ಮುಳ್ಳೂರು: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಮುಳ್ಳೂರು ಸಮೀಪದ ಕಾರ್ಗೋಡು ಬಳಿಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶೇಷ ಪೂಜೆ ನೆರವೇರಿಸಲಾಯಿತು. ಪೂಜಾ ಕಾರ್ಯದಲ್ಲಿ ಸ್ಥಳೀಯರು ಸೇರಿದಂತೆ ಅಕ್ಕಪಕ್ಕ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಯಿತು.ಸಂಪಾಜೆ: ಶ್ರೀ ಮಹಾಗಣಪತಿ ದೇವಸ್ಥಾನ, ಕೊಯನಾಡು ಮತ್ತು ಶ್ರೀ ಗಣೇಶ ಯುವ ಬಳಗ ಕೊಯನಾಡು ಇವರ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕ್ರೀಡೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯಿತು. ಮಹಾಶಿವರಾತ್ರಿ ದಿನ ಧ್ವಜಾರೋಹಣವನ್ನು ಮಹಾಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಉಲ್ಲಾಸ ಕೆನಾಜೆ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೊಯನಾಡು ಶ್ರೀ ಗಣೇಶ ಯುವ ಬಳಗದ ಉಪಾಧ್ಯಕ್ಷರಾದ ಹರ್ಷಿತ್, ಜಯಂತ ಪೆಲತಡ್ಕ ಉಪಸ್ಥಿತರಿದ್ದರು. ನಂತರ ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆ, ಸಭಾ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೊಯನಾಡು ಶ್ರೀ ಮಹಾಗಣಪತಿ ದೇವಾಲಯದ ಅಧ್ಯಕ್ಷ ಪಿ.ಡಿ. ವಿಶ್ವನಾಥ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಪಾಜೆ ಎ.ಎಸ್.ಐ. ಸುಂದರ ಸುವರ್ಣ, ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ಕೊಯನಾಡು ಸ.ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯಿನಿ ಹಂಸಕಲಾ, ಕೊಯನಾಡು ಶ್ರೀ ಗಣೇಶ ಯುವ ಬಳಗದ ಅಧ್ಯಕ್ಷ ಲೋಕೇಶ್, ಶ್ರೀ ಗಣೇಶ ಯುವ ಬಳಗದ ಮಾಜಿ ಅಧ್ಯಕ್ಷ ಕೃಷ್ಣ, ಸುಳ್ಯದ ನಳಿನಾಕ್ಷಿ ಕಲ್ಲಡ್ಕ ಅವರು ಧಾರ್ಮಿಕ ಉಪನ್ಯಾಸದಲ್ಲಿ ಭಾಗವಹಿಸಿದ್ದರು. ದೇವಾಲಯದ ಮಾಜಿ ಅರ್ಚಕ ಪ್ರಭಾಕರ ಭಟ್, ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಗಳಿಸಿದ ವಿದ್ಯಾರ್ಥಿ ಭವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಜಗದೀಶ್ ಪರ್ಮಲೆ ಮತ್ತು ಯಶೋಧರ ಬಿ.ಜೆ. ನಿರೂಪಿಸಿ, ಬಾಲಕೃಷ್ಣ ಕೊಯನಾಡು ಸ್ವಾಗತಿಸಿದರು. ಯಶೋಧರ ಬಿ.ಜೆ. ವÀಂದಿಸಿದರು. ಅನ್ನದಾನದ ನಂತರ ವಿವಿಧ ತಂಡಗಳಿAದ ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ತೆರೆ ಮಹೋತ್ಸವ

ಸಿದ್ದಾಪುರ: ಸಿದ್ದಾಪುರದ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ವಿಜೃಂಭಣೆಯಿAದ ನಡೆಯಿತು. ಶ್ರೀ ಮುತ್ತಪ್ಪ ದೇವಾಲಯದಲ್ಲಿ ಐದು ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ಹಾಗೂ ತೆರೆ ಮಹೋತ್ಸವ ನಡೆದವು. ರಾತ್ರಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಸೂರಿ ಮಾಲಾ ದೇವರ ನೃತ್ಯವು ಮೆರವಣಿಗೆಯೊಂದಿಗೆ ಕಾವೇರಿ ನದಿಗೆ ತೆರಳಿ ನಂತರ ದೇವಾಲಯಕ್ಕೆ ಹಿಂತಿರುಗಿ ನೋಡುಗರ ಮನ ಸೆಳೆಯಿತು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಐದು ದಿನಗಳ ಕಾಲ ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಿದ್ದಾಪುರ ಸುತ್ತಮುತ್ತಲಿನ ಸಾರ್ವಜನಿಕರು ಭಾಗವಹಿಸಿದ್ದರು.ಪೆರಾಜೆ: ಇಲ್ಲಿಯ ಶ್ರೀ ಶಾಸ್ತಾವು ದೇವಸ್ಥಾನದ ಜಾತ್ರೆಗೆ ಗೊನೆ ಮುಹೂರ್ತ ನಡೆಯಿತು. ಪುದುವಟ್ಟು ಕಾಪು ಸ್ಥಾನದಿಂದ ದೇವಾಲಯದ ಅರ್ಚಕ ವೆಂಕಟರಮಣ ಕೆ. ಪಾಂಙಣ್ಣಾಯ ಅವರ ನೇತೃತ್ವದಲ್ಲಿ ಕೋಡಿ ತಕ್ಕಮುಖ್ಯಸ್ಥರಾದ ಭಾಸ್ಕರ ಕೋಡಿ ಅವರು ಗೊನೆ ಕಡಿದು, ಮೂಲೆಮಜಲಿನಿಂದ ಕಾವೇರಿ ರಸ್ತೆಯ ಮೂಲಕ ದೇವಸ್ಥಾನದವರೆಗೆ ಬ್ಯಾಂಡ್ ವಾಲಗದೊಂದಿಗೆ ಗೊನೆಯನ್ನು ಕಾಲ್ನಡಿಗೆಯಲ್ಲಿ ತರಲಾಯಿತು.

ಈ ಸಂದರ್ಭ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ, ತಕ್ಕ ಮುಖ್ಯಸ್ಥರಾದ ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ, ಪುರುಷೋತ್ತಮ ನಿಡ್ಯಮಲೆ, ದೇವತಕ್ಕ ರಾಮಕಜೆ ರಾಜಗೋಪಾಲ, ಮಾಜಿ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ನಾಗೇಶ್ ಕುಂದಲ್ಪಾಡಿ, ಸುರೇಶ್ ಪೆರುಮುಂಡ, ಲೋಕನಾಥ ಅಮೆಚೂರು, ಪದ್ಮಯ್ಯ ಮಾಸ್ತರ್, ಸೇರಿದಂತೆ ದೇವಸ್ಥಾನದ ಮಾಜಿ ಹಾಗೂ ಹಾಲಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.ಬೈತೂರೇಶ್ವರ ವಾರ್ಷಿಕ ಹಬ್ಬ

ವೀರಾಜಪೇಟೆ: ವೀರಾಜಪೇಟೆ ಸಮೀಪದ ಕೋಟೆಕೊಪ್ಪ ಗ್ರಾಮದ ಶ್ರೀ ಬೈತೂರೇಶ್ವರ ದೇವಾಲಯದ ಬನದಲ್ಲಿ ವಾರ್ಷಿಕ ಹಬ್ಬವು ವಿಜೃಂಭಣೆಯಿAದ ಜರುಗಿತು. ವಿವಿಧ ಪೂಜಾ ವಿಧಿವಿಧಾನಗಳಿಂದ ಉತ್ಸವ ಸಂಪನ್ನಗೊAಡಿತು.

ಬನದ ಬೈತೂರೇಶ್ವರ ದೇವರಿಗೆ ಮಹಾಪೂಜೆ ಹಾಗೂ ಇನ್ನಿತರ ಪೂಜೆ ನೆರೆವೇರಿಸಿದ ಬಳಿಕ ಭಕ್ತರಿಗೆ ತೀರ್ಥಪ್ರಸಾದ ನೀಡಿ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು.ಮಡಿಕೇರಿ: ಇತಿಹಾಸ ಪ್ರಸಿದ್ಧ ಕಲ್ಲುಗುಂಡಿಯ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲಕ್ಕೆ ತಾ. ೧೪ ರಂದು ಮುಹೂರ್ತದ ಕೊಳ್ಳಿ ಕಡಿಯುವ ಮೂಲಕ ಚಾಲನೆ ನೀಡಲಾಯಿತು. ಪ್ರತಿವರ್ಷದಂತೆ ಈ ಬಾರಿ ಕೂಡ ತಾ. ೨೮ ರಿಂದ ೩೦ ರವರೆಗೆ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಮತ್ತು ಪಂಜುರ್ಲಿ, ಕಲ್ಲುರ್ಟಿ, ಗುಳಿಗ ಹಾಗೂ ರಕ್ತೇಶ್ವರಿ ದೈವಗಳ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ತಾ. ೨೧ ರಂದು ಬೆಳಿಗ್ಗೆ ಗೊನೆ ಕಡಿಯುವುದು, ತಾ. ೨೭ ರಂದು ಬೆಳಿಗ್ಗೆ ೫.೩೦ ಗಂಟೆಗೆ ದೈವಸ್ಥಾನದಲ್ಲಿ ಗಣಹೋಮ, ತಾ. ೨೮ ರಂದು ರಾತ್ರಿ ೭.೩೦ ಗಂಟೆಗೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಡುವುದು, ೯ ಗಂಟೆಗೆ ಮೇಲೇರಿಗೆ ಅಗ್ನಿ ಸ್ಪರ್ಷ, ೧೨.೩೦ ಗಂಟೆಗೆ ಕುಲ್ಚಾಟ ಹೊರಡುವುದು, ತಾ. ೨೯ ರಂದು ಬೆಳಿಗ್ಗೆ ೬ ಗಂಟೆಗೆ ಅಗ್ನಿ ಪ್ರವೇಶ, ೭ ಗಂಟೆಗೆ ಪ್ರಸಾದ ವಿತರಣೆ, ೮ ಗಂಟೆಗೆ ಮಾರಿಕಳ ಪ್ರವೇಶ ಹಾಗೂ ಮಾರಿಕಳದಿಂದ ಬಂದ ನಂತರ ಹರಕೆಯ ಸುರಿಗೆಗಳನ್ನು ಒಪ್ಪಿಸುವುದು. ನಂತರ ಪ್ರಸಾದ ವಿತರಣೆ ಮುಂದುವರೆಯಲಿದೆ. ತಾ. ೩೦ ರಂದು ಮಧ್ಯಾಹ್ನ ೧ ಗಂಟೆಗೆ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ಹಾಗೂ ರಕ್ತೇಶ್ವರಿ ದೈವಗಳ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ತಾ. ೨೮ ರಂದು ರಾತ್ರಿ ೯.೩೦ ಗಂಟೆಗೆ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಶ್ರೇಷ್ಠ ಕಲಾವಿದರಿಂದ ವಿಶೇಷ ಕಾರ್ಯಕ್ರಮ “ಕಲ್ಲುಗುಂಡಿಯ ಕಲರವ” ನಡೆಯಲಿದೆ ಎಂದು ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಸೇವೆಯನ್ನು ಮಾಡಿಸುವ ಭಕ್ತರು ಕೆ.ಆರ್. ಜಗದೀಶ್ ರೈ (ಅಧ್ಯಕ್ಷರು) ೯೪೪೮೫೦೧೬೪೭, ಕೆ.ವಿ. ಮಂಜುನಾಥ್ (ಕಾರ್ಯದರ್ಶಿ) ೯೪೪೮೫೪೮೬೦೪, ಬಿ.ಆರ್. ಪದ್ಮಯ್ಯ (ಕೋಶಾಧಿಕಾರಿ) ೯೪೪೮೯೭೬೪೧೪ ಹಾಗೂ ಬಿ. ಶಿವರಾಮ (ಕಚೇರಿ ನಿರ್ವಾಹಕ) ೯೦೦೮೬೩೭೯೨೪ನ್ನು ಸಂಪರ್ಕಿಸಬಹುದಾಗಿದೆ.