ಲಿ ಪೀಠ ಪ್ರತಿಷ್ಠೆ, ಬಿಂಬ ಪ್ರತಿಷ್ಠೆಯನ್ನು ಅದ್ಧೂರಿಯಿಂದ ನೆರವೇರಿಸಲಾಯಿತು. ಅಧಿಕ ಸಂಖ್ಯೆಯ ಗ್ರಾಮಸ್ಥರು ಪ್ರತಿಷ್ಠಾಪನೆ ಕಾರ್ಯಕ್ಕೆ ಸಾಕ್ಷಿಯಾದರು. ಬುಧವಾರ ಬೆಳಿಗ್ಗೆ ಮೇಷಲಗ್ನ, ಶುಕ್ಲ ಪಕ್ಷ, ಚತುರ್ಥ ತಿಥಿ ಮುಹೂರ್ತದಲ್ಲಿ ಪೀಠ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ, ನಾಗ ಪ್ರತಿಷ್ಠೆ, ಬ್ರಹ್ಮ ಕಲಶ ಪೂಜೆ, ಸಂಜೆ ಆದಿವಾಸ ಹೋಮ, ದೀಪಾರಾಧನೆ, ಮಹಾಬಲಿ ಪೀಠ, ತ್ರಿಕಾಲ ಪೂಜೆ, ಕಲಶಾದಿ ವಾಸ, ರಾತ್ರಿ ವೈದಿಕ ಕಾರ್ಯಕ್ರಮಗಳು ಜರುಗಿದವು.
ಸುಮಾರು ರೂ. ೧.೫ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ದೇವಾಲಯ ಗ್ರಾಮದ ದೈವಿಕ ತಾಣವಾಗಿ ರೂಪುಗೊಂಡಿದೆ. ಮರಕಡ ಶ್ರೀ ಗುರಪರಾಶಕ್ತಿ ಮಠದ ನರೇಂದ್ರನಾಥ ಯೋಗೇಶ್ವರ ಮಹಾಸ್ವಾಮಿ, ನಿತಿನ್ ನರೇಂದ್ರನಾಥ ಯೋಗೇಶ್ವರ ಸ್ವಾಮಿ ನೇತೃತ್ವದಲ್ಲಿ ದೇವಾಲಯ ನೂತನವಾಗಿ ಜೀರ್ಣೋದ್ಧಾರಗೊಂಡಿದೆ.
ಬ್ರಹ್ಮಶ್ರೀ ಕೆ.ಯು. ಪದ್ಮನಾಭ ತಂತ್ರಿಗಳು ಮತ್ತು ಬಳಗ, ದೇವಾಲಯದ ಮುಖ್ಯ ಅರ್ಚಕ ಶ್ರೀಕಾಂತ್ ವೈದಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಈ ಸಂದರ್ಭ ಅರಮೇರಿ-ಕಳಂಚೇರಿ ಮಠದ ಸ್ವಾಮೀಜಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚೌರಿರ ಕೆ. ಮೇದಪ್ಪ, ದೇವತಕ್ಕ ನೆರವಂಡ ಸಂಜಯ್ ಪೂಣಚ್ಚ, ಸಮಿತಿ ಸದಸ್ಯ ಚೌರಿರ ಉದಯ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.ವೀರಾಜಪೇಟೆ: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕುಕ್ಲೂರು ಗ್ರಾಮದ ಶ್ರೀ ಮುತ್ತಪ್ಪನ್ ದೇವರ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಗುರುವಾರ ಮಧ್ಯಾಹ್ನ ಬಸುರೀಮಾಲ ತೆರೆಯ ಮೂಲಕ ವಾರ್ಷಿಕ ತೆರೆ ಮಹೋತ್ಸವ ಅಂತ್ಯವಾಯಿತು. ಮುತ್ತಪ್ಪನ್ ವೆಳ್ಳಾಟಂ, ಶ್ರೀ ಶಾಸ್ತಪ್ಪ ವೆಳ್ಳಾಟಂ, ಗುಳಿಗ ವೆಳ್ಳಾಟಂ, ಪ್ರಮುಖ ಆಕರ್ಷಣೆಯಾದ ಬಸುರಿಮಾಲ ವೆಳ್ಳಾಟಂ, ಕರಿಂಗುಟ್ಟಿ ಶಾಸ್ತಪ್ಪನ್ ವೆಳ್ಳಾಟಂ, ಗುಳಿಗನ ತೆರೆ, ಮುತ್ತಪ್ಪನ್ ಮತ್ತು ತಿರುವಪ್ಪನ್ ತೆರೆ ನಡೆದವು.
ಎರಡು ದಿನಗಳು ನಡೆದ ವಾರ್ಷಿಕ ತೆರೆ ಮಹೋತ್ಸವ ಕಾರ್ಯಕ್ರಮದಲ್ಲಿ ದೇಗುಲದ ಆಡಳಿತ ಮಂಡಳಿಯ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇಗುಲದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಕುಕ್ಲೂರು ಗ್ರಾಮಸ್ಥರು, ನಗರ ಸೇರಿದಂತೆ ಸ್ಥಳೀಯ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತೆರೆ ದರ್ಶನದ ಆಶೀರ್ವಾದ ಪಡೆದರು.ಮಡಿಕೇರಿ: ಕೊಯಮತ್ತೂರಿನ ಈಶ ಫೌಂಡೇಶನ್ ವತಿಯಿಂದ ಮಹಾಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ಸದ್ಗುರುಗಳು, ಶಂಕರ್ ಮಹದೇವನ್ ಮತ್ತು ಸಂದೀಪ್ ನಾರಾಯಣ್ ಅವರುಗಳಿಂದ ಕಾವೇರಿ ಕುರಿತ ಹಾಡು ಪ್ರಸ್ತುತಗೊಂಡಿತು.
ಸAಜೆ ೬ ರಿಂದ ಮಾರನೇ ದಿನ ಬೆಳಿಗ್ಗೆ ೬ ರವರೆಗೆ ನಡೆದ ಈಶ ಮಹಾಶಿವರಾತ್ರಿ ಆಚರಣೆಯಲ್ಲಿ ಸದ್ಗುರುಗಳು ಬರೆದ ಮತ್ತು ಈ ಹಿಂದೆ ಪುನೀತ್ ರಾಜ್ಕುಮಾರ್ ಅವರು ಹಾಡಿದ್ದ "ಕಾವೇರಿ ಹಾಡು" ಎಂಬ ಕನ್ನಡ ಗೀತೆಯನ್ನು ಮೂವರು ಮಂದಿ ಹಾಡುವ ಮೂಲಕ ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಿದರು.
"ಕಾವೇರಿ ಹಾಡು" ದಕ್ಷಿಣ ಭಾರತದಲ್ಲಿ ಲಕ್ಷಾಂತರ ಜನರ ಜೀವನಾಡಿಯಾಗಿರುವ ಕಾವೇರಿ ನದಿಯನ್ನು ಸಂರಕ್ಷಿಸುವುದು ಮತ್ತು ಪುನರುಜ್ಜೀವನಗೊಳಿಸುವ ಸಂದೇಶವನ್ನು ಎತ್ತಿಹಿಡಿಯುತ್ತದೆ. ಪುನೀತ್ ರಾಜ್ಕುಮಾರ್ ಅವರು ಹಾಡಿದ್ದ ಈ ಹಾಡು ನದಿಯನ್ನು ಉಳಿಸಿ ಎಂಬ ಸಂದೇಶದೊAದಿಗೆ ಅನುಕರಣಿಸುವ ಮೂಲಕ ಮೂಡಿಬಂದಿತು.
ಶ್ರೀ ಅಗಸ್ತೆö್ಯÃಶ್ವರ ವಾರ್ಷಿಕೋತ್ಸವ ಸಂಪನ್ನಸAಪಾಜೆ: ಸಂಪಾಜೆಯ ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಸಭಾಭವನಕ್ಕೆ ಹೇಮಾವತಿ ಮತ್ತು ಶ್ರೀ ಪುರುಷೋತ್ತಮ ಬಾಳೆಹಿತ್ಲು ಹಾಗೂ ಇವರ ಮಕ್ಕಳು ರೂ. ೩೫ ಸಾವಿರ ವೆಚ್ಚದ ಧ್ವನಿವರ್ಧಕ, ಧ್ವನಿ ಪೆಟ್ಟಿಗೆ ಹಾಗೂ ಇತರ ಪರಿಕರವನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭ ದೇವಸ್ಥಾನದ ಮೊಕ್ತೇಸರರಾದ ಎಂ.ಬಿ. ಸದಾಶಿವ, ಅಧ್ಯಕ್ಷ ಜಯಕುಮಾರ್ ಚೆದ್ಕಾರ್, ಹಿರಿಯರಾದ ಗೋಪಾಲಕೃಷ್ಣ ಅಂಬೆಕಲ್ಲು, ಗ್ರಾ.ಪಂ. ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಹೇಮಾವತಿ ಅವರು ಆಡಳಿತ ಮಂಡಳಿಯ ಸದಸ್ಯರಾಗಿಯೂ, ಪುರುಷೋತ್ತಮ ಅವರು ಜೀರ್ಣೋದ್ಧಾರದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ನಾಪೋಕ್ಲು: ಸಮೀಪದ ಬಲಮುರಿ ಗ್ರಾಮದ ಶ್ರೀ ಅಗಸ್ತೆö್ಯÃಶ್ವರ ದೇವರ ವಾರ್ಷಿಕೋತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿAದ ನಡೆಯಿತು. ಶನಿವಾರ ತೂಡು ಹಬ್ಬ, ಚೌಂಡಿ ಕೊಟದಲ್ಲಿ ಕೊಟ್ಟಿ ಹಾಡುವುದು ನಡೆಯಿತು.
ಭಾನುವಾರ ಮಧ್ಯಾಹ್ನ ಜಾತ್ರೆಯಲ್ಲಿ ಎತ್ತು ಪೋರಾಟ ಮತ್ತು ಮಹಾ ದೇವರ ಅವಭೃತ ಸ್ನಾನ, ದೇವರ ನೃತ್ಯ ಬಲಿ, ಪ್ರಸಾದ ವಿನಿಯೋಗ, ರಾತ್ರಿ ೮ ಗಂಟೆಯಿAದ ವಿವಿಧ ದೈವಗಳ ಕೋಲಗಳು ಜರುಗಿತು. ಸೋಮವಾರ ನಡೆದ ಅಜ್ಜಪ್ಪ ತೆರೆ, ವಿಷ್ಣುಮೂರ್ತಿ ಕೆಂಡ ಸೇವೆ, ಶುದ್ಧ ಕಲಶ ಪೂಜೆಗಳೊಂದಿಗೆ ಉತ್ಸವ ಸಂಪನ್ನಗೊAಡಿತು. ರಾತ್ರಿ ಶುದ್ಧ ಕಳಶ ಪೂಜೆ ನಡೆಯಿತು.
ದೇವರ ಉತ್ಸವದ ಪ್ರಯುಕ್ತ ಸೋಮವಾರ ಮಧ್ಯಾಹ್ನ ಭಕ್ತಾದಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ತಕ್ಕಮುಖ್ಯಸ್ಥರು, ಭಕ್ತರು ಪಾಲ್ಗೊಂಡಿದ್ದರು.