ಕುಶಾಲನಗರ, ಮಾ. ೧೫: ಕಳೆದ ಕೆಲವು ದಿನಗಳಿಂದ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಬಿಸಿಲಿನ ಬೇಗೆ ತಾಳಲಾರದೇ ಜನರು ನೆರಳಿನ ಆಶ್ರಯ ಪಡೆಯುವ ಜೊತೆಗೆ ತಂಪು ಪಾನೀಯ ಹಾಗೂ ಕಲ್ಲಂಗಡಿ ಮತ್ತಿತರ ತಂಪು ಹಣ್ಣುಗಳಿಗೆ ಮೊರೆ ಹೋಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ಎಲ್ಲೆಡೆ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿದೆ, ಬಿಸಿ ಗಾಳಿ ನಡುವೆ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸೂರ್ಯನ ಶಾಖದ ಪ್ರಖರತೆಯಿಂದ ತಪ್ಪಿಸಿಕೊಳ್ಳಲು ಕೆಲವರು ಬಣ್ಣದ ಛತ್ರಿ ಬಳಸಿಕೊಂಡು ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಪಟ್ಟಣದ ಸುತ್ತಮುತ್ತ ವ್ಯಾಪ್ತಿಯಲ್ಲಿ ಸರಾಸರಿ ಬಿಸಿಲಿನ ತಾಪಮಾನ ಪ್ರಮಾಣ ಗರಿಷ್ಠ ೩೫ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ.
ಜನರು ತಮ್ಮ ಬಾಯಾರಿಕೆ ನೀಗಿಸಲು ಕೆಲವೆಡೆ ಐಸ್ಕ್ರೀಮ್ ಪಾರ್ಲರ್ನಲ್ಲಿ ಕಾಲ ಕಳೆಯುತ್ತಿದ್ದರೆ, ಹಲವರು ಈಜುಕೊಳವನ್ನು ಅವಲಂಬಿಸಿದ್ದಾರೆ.
ಇನ್ನೂ ಕೆಲವು ಕಡೆ ದಾರಿಹೋಕರು ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಮಾರುಕಟ್ಟೆಗೆ ಬಂದಿರುವ ಬಗೆ ಬಗೆಯ ಕಲ್ಲಂಗಡಿ ಹಣ್ಣುಗಳನ್ನು ಖರೀದಿಸುತ್ತಿರುವುದು ಕಂಡು ಬಂದಿದೆ.
- ಸಿಂಚು.