ಪಳೆಯAಡ ಪಾರ್ಥಚಿಣ್ಣಪ್ಪ
ವೀರಾಜಪೇಟೆ, ಮಾ. ೧೭: ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ಆಯೋಜನೆಗೊಂಡಿದ್ದ ನೆಸ್ಕೆಫೆ ಕೊಡಗು ಕಪ್ ಹಾಕಿ ಪಂದ್ಯಾವಳಿಯಲ್ಲಿ ಬ್ಲೆಸ್ ಮೂರ್ನಾಡು ತಂಡವು ಕೋಣನಕಟ್ಟೆ ತಂಡವನ್ನು ೧-೦ ಗೋಲಿನ ಅಂತರದಿAದ ಪರಾಭವಗೊಳಿಸಿ ರೂ. ೭೫ ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿತು. ಕೋಣನಕಟ್ಟೆ ತಂಡವು ರೂ. ೫೦ ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಆರAಭದಿAದಲೇ ಎರಡು ತಂಡಗಳು ಸಂಘಟಿತ ಆಟಕ್ಕೆ ಒತ್ತು ನೀಡಿದವು. ಎರಡು ತಂಡದಲ್ಲಿಯೂ ನುರಿತ ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಮಟ್ಟದ ತಲಾ ೬ ಅತಿಥಿ ಆಟಗಾರರಿದ್ದರು. ನಿಗದಿತ ಅವಧಿಯ ೫೪ ನಿಮಿಷದಲ್ಲಿ ಕೋಣನಕಟ್ಟೆ ತಂಡದ ಆಟಗಾರ ‘ಡಿ’ ಆವರಣದಲ್ಲಿ ಮಾಡಿದ ತಪ್ಪಿಗೆ ರಾಷ್ಟಿçÃಯ ತೀರ್ಪುಗಾರ ಕೊಂಡಿರ ಕೀರ್ತಿ ಮುತ್ತಪ್ಪ ಪೆನಾಲ್ಟಿ ಸ್ಟೊçÃಕ್ ನೀಡಿದರು. ಮೂರ್ನಾಡು ಬ್ಲೇಸ್ ತಂಡದ ಮೇರಿಯಂಡ ರಾಯ್ ಅಯ್ಯಣ್ಣ ಇದನ್ನು ಗೋಲಾಗಿ ಪರಿವರ್ತಿಸಿ ತಂಡದ ಖಾತೆ ತೆರೆದು ಏಕೈಕ ಗೋಲು ಬಾರಿಸಿ ಗೆಲುವಿಗೆ ಕಾರಣೀಭೂತರಾದರು. ಕೋಣನಕಟ್ಟೆ ಗೋಲು ದಾಖಲಿಸದೆ ಸೋಲಗೆ ಶರಣಾಯಿತು.
ಈ ಪಂದ್ಯಾಟದಲ್ಲಿ ಬೆಸ್ಟ್ ಗೋಲ್ ಕೀಪರ್ ಆಗಿ ಮೂರ್ನಾಡು ಬ್ಲೆಸ್ ತಂಡದ ಐನಂಡ ಶಾನ್ ಪೊನ್ನಪ್ಪ, ಸರಣಿ ಪುರುಷೋತ್ತಮನಾಗಿ ಮೂರ್ನಾಡು ಬ್ಲೆಸ್ ತಂಡದ ಮೇರಿಯಂಡ ರಾಯ್ ಅಯ್ಯಣ್ಣ, ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರನಾಗಿ ಈಶ್ವರ್ ಯೂತ್ ಕ್ಲಬ್ ಬೇಗೂರು ತಂಡದ ಪುದಿಯೊಕ್ಕಡ ಪ್ರದಾನ್ ಸೋಮಣ್ಣ ಪ್ರಶಸ್ತಿ ಪಡೆದುಕೊಂಡರು.
ಪಂದ್ಯಾಟದ ತೀರ್ಪುಗಾರರಾಗಿ ನೆಲ್ಲಮಕ್ಕಡ ಪವನ್ ಮುತ್ತಪ್ಪ, ಕೊಂಡಿರ ಕೀರ್ತಿ ಮುತ್ತಪ್ಪ ಕಾರ್ಯ ನಿರ್ವಹಿಸಿದರು. ತಾಂತ್ರಿಕ ಸಮಿತಿ ನಿರ್ದೇಶಕರಾಗಿ ಚೆಯ್ಯಂಡ ಅಪ್ಪಚ್ಚು ಕಾರ್ಯನಿರ್ವಹಿಸಿದರು. ಮಾಳೇಟಿರ ಶ್ರೀನಿವಾಸ್ ಹಾಗೂ ಚೆಪ್ಪುಡಿರ ಕಾರ್ಯಪ್ಪ, ಮೂಕಚಂಡ ಬೊಳ್ಳಮ್ಮ, ಬಲ್ಯಮಾಡ ಮಾದಪ್ಪ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು. ಮಾಪಂಗAಡ ಯುಮನಾ ಚಂಗಪ್ಪ ಸ್ವಾಗತಿಸಿದರು. ತಿಂಗಕೋರ್ ಮೊಟ್ಟ್ ತಲಕಾವೇರಿ ತಂಡದ ಕಚ್ಚಪನೆರ ವಿನು ಚಿಣ್ಣಪ್ಪ ಹಾಗು ಕೊಟ್ಟಂಗಡ ವರ್ಷಿತ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕೊಡಗನ್ನು ಉಳಿಸಿ - ಪ್ರತಾಪ್ ಸಿಂಹ
ಅಧಿಕಾರದಲ್ಲಿ ಇದ್ದರು ಇಲ್ಲದಿದ್ದರು ಕೊಡಗಿನ ಜನತೆಯ ಪ್ರೀತಿ ವಿಶ್ವಾಸವನ್ನು ಮರೆಯುವುದಿಲ್ಲ. ಕೊಡಗಿನ ಜನತೆ ಎಂದೆAದಿಗೂ ನನ್ನೊಂದಿಗೆ ಇದ್ದಾರೆ, ಇರುತ್ತಾರೆ ಎಂಬ ನಂಬಿಕೆ ವಿಶ್ವಾಸ ತನ್ನಲ್ಲಿದೆ. ಜನತೆಯ ಬೇಡಿಕೆಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತೇನೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕೀಯದಲ್ಲಿ ಏಳು - ಬೀಳು ಸಹಜ. ೧೦ ವರ್ಷದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಸ್ವಲ್ಪ ಕೆಲಸ ಬಾಕಿ ಇದೆ. ಬೇರೆ ರೀತಿಯಲ್ಲಿ ಆ ಕೆಲಸವನ್ನು ಮಾಡಿ ಮುಗಿಸುತ್ತೇನೆ. ಕೊಡವ ಸಂಸ್ಕೃತಿ ಎಂದರೆ ಭಾಷೆ, ಉಡುಗೆ ತೊಡುಗೆ, ವಾಲಗ ಹುತ್ತರಿ ಹಬ್ಬ ಮಾತ್ರವಲ್ಲ. ಗದ್ದೆ, ಭೂಮಿ, ತೋಟ ಇವೆಲ್ಲವನ್ನು ಉಳಿಸಿಕೊಳ್ಳುವುದು ಕೊಡವ ಸಂಸ್ಕೃತಿಯಾಗಿದೆ. ಇದನ್ನು ಅನ್ಯ ಜಿಲ್ಲೆ, ರಾಜ್ಯದವರಿಗೆ ಮಾರಾಟ ಮಾಡಬೇಡಿ ಎಂದು ಹೇಳಿದರು. ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ ಮಾತನಾಡಿ ಕೊಡಗು ಜಿಲ್ಲೆ ಹಾಕಿಯ ತವರೂರಾಗಿದೆ. ರಾಜ್ಯ, ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಹಲವಾರು ಜಿಲ್ಲೆಯ ಆಟಗಾರರು ಸಾಧನೆ ಮಾಡಿದ್ದಾರೆ. ನೆಸ್ಕೆಫೆ ಸಂಸ್ಥೆ ಕೊಡಗಿನ ಜನತೆ ಹಾಗೂ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಪಂದ್ಯಾವಳಿ ನಿಲ್ಲಬಾರದು ಮುಂದುವರೆಯಬೇಕು. ನೆಸೆಕೆಫೆ ಸಂಸ್ಥೆಯವರು ಯಾವುದಾದರು ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ದಿ ಪಡಿಸಿದರೆ ಉತ್ತಮ ಎಂದು ಸಲಹೆ ನೀಡಿದರು.
ನೆಸ್ಕೆಫೆ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ನಾರಾಯಣ್ ಮಾತನಾಡಿ, ಕೊಡಗು ಎಂದರೆ ಸೈನ್ಯ ಮತ್ತು ಹಾಕಿ ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಕೊಡವ ಜನಾಂಗದವರು ಹಾಕಿಯನ್ನು ಅಂತರರಾಷ್ಟಿçÃಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕೊಡಗು ಕಾಫಿಗೂ ನೆಸ್ಕೆಫೆ ಸಂಸ್ಥೆಗೂ ಅವಿನಾಭಾವ ಸಂಬAಧ ಇದೆ. ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದ ಹಾಕಿ ಪಂದ್ಯಾಟವನ್ನು ಮರು ಪ್ರಾರಂಭಿಸಿದ ನಮ್ಮ ಸಂಸ್ಥೆಯ ಮಿಡಲ್ ಏಷ್ಯಾ ಮತ್ತು ನಾರ್ಥ್ ಆಫ್ರಿಕಾದ ಬಿಸ್ನೆಸ್ ಡೆವಲಪ್ಮೆಂಟ್ ಅಧಿಕಾರಿ ಕರ್ತಮಾಡ ವಿಕ್ರಂ ಸುಬ್ಬಯ್ಯ ಅವರ ಪ್ರಯತ್ನ ಹಾಗು ಸಾಧನೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷ ಪಳಂಗAಡ ಲವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನೆಸ್ಕೆಫೆ ಮಿಡಲ್ ಏಷ್ಯಾ ಮತ್ತು ನಾರ್ಥ್ ಆಫ್ರಿಕಾದ ಬಿಸ್ನೆಸ್ ಡೆವಲಪ್ಮೆಂಟ್ ಅಧಿಕಾರಿ ಕರ್ತಮಾಡ ವಿಕ್ರಂ ಸುಬ್ಬಯ್ಯ ನೆಸ್ಲೆ ಸಂಸ್ಥೆಯ ಅಧಿಕಾರಿ ರಣಬೀರ್ ಮಾನ್ಸಿಂಗ್, ಗುರುರಾಜ್ ಪ್ರದೀಪ್ ದೀಮನ್. ಹಾಕಿ ಕರ್ನಾಟಕದ ಕಾರ್ಯದರ್ಶಿ ಅಂಜಪರವAಡ ಸುಬ್ಬಯ್ಯ, ಹಾಕಿ ಕೂರ್ಗ್ ಸಂಸ್ಥೆಯ ಕಾರ್ಯದರ್ಶಿ ಅಮ್ಮಂಡಿರ ಚೇತನ್ ಉಪಸ್ಥಿರಿದ್ದರು.