ಕರಿಕೆ, ಮಾ. ೧೭. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಜಿಲ್ಲೆಯ ಗಡಿ ಗ್ರಾಮ ಕರಿಕೆಗೆ ನೂತನವಾಗಿ ಎರಡು ಕೆಎಸ್ಆರ್ಟಿಸಿ ಬಸ್ ಸಂಚಾರ ಶನಿವಾರ ಆರಂಭಗೊAಡಿತು. ಶಾಸಕರಾದ ಎ.ಎಸ್. ಪೊನ್ನಣ್ಣ ನವರು ಮಾಡಿದ್ದ ಶಿಪಾರಸ್ಸಿನ ಮೇರೆಗೆ ಸಾರಿಗೆ ಇಲಾಖೆ ಎರಡು ಬಸ್ ಸಂಚಾರ ಹಲವು ದಿನಗಳ ಹಿಂದೆ ಆರಂಭಿಸಿದ್ದು. ಕರಿಕೆ ಗ್ರಾಮದಲ್ಲಿ ಬಸ್ಸನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ನೂತನ ಬಸ್ಸಿನೊಂದಿಗೆ ಆಗಮಿಸಿದ ಮಡಿಕೇರಿ ಡಿಪೋ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ ಮಾತನಾಡಿ ಬೆಳಿಗ್ಗೆ ೭.೩೦ಕ್ಕೆ ಹೊರಟು ಭಾಗಮಂಡಲ ಮಾರ್ಗವಾಗಿ ೧೦.೧೫ಕ್ಕೆ ಕರಿಕೆ ತಲುಪಿ ನಂತರ ೧೦.೩೦.,ಕ್ಕೆ ಕರಿಕೆಯಿಂದ ಮತ್ತೆ ಹೊರಟು ೧.೧೫ ಕ್ಕೆ ಮಡಿಕೇರಿ ತಲುಪಲಿದ್ದು, ಮತ್ತೊಂದು ಬಸ್ ೧ ಗಂಟೆಗೆ ಮಡಿಕೇರಿಯಿಂದ ಹೊರಟು ಭಾಗಮಂಡಲ ಮಾರ್ಗವಾಗಿ ೩.೪೫ ಕ್ಕೆ ಕರಿಕೆ ತಲುಪಿ ೪ ಗಂಟೆಗೆ ಕರಿಕೆ ಯಿಂದ ಹೊರಟು ೬.೪೫ ಕ್ಕೆ ಮಡಿಕೇರಿ ತಲುಪುವುದಾಗಿ ತಿಳಿಸಿದರು.
ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್, ಅಭಿವೃದ್ಧಿ ಅಧಿಕಾರಿ ಪಿ.ಪಿ. ಗಣಪತಿ, ಪ್ರಮುಖರಾದ ಬೇಕಲ್ ಹರಿಪ್ರಸಾದ್, ರಮಾನಾಥ್ ಸೇರಿದಂತೆ ಗ್ರಾಮಸ್ಥರು ಬಸ್ಸನ್ನು ಬರಮಾಡಿಕೊಂಡರು.