ಮಡಿಕೇರಿ, ಮಾ. ೧೭: ರಾಜ್ಯದಲ್ಲಿ ಮಾದರಿ ಸಹಕಾರ ಸಂಘವಾಗಿ ಖ್ಯಾತಿ ಗಳಿಸಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮುಂದಿನ ೫ ವರ್ಷ ಆಡಳಿತ ಮಂಡಳಿಯ ೧೩ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಸ್ಪಷ್ಟಬಹುಮತ ದಾಖಲಿಸುವ ಮೂಲಕ ಮತ್ತೇ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಿದ್ದಾರೆ. ಬಿಜೆಪಿ ಬೆಂಬಲಿತರೇ ಹೆಚ್ಚಾಗಿ ಸ್ಪರ್ಧಿಸಿದ್ದು, ಬಹುತೇಕರು ಜಯಗಳಿಸಿದ್ದಾರೆ. ಬಿಜೆಪಿ ಅಧಿಕೃತ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಒಂಡಾಯವಾಗಿ ಸ್ಪರ್ಧಿಸಿದ್ದ ಓರ್ವರು ಜಯಗಳಿಸಿದ್ದು, ಇತರರು ಸೋಲು ಕಂಡಿದ್ದಾರೆ.

ರಾಜಕೀಯ ಪಕ್ಷಗಳ ಚಿಹ್ನೆಯಡಿ ಚುನಾವಣೆ ನಡೆಯದಿದ್ದರೂ ಬಹುತೇಕ ರಾಜಕೀಯ ಪಕ್ಷಗಳ ಬೆಂಬಲದೊAದಿಗೆ ಸ್ಪರ್ಧಿಸುವ ಹಿನ್ನೆಲೆ ಅತ್ಯಂತ ಕೌತುಕವನ್ನು ಚುನಾವಣೆ ಸೃಷ್ಟಿಸಿತ್ತು. ಒಟ್ಟು ೧೩ ಸ್ಥಾನಗಳ ಪೈಕಿ ಈಗಾಗಲೇ ಧÀವಸ ಭಂಡಾರ ಕ್ಷೇತ್ರದಿಂದ ಗುಮ್ಮಟ್ಟೀರ ಕಿಲನ್ ಗಣಪತಿ ಅವಿರೋಧ ಆಯ್ಕೆಯಾಗಿದ್ದರು. ಉಳಿದ ೧೨ ಸ್ಥಾನಗಳಿಗೆ ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಉನ್ನತಿ ಭವನದಲ್ಲಿ ಚುನಾವಣೆ ಪ್ರಕ್ರಿಯೆ ಚುನಾವಣಾಧಿಕಾರಿ ವಿನಾಯಕ್ ನರ್ವಡೆ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.

ಬೆಳಿಗ್ಗಿನಿಂದಲೇ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತದಾನದ ಕೇಂದ್ರದ ಎದುರು ಆಗಮಿಸಿ ಮತದಾರರನ್ನು ಕೊನೆಯದಾಗಿ ಮತಯಾಚಿಸುವ ದೃಶ್ಯಗಳು ಕಂಡುಬAದವು. ವೀರಾಜಪೇಟೆ, ಮಡಿಕೇರಿ, ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ತಲಾ ೩, ಪಟ್ಟಣ ಸಹಕಾರ ಬ್ಯಾಂಕ್‌ಗಳು ಮತ್ತು ಕೃಷಿಯೇತ್ತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ, ಮಹಿಳಾ ಕ್ಷೇತ್ರ, ಇತರೆ ಸಹಕಾರ ಸಂಘಗಳ ಕ್ಷೇತ್ರದ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆಯಿತು. ೧೨ ಸ್ಥಾನಗಳಿಗೆ ೨೫ ಸ್ಪರ್ಧಿಗಳು ಚುನಾವಣಾ ಕಣದಲ್ಲಿದ್ದರು.

ಪ್ರತಿ ಸಹಕಾರ ಸಂಘಗಳಿAದ ಓರ್ವ ಪ್ರತಿನಿಧಿಯಂತೆ ಆಗಮಿಸಿ ಮತ ಚಲಾಯಿಸಲು ಅವಕಾಶವಿತ್ತು. ಮಡಿಕೇರಿ ಕ್ಷೇತ್ರಕ್ಕೆ ೨೧, ವೀರಾಜಪೇಟೆ ಕ್ಷೇತ್ರಕ್ಕೆ ೨೭, ಸೋಮವಾರಪೇಟೆಗೆ ೨೨ ಮತದಾರರು, ಪಟ್ಟಣ ಸಹಕಾರ ಸಂಘÀ, ಕೃಷಿಯೇತ್ತರ ಪತ್ತಿನ ಸಹಕಾರ ಸಂಘ ಕ್ಷೇತ್ರಕ್ಕೆ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ೨೯, ಮಹಿಳಾ ಮೀಸಲು ಕ್ಷೇತ್ರಕ್ಕೆ ೧೪, ಇತರೆ ಸಹಕಾರ ಸಂಘಕ್ಕೆ ೩೭ ಮತದಾರರು ಮತದಾನ ಮಾಡಿದರು.

ವೀರಾಜಪೇಟೆ, ಮಡಿಕೇರಿ ಕ್ಷೇತ್ರದಲ್ಲಿ ಇತರ ಪಕ್ಷಗಳ ಬೆಂಬಲಿತರು ಸ್ಪರ್ಧಿಸದಿದ್ದರೂ ಬಿಜೆಪಿಗೆ ಬಂಡಾಯಗಾರರ ಬಿಸಿ ಕಾಡುತಿತ್ತು. ಬೆಳಿಗ್ಗೆ ೧೦ ಗಂಟೆಯಿAದ ಆರಂಭ ಗೊಂಡ ಚುನಾವಣಾ ಪ್ರಕ್ರಿಯೆಯಲ್ಲಿ ಆಯಾ ಕ್ಷೇತ್ರದ ಮತದಾರರು ಆಗಮಿಸಿ ಮತ ಚಲಾಯಿಸಿದರು. ಒಂದು ಮತವೂ ಅನರ್ಹಗೊಳ್ಳದಿ ರುವುದು ಮತ್ತೊಂದು ವಿಶೇಷವಾಗಿತ್ತು.

ಮಾಜಿ ಶಾಸಕರುಗಳಾದ ಮಂಡೇಪAಡ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ದಕ್ಷಿಣ ಕನ್ನಡ ಬಿಜೆಪಿ ಪ್ರಭಾರಿ ಬಿ.ಬಿ. ಭಾರತೀಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ನಗರಸಭಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಎಸ್. ಚಂದ್ರಮೌಳಿ ಸೇರಿದಂತೆ ವಿವಿಧ ಪಕ್ಷದ ನಾಯಕರು ಮತಕೇಂದ್ರಕ್ಕೆ ಆಗಮಿಸಿ ತಮ್ಮ ಅಭ್ಯರ್ಥಿಗಳನ್ನು ಹುರಿದುಂಬಿಸುವ ಕೆಲಸ ಮಾಡಿದರು.

ಬಾಂಡ್ ಗಣಪತಿಗೆ ಜಯ

ಇಬ್ಬರು ಪ್ರಬಲ ಬಿಜೆಪಿ ಮುಖಂ ಡರುಗಳಾದ ಕೊಡಂದೇರ ಬಾಂಡ್ ಗಣಪತಿ ಹಾಗೂ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರÀ ನಡುವಿನ ಸ್ಪರ್ಧೆ ತೀವ್ರ ಕೌತುಕಕ್ಕೆ ಕಾರಣವಾ ಗಿತ್ತು. ಹಾಲಿ ಅಧ್ಯಕ್ಷ ಬಾಂಡ್ ಗಣ ಪತಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಸ್ಪರ್ಧಿಸಿದ ಮನು ಮುತ್ತಪ್ಪ ಇಬ್ಬರು ಪ್ರಬಲ ಆಕಾಂಕ್ಷಿಯಾಗಿದ್ದ ಕಾರಣ ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿ ಯನ್ನು ಘೋಷಿಸಿರಲಿಲ್ಲ. ಅದಲ್ಲದೆ ಇವರಿಬ್ಬರಲ್ಲಿ ಗೆಲ್ಲುವ ಅಭ್ಯರ್ಥಿ ಬ್ಯಾಂಕ್ ಅಧ್ಯಕ್ಷ ಎಂಬ ಮಾತು ಕೂಡ ಇದ್ದ ಹಿನ್ನೆಲೆ ಈ ಕ್ಷೇತ್ರದ ಫಲಿತಾಂಶ ಮತ್ತಷ್ಟು ರೋಚಕತೆಗಳಿಸಿಕೊಂಡಿತ್ತು.

೩೭ ಮತಗಳ ಪೈಕಿ ಬಾಂಡ್ ಗಣಪತಿ ೩೧ ಮತಗಳನ್ನು ಪಡೆದುಕೊಂಡು ಗೆಲುವು ಪಡೆದರೆ, ಮನುಮುತ್ತಪ್ಪ ೬ ಮತಗಳನ್ನು ಪಡೆದು ಸೋಲು ಅನುಭವಿಸಿದರು.

ಒಟ್ಟಾರೆಯಾಗಿ ಬಿಜೆಪಿ ಬೆಂಬಲದಿAದ ಸ್ಪರ್ಧಿಸಿದ್ದ ೮, ಬಿಜೆಪಿಗೆ ಬಂಡಾಯ ಸ್ಪರ್ಧಿಸಿದ್ದ ಓರ್ವ ಹಾಗೂ ಬಾಂಡ್ ಗಣಪತಿ, ಕಿಲನ್ ಗಣಪತಿ ಗೆಲುವಿನಿಂದ ಒಟ್ಟು ೧೧ ಮಂದಿ ಬಿಜೆಪಿಗರು ಗೆಲುವು ದಾಖಲಿಸಿದ್ದಾರೆ. ಇಬ್ಬರು ಕಾಂಗ್ರೆಸ್ ಬೆಂಬಲಿತರು ವಿಜಯಿಯಾಗಿದ್ದಾರೆ. ಸಂಜೆ ೪ ಗಂಟೆಗೆ ಮತದಾನ ಅಂತ್ಯ ಗೊಂಡು ೫.೩೦ರ ಹೊತ್ತಿಗೆ ಫಲಿತಾಂಶ ಘೋಷಣೆಯಾಯಿತು. ವಿಜಯಶಾಲಿ ಗಳ ಬೆಂಬಲಿಗರು ಹೂಮಾಲೆ ಹಾಕಿ, ಘೋಷಣೆ ಕೂಗಿ ಸಂಭ್ರಮಿಸಿದರು.

ವರದಿ: ಹೆಚ್.ಜೆ. ರಾಕೇಶ್