ಮಡಿಕೇರಿ, ಮಾ. ೧೪: ಮಾರ್ಚ್ ೧೭ರಂದು ನಿಗದಿಯಾಗಿದ್ದ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿ.ಸಿ.ಸಿ)ನ ಚುನಾವಣೆ ಇದೀಗ ಮುಂದೂಡಲ್ಪಟ್ಟಿದೆ.

ಲೋಕಸಭಾ ಚುನಾವಣೆಯ ಕಾರಣದಿಂದಾಗಿ ರಾಜ್ಯದಲ್ಲಿ ಮಾರ್ಚ್ ೨೦೨೪ ರಿಂದ ಜೂನ್ ೨೦೨೪ರ ತನಕ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಳ್ಳಲಿರುವ ಸಹಕಾರ ಸಂಘಗಳು ಸಹಕಾರ ಬ್ಯಾಂಕ್‌ಗಳ (ಫೆಡರಲ್ ಸಂಸ್ಥೆ) ಮತ್ತು ಅಪೆಕ್ಸ್ ಸಹಕಾರ ಸಂಘಗಳ ಚುನಾವಣೆಯನ್ನು ಸಹಕಾರ ಇಲಾಖೆ ಮುಂದಿನ ಆದೇಶದ ತನಕ ಮುಂದೂಡಿ ಆದೇಶ ಹೊರಡಿಸಿದೆ. ಪ್ರಸ್ತುತ ಹಾಲಿ ಇರುವ ಆಡಳಿತ ಮಂಡಳಿ ಮತ್ತು ಪದಾಧಿಕಾರಿಗಳ ಅವಧಿಯನ್ನು ಮುಂದುವರಿಸಲಾಗಿದೆ. ಈಗಾಗಲೇ ಚುನಾವಣಾ ವೇಳಾಪಟ್ಟಿ ಹೊರಡಿಸಿ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದ್ದಲ್ಲಿ ಅದನ್ನು ಸಹ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ. ಈ ಬಗ್ಗೆ ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಎ.ಸಿ. ದಿವಾಕರ್ ಇಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಕೊಡಗು ಡಿ.ಸಿ.ಸಿ. ಬ್ಯಾಂಕ್‌ಗೆ ಸಂಬAಧಿಸಿದAತೆ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಚುನಾವಣೆಗೆ ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿತ್ತು. ಇದೀಗ ಸರಕಾರಿ ಆದೇಶದಿಂದಾಗಿ ನಡೆದಿದ್ದ ಎಲ್ಲಾ ಪ್ರಕ್ರಿಯೆಗಳು ರದ್ದುಗೊಂಡAತಾಗಿವೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆೆಯಲ್ಲಿ ಸ್ಪರ್ಧಿಸಿದ್ದ ಆಕಾಂಕ್ಷಿಗಳಿಗೆ ಇದೀಗ ನಿರಾಸೆ ಉಂಟಾಗಿದೆ. ಆದರೂ ಹಾಲಿ ಅಧ್ಯಕ್ಷ ಬಾಂಡ್ ಗಣಪತಿ ಅಧ್ಯಕ್ಷತೆಯ ಆಡಳಿತ ಮಂಡಳಿ ಮುಂದಿನ ಆದೇಶದ ತನಕ ಮುಂದುವರಿಯುವ ಅವಕಾಶವಿದೆ.