ನವದೆಹಲಿ, ಮಾ. ೧೭: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಅiಣizeಟಿshiಠಿ ಚಿmeಟಿಜmeಟಿಣ ಂಛಿಣ) ಮಸೂದೆಯನ್ನು ೨೦೧೯ರ ಡಿಸೆಂಬರ್ ೧೧ ರಂದು ಸಂಸತ್ತಿನಲ್ಲಿ ಮಂಡಿಸಿದಾಗ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ನಂತರ ಇದಕ್ಕೆ ಹಿಂಸಾತ್ಮಕ ಪ್ರತಿಭಟನೆಗಳೂ ನಡೆದು ಹತ್ತಾರು ಪ್ರತಿಭಟನಾಕಾರರು ಸಾವನ್ನಪ್ಪಿದ್ದರು. ವಿರೋಧ ಪಕ್ಷಗಳು ಈ ಕಾಯ್ದೆ ಮುಸ್ಲಿಮರ ವಿರೋಧಿ, ಧರ್ಮದ ಆಧಾರದಲ್ಲಿ ಪೌರತ್ವ ಎಂದು ಆರೋಪಿಸಿ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದವು. ಈ ಕಾಯ್ದೆಯು ರಾಷ್ಟçಪತಿಗಳ ಅಂಕಿತವನ್ನು ಪಡೆದಿದ್ದರೂ ಅಧಿಸೂಚನೆ ಹೊರಡಿಸಿರಲಿಲ್ಲ. ಆದರೆ ಇದೀಗ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಮೋದಿ ಸರ್ಕಾರ ಇದನ್ನು ಜಾರಿಗೆ ತಂದಿದೆ.
ಇಷ್ಟಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?
ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಮುಸ್ಲಿಂ ಮೂಲಭೂತವಾದಿಗಳ ಕಿರುಕುಳಕ್ಕೆ ಸಿಲುಕಿ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ಆ ದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಯೋಜನೆಯೇ ಪೌರತ್ವ ತಿದ್ದುಪಡಿ ಕಾಯ್ದೆ (ಅಂA). ಇದಕ್ಕಾಗಿ ೧೯೫೫ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ೨೦೧೪ರ ಡಿಸೆಂಬರ್ಗಿAತ ಮೊದಲು ಕಿರುಕುಳಕ್ಕೆ ಸಿಲುಕಿ ಭಾರತಕ್ಕೆ ಆಗಮಿಸಿದ ಅಲ್ಪಸಂಖ್ಯಾತ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ.
ಮುಸ್ಲಿಂ ಲೀಗ್ ವಿರೋಧ
ಆದರೆ ಸಿಎಎ ಜಾರಿ ವಿರೋಧಿಸಿ ಕೇರಳ ಮೂಲದ ಮುಸ್ಲಿಂ ಲೀಗ್ ಪಕ್ಷವು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದರಿಂದ, ಅದು ಸಂವಿಧಾನದ ಮೂಲ ರಚನೆಯಾದ ಜಾತ್ಯತೀತತೆಯ ಮೂಲವನ್ನು ಉಲ್ಲಂಘಿಸಿದೆ ಮತ್ತು ಭಾರತದ ಸಾಂವಿಧಾನಿಕ ಚೌಕಟ್ಟು, ಅಂರ್ರಾಷ್ಟಿçÃಯ ಕಾನೂನಿನ ಕಟ್ಟುಪಾಡುಗಳೊಂದಿಗೆ ನಿರಾಶ್ರಿತರ ರಕ್ಷಣೆಯ ಚೌಕಟ್ಟನ್ನು ಯಾವುದೇ ತಾರತಮ್ಯವಿಲ್ಲದೆ ಕಡ್ಡಾಯಗೊಳಿಸುತ್ತದೆ ಎಂದು ವಕೀಲರ ಮೂಲಕ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ. ಆದರೆ ಅನೇಕ ಮುಸ್ಲಿಂ ಸಂಘಟನೆಗಳು, ಮೌಲ್ವಿಗಳು ಈ ಕಾಯ್ದೆ ಜಾರಿಯನ್ನು ಸ್ವಾಗತಿಸಿದ್ದಾರೆ.
ವಾದ ತಿರಸ್ಕರಿಸಿದ ಕೇಂದ್ರ
ಪೌರತ್ವ ಮತ್ತು ವಿದೇಶಾಂಗ ನೀತಿಯ ವಿಷಯಗಳು ಸಂಸತ್ತಿನ ಪರಮಾಧಿಕಾರದ ವ್ಯಾಪ್ತಿಯಲ್ಲಿ ಬರುವುದರಿಂದ ಸಿಎಎಯ ಕಾನೂನು ಬದ್ಧತೆಯು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯಲ್ಲಿರಬಾರದು ಎಂದು ಕೇಂದ್ರ ಸರ್ಕಾರವು ಹೇಳಿದೆ. ಸಂಸತ್ತಿನ ಸಾರ್ವಭೌಮ ಅಧಿಕಾರಕ್ಕೆ ಸಂಬAಧಿಸಿದ, ವಿಶೇಷವಾಗಿ ಪೌರತ್ವಕ್ಕೆ ಸಂಬAಧಿಸಿದ ಸಮಸ್ಯೆಗಳಿಗೆ ಪಿಐಎಲ್ಗಳನ್ನು ಸಲ್ಲಿಸುವ ಮೂಲಕ ಪ್ರಶ್ನಿಸಲಾಗುವುದಿಲ್ಲ ಎಂದು ಸರ್ಕಾರ ಪ್ರತಿಪಾದಿಸಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಮೂಲಕ ಸಲ್ಲಿಸಿದ ಅಫಿಡವಿಟ್ ಪ್ರಕಾರ, ವಲಸಿಗರನ್ನು ಹೊರಗಿಡುವ ಅಧಿಕಾರವು ಸರಿಯಾಗಿ ರಚಿತವಾದ ರಾಷ್ಟç-ರಾಜ್ಯ ಮತ್ತು ವಲಸೆ ನೀತಿಗೆ ಸೇರಿದ ಸಾರ್ವಭೌಮತ್ವದ ಪ್ರಶ್ನೆಯಾಗಿದೆ.
ಗೃಹ ಸಚಿವಾಲಯವು ತನ್ನ ೨೦೨೨ ರ ಅಫಿಡವಿಟ್ನಲ್ಲಿ ಮೂರು ನೆರೆಯ ದೇಶಗಳಿಂದ ವರ್ಗೀಕೃತ ಸಮುದಾಯಗಳ ನಿವಾಸಿಗಳು - ಹಿಂದೂಗಳು, ಸಿಖ್ಗಳು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರ ಉಪಸ್ಥಿತಿಯು "ಬಾಹ್ಯ ಆಕ್ರಮಣ" ಅಥವಾ "ಆಂತರಿಕ ಅಡಚಣೆ"ಯನ್ನು ಹೊಂದಿಲ್ಲ ಆದ್ದರಿಂದ ಸಂವಿಧಾನದ ೩೫೫ನೇ ವಿಧಿಯನ್ನು ಉಲ್ಲಂಘಿಸಿದAತಾಗುವುದಿಲ್ಲ ಎಂದು ಹೇಳಿದೆ.
ಸಿಎಎ ಹಿಂಪಡೆಯುವುದಿಲ್ಲ
ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಬುಧವಾರ ಸ್ಪಷ್ಟಪಡಿಸಿದ್ದು ‘ಸಿಎಎ ಅಸಾಂವಿಧಾನಿಕ' ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ್ದಾರೆ.
‘ಇದು (ಸಿಎಎ) ದೇಶದಲ್ಲಿ ಭಾರತೀಯ ಪೌರತ್ವವನ್ನು ಖಾತ್ರಿಪಡಿಸಿಕೊಳ್ಳಲು ಇರುವ ಸಾರ್ವಭೌಮ ಹಕ್ಕಾಗಿದೆ. ಸಿಎಎ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಇದನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.' ವಿರೋಧ ಪಕ್ಷಗಳ ನಾಯಕರು ಸಂವಿಧಾನದ ೧೪ನೇ ವಿಧಿಯ ಎರಡು ಅನುಚ್ಛೇದಗಳನ್ನು ಮರೆತಿದ್ದಾರೆ. ಅವುಗಳಲ್ಲಿ ಸ್ಪಷ್ಟ, ಸಮಂಜಸವಾದ ವರ್ಗೀಕರಣಗಳಿವೆ. ಈ ಕಾನೂನು ೧೪ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಎಂದಿದ್ದಾರ. ರಾಷ್ಟಿçÃಯ ಪೌರತ್ವ ನೋಂದಣಿಗೆ (ಎನ್ಆರ್ಸಿ) ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಕ್ಕೆ ಈ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇರಳ, ಪಶ್ಚಿಮ ಬಂಗಾಳ ರಾಜ್ಯ ವಿರೋಧ
ದೇಶದಲ್ಲಿ ಸಿಎಎ ಜಾರಿಗೆ ಕೇರಳದ ಕಮ್ಯುನಿಸ್ಟ್ ಸರ್ಕಾರದ ಮುಖ್ಯ ಮಂತ್ರಿ ಪಿನರಾಯಿ ವಿಜಯನ್ ವಿರೋಧಿಸಿದ್ದು ಕೇರಳದಲ್ಲಿ ಜಾರಿ ಮಾಡುವುದಿಲ್ಲ ಎಂದಿದ್ದಾರೆ. ಪಶ್ಚಿಮ ಬಂಗಾಳವೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಸಂವಿಧಾನದ ಪ್ರಕಾರ ಪೌರತ್ವದ ವಿಷಯವು ದೇಶದ ವಿದೇಶಾಂಗ ನೀತಿಯ ಅಡಿಯಲ್ಲಿ ಬರುವುದರಿಂದ ರಾಜ್ಯಗಳು ಪೌರತ್ವ ಕುರಿತು ತೀರ್ಮಾನಿಸುವ ಪ್ರಶ್ನೆಯೇ ಬರುವುದಿಲ್ಲ. ಇದು ಕೇಂದ್ರ ಸರ್ಕಾರದ ಪರಮಾಧಿಕಾರಕ್ಕೆ ಸಂಬAಧಿಸಿದ್ದಾಗಿದ್ದು ರಾಜ್ಯಗಳ ಪಾತ್ರವೇ ಇರುವುದಿಲ್ಲ.
ಪಾಕಿಸ್ಥಾನದ ಹಿಂದೂ ನಿರಾಶ್ರಿತರಿಗೆ ಸಂತಸ
ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿರುವ ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯದವರು ಅಲ್ಲಿ ಮತಾಂಧರ ದೌರ್ಜನ್ಯ ತಾಳಲಾರದೆ ಇಲ್ಲಿನ ಗುಜರಾತ್, ರಾಜಾಸ್ಥಾನದಲ್ಲಿ ಆಶ್ರಯ ಪಡೆದುಕೊಂಡಿರುವ ನೂರಾರು ನಿರಾಶ್ರಿತರು ಕಾಯ್ದೆ ಜಾರಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರ ಪಾಲಿನ ನರಕ ಎಂದೇ ಬಣ್ಣಿಸಲಾಗಿರುವ ದೇಶದಲ್ಲಿ ಮೂಲಭೂತವಾದಿಗಳು ಅಲ್ಪಸಂಖ್ಯಾತ ಹೆಣ್ಣು ಮಕ್ಕಳನ್ನು ಅಪಹರಿಸುವುದು, ಬಲವಂತವಾಗಿ ಮದುವೆ ಮಾಡಿಸುವುದು, ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ನಾಶಪಡಿಸುವ ದುಷ್ಕೃತ್ಯದಲ್ಲಿ ತೊಡಗಿದ್ದಾರೆ. ಅಲ್ಲಿನ ಮಾನವ ಹಕ್ಕು ಆಯೋಗ ಅಥವಾ ಪೊಲೀಸರೂ ಕೊನೆಗೆ ಕೋರ್ಟ್ ಕೂಡ ಮೂಲಭೂತವಾದಿಗಳಿಗೆ ಶಿಕ್ಷೆ ವಿಧಿಸುವಲ್ಲಿ ವಿಫಲವಾಗಿದೆ. ಹೀಗಾಗಿ ನಿರಾಶ್ರಿತರು ಭಾರತಕ್ಕೆ ಬರುತಿದ್ದಾರೆ.
ಪೌರತ್ವಕ್ಕೆ ಅರ್ಜಿ ಸಲ್ಲಿಕೆ ಆರಂಭ
ಈ ನಡುವೆ ಪೌರತ್ವ (ತಿದ್ದುಪಡಿ) ಕಾಯ್ದೆ ೨೦೧೯ ರ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುವ ವ್ಯಕ್ತಿಗಳಿಗಾಗಿ ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ವೆಬ್ ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ. ಈ ಸರ್ಕಾರದ ಉಪಕ್ರಮವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳ ಅಧಿಸೂಚನೆಯ ಒಂದು ದಿನದ ನಂತರ ಬಂದಿದೆ. ಶೀಘ್ರದಲ್ಲೇ ಅಂA-೨೦೧೯ ಹೆಸರಿನ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸರ್ಕಾರ ಯೋಜಿಸಿದೆ, ಇದರಿಂದಾಗಿ ಅರ್ಜಿದಾರರು ತಮ್ಮ ಫೋನ್ಗಳ ಮೂಲಕ ತಮ್ಮ ಅರ್ಜಿಗಳನ್ನು ಅನುಕೂಲಕರವಾಗಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಎ ಅಧಿಸೂಚನೆಯನ್ನು ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಈ ನಿಯಮಗಳ ಅಡಿಯಲ್ಲಿ, ಡಿಸೆಂಬರ್ ೩೧, ೨೦೧೪ ರ ಮೊದಲು ಭಾರತಕ್ಕೆ ವಲಸೆ ಬಂದ ಹಿಂದೂಗಳು, ಸಿಖ್ಖರು, ಜೈನರು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಪಾರ್ಸಿಗಳನ್ನು ಒಳಗೊಂಡಿರುವ ಆರು ಧಾರ್ಮಿಕ ಅಲ್ಪಸಂಖ್ಯಾತರು ಭಾರತೀಯ ಪೌರತ್ವವನ್ನು ಪಡೆಯಲು ಅರ್ಹರಾಗಿದ್ದಾರೆ. ಇದನ್ನು hಣಣಠಿs:/ iಟಿಜiಚಿಟಿಛಿiಣizeಟಿshiಠಿ oಟಿಟiಟಿe.ಟಿiಛಿ.iಟಿ ರಲ್ಲಿ ಪ್ರಕಟಿಸಲಾಗಿದೆ.
ಡಿಸೆಂಬರ್ ೩೧, ೨೦೧೪ ರ ಮೊದಲು ಭಾರತದಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ಈ ನಿಯಮಗಳು ಭಾರತೀಯ ಪೌರತ್ವವನ್ನು ಒದಗಿಸುತ್ತವೆ. ಸಿಎಎ ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಆನ್ಲೈನ್ ಪ್ಲಾಟ್ಫಾರ್ಮ್ ಮತ್ತು ಮೊಬೈಲ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಮಾತ್ರವಲ್ಲದೆ ಮುಸ್ಲಿಮೇತರ ವಲಸಿಗರು ತಮ್ಮ ಸ್ಮಾರ್ಟ್ ಫೋನ್ ಬಳಕೆಯ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
- ಕೋವರ್ಕೊಲ್ಲಿ ಇಂದ್ರೇಶ್