ವೀರಾಜಪೇಟೆ, ಮಾ. ೧೫: ಕೆದಮುಳ್ಳೂರು ಗ್ರಾಮದ ತೆರಮೆಮೊಟ್ಟೆ ನಿವಾಸಿ ಬಿಲ್ಲವರ ಕಮಲ ಅವರ ವಾಸದ ಮನೆ ಕುಸಿದು ಬಿದ್ದು ಹಾನಿಗೀಡಾದ ಹಿನ್ನೆಲೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಕ್ಷೇತ್ರದ ಶಾಸಕರು ಆಗಿರುವ ಎ.ಎಸ್. ಪೊನ್ನಣ್ಣ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ಉತ್ತಪ್ಪ, ಪಟ್ಟಡ ರಂಜಿ ಪೂಣಚ್ಚ, ನರೇಂದ್ರ ಕಾಮತ್, ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸ್ಥರು ಇದ್ದರು.