ಸೋಮವಾರಪೇಟೆ, ಮಾ.೧೭: ಕೃಷಿ ಇಲಾಖೆಯಿಂದ ನೀಡಲಾಗುವ ವಾರ್ಷಿಕ ಕೃಷಿ ಪ್ರಶಸ್ತಿಗೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಕ್ಯಾತೆ ಗ್ರಾಮದ ಕೃಷಿಕ ಕೆ.ಜಿ. ಕುಮಾರಸ್ವಾಮಿ(ಶಿವಕುಮಾರ್) ಭಾಜನರಾಗಿದ್ದಾರೆ.

ಕೃಷಿ ಉತ್ಪಾದನೆ ಹೆಚ್ಚಳ, ಸಕ್ರಿಯ ಪಾಲುದಾರಿಕೆ ಹಾಗೂ ರೈತರಲ್ಲಿ ಕೃಷಿ ಸಂಬAಧಿತ ಸ್ಪರ್ಧಾ ಮನೋಭಾವ ಹೆಚ್ಚಿಸಲು ಕೃಷಿ ಇಲಾಖೆಯಿಂದ ಸ್ಪರ್ಧೆ ಆಯೋಜಿಸಿದ್ದು, ಭತ್ತದ ಬೇಸಾಯದಲ್ಲಿ ಉತ್ತಮ ಇಳುವರಿ ಪಡೆಯುವ ಮೂಲಕ ಕುಮಾರಸ್ವಾಮಿ ಅವರು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಶನಿವಾರಸಂತೆ ಸಮೀಪದ ಮೈಲಾಥಪುರ ಎಂ.ಎಸ್. ರವೀಶ್ ದ್ವಿತೀಯ, ಹುಲುಸೆ ಗ್ರಾಮದ ಚನ್ನಬಸಪ್ಪ ತೃತೀಯ ಸ್ಥಾನ ಗಳಿಸಿದ್ದಾರೆ. ಬಹುಮಾನವು ಕ್ರಮವಾಗಿ ೧೫, ೧೦, ೫ ಸಾವಿರ ನಗದನ್ನು ಒಳಗೊಂಡಿದೆ.