ಸಿದ್ದಾಪುರ, ಮಾ. ೧೭: ಒಂಟಿ ಸಲಗದ ಕಾಟಕ್ಕೆ ಜನತೆ ಜೀವಭಯದಲ್ಲಿ ಬದುಕುತ್ತಿರುವ ಪರಿಸ್ಥಿತಿ ನೆಲ್ಯಹುದಿಕೇರಿ ಗ್ರಾಮದ ಅತ್ತಿಮಂಗಲದಲ್ಲಿ ಕಂಡುಬAದಿದೆ.

ಅತ್ತಿಮAಗಲ ಸಮೀಪದ ಚೇಂದAಡ ಮಾಚಮ್ಮ ಹಾಗೂ ಮುತ್ತಮ್ಮ ಕಾವೇರಪ್ಪ ಎಂಬವರ ಮನೆಯ ಹಿಂಭಾಗದಲ್ಲಿ ಪ್ರತಿನಿತ್ಯ ಒಂಟಿ ಸಲಗವೊಂದು ಮನೆಯ ಹಿಂಬದಿಯಲ್ಲಿರಿಸಿದ್ದ ಸಾಮಗ್ರಿಗಳನ್ನು ನಾಶಮಾಡುತ್ತಿರುವುದು ಸಿ ಸಿ ಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಅಲ್ಲದೆ ಮನೆಯ ವರಾಂಡದಲ್ಲಿರಿಸಿದ ಹೂ ಕುಂಡಗಳನ್ನು ಕೂಡ ನಾಶಪಡಿಸುತ್ತಿರುವ ದೃಶ್ಯ ಸೆರೆಯಾಗಿದೆ. ಕಾಡಾನೆಯು ಮನೆಯ ವರಾಂಡಕ್ಕೆ ನುಗ್ಗಿ ದಾಂಧಲೆ ನಡೆಸುತ್ತಿರುವುದರಿಂದ ಮನೆಯ ಮಂದಿ ರಾತ್ರಿ ತುರ್ತು ಕೆಲಸಕ್ಕೆ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ಹಾವಳಿ ತಡೆಯಲು ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನವಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಅಳಲು.