ಮಡಿಕೇರಿ, ಮಾ. ೧೩: ಕಥಾ ಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಕಾಸರಗೋಡಿನಲ್ಲಿ ನಡೆದ ‘ಕೇರಳ ಮತ್ತು ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ ೨೦೨೪'ರಲ್ಲಿ ವಿಶ್ವ ಕುಂಬೂರು ಅವರಿಗೆ ಕಥಾಬಿಂದು ಕನ್ನಡರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಅರಿವು ಮೂಡಿಸುವ ವಿಷಯಗಳು, ಹಾಸ್ಯ ಮತ್ತು ಕಿರು ಚಿತ್ರದಲ್ಲಿನ ಸಾಧನೆ ಹಾಗೂ ಪತ್ರಕರ್ತನಾಗಿ ಮಾಡಿದ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.