ಸೋಮವಾರಪೇಟೆ, ಮಾ. ೧೪: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಸಜ್ಜಳ್ಳಿ, ಐಗೂರಿನ ಅರಣ್ಯಕ್ಕೆ ಒತ್ತಿಕೊಂಡಿರುವ ಜನವಸತಿ ಪ್ರದೇಶ, ಕಾಫಿ ತೋಟಗಳೀಗ ಕಾಡಾನೆಗಳ ಕಾರಿಡಾರ್ಗಳಾಗಿವೆ.
ಆಹಾರ, ನೀರನ್ನರಸಿ ಬರುವ ಕಾಡಾನೆಗಳು ಈ ಭಾಗದಲ್ಲೇ ಕಳೆದ ೩ ತಿಂಗಳಿನಿAದ ಮೊಕ್ಕಾಂ ಹೂಡಿದ್ದು, ಸ್ಥಳೀಯರು ಭಯಾತಂಕದಿAದಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಕಾಡಾನೆಗಳ ಓಡಾಟ ಹೆಚ್ಚಿದ್ದು, ಈ ಸಮಯದಲ್ಲಿ ಸಂಚರಿಸುವ ಮಂದಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಿದೆ.
ಕಳೆದ ಮೂರು ತಿಂಗಳಿನಿAದ ಈ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು, ಕಾಫಿ ತೋಟ, ರಾಜ್ಯ ಹೆದ್ದಾರಿ, ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿವೆ. ಕಾಫಿ ತೋಟದೊಳಗಿರುವ ಹಲಸು, ಬೈನೆ ಸೇರಿದಂತೆ ಇನ್ನಿತರ ಮರಗಳನ್ನು ಆಹಾರವಾಗಿಸಿಕೊಂಡು, ತೋಟದೊಳಗಿರುವ ಕೆರೆಯಲ್ಲಿ ತಮ್ಮ ದಾಹ ಇಂಗಿಸಿಕೊಳ್ಳುತ್ತಿವೆ. ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಒಂದು ಬದಿಯಲ್ಲಿ ಅರಣ್ಯ,
(ಮೊದಲ ಪುಟದಿಂದ) ಮತ್ತೊಂದು ಬದಿಯಲ್ಲಿ ಕಾಫಿ ತೋಟ, ಕೆರೆಗಳಿರುವ ಹಿನ್ನೆಲೆ ಅನ್ಯ ಮಾರ್ಗವಿಲ್ಲದೇ ಆನೆಗಳು ರಸ್ತೆಯನ್ನೇ ಕಾರಿಡಾರ್ ಮಾಡಿಕೊಂಡಿವೆ. ಅರಣ್ಯ ಭಾಗದಲ್ಲಿ ಆನೆಗಳ ಓಡಾಟಕ್ಕೆ ತಡೆಹಾಕಲೆಂದು ಅರಣ್ಯ ಇಲಾಖೆ ಕೋಟ್ಯಂತರ ವೆಚ್ಚದಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸಿದೆ. ಆದರೆ ಕಾಡಾನೆಗಳು ಅರಣ್ಯ ಬಿಟ್ಟು ನಾಡಿಗೆ ಬಾರದಂತೆ ಅಲ್ಲೇ ಆಹಾರ, ನೀರಿನ ವ್ಯವಸ್ಥೆ ಮಾಡದೇ ಕೈತೊಳೆದುಕೊಂಡಿದೆ.
ಪರಿಣಾಮ ಕಾಡಾನೆಗಳು ರೈಲ್ವೇ ಬ್ಯಾರಿಕೇಡ್ ಮುಕ್ತಾಯಗೊಂಡಿರುವ ಸ್ಥಳದಿಂದ ನಾಡಿನೊಳಗೆ ಲಗ್ಗೆಯಿಡುತ್ತಿವೆ. ಪ್ರಸ್ತುತ ಕಾಜೂರು, ಯಡವಾರೆ, ಸಜ್ಜಳ್ಳಿ ಭಾಗದಲ್ಲಿ ೩ ತಿಂಗಳ ಮರಿಯಾನೆಯ ಸಹಿತ ಒಟ್ಟು ೬ ಆನೆಗಳು ಮೊಕ್ಕಾಂ ಹೂಡಿವೆ.
ನಿನ್ನೆ ರಾತ್ರಿ ಕಾಜೂರಿನ ದುರ್ಗಾ ಎಸ್ಟೇಟ್ನ ಕೊಲ್ಲಿ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗೇಟನ್ನು ತಳ್ಳಿ ಮೂರು ಕಾಡಾನೆಗಳು ತೋಟ ಪ್ರವೇಶಿಸಿವೆ. ನಂತರ ವಾಪಸ್ ಅರಣ್ಯಕ್ಕೆ ತೆರಳದೇ ತೋಟದಲ್ಲೇ ಬೀಡುಬಿಟ್ಟಿವೆ.
ಸಜ್ಜಳ್ಳಿ ಭಾಗದಲ್ಲಿ ನಿನ್ನೆ ರಾತ್ರಿ ಹೆಣ್ಣು ಕಾಡಾನೆ ತನ್ನ ೩ ತಿಂಗಳ ಮರಿಯೊಂದಿಗೆ ಆಹಾರ, ನೀರಿಗಾಗಿ ಕಾಫಿ ತೋಟದೊಳಗೆ ಬಂದಿದ್ದು, ಇಂದು ಬೆಳಿಗ್ಗೆ ವಾಪಸ್ ಅರಣ್ಯಕ್ಕೆ ಹೋಗುವ ಸಮಯದಲ್ಲಿ ಹೆಣ್ಣು ಕಾಡಾನೆ ಬ್ಯಾರಿಕೇಡ್ನೊಳಗೆ ಸಿಕ್ಕಿಹಾಕಿಕೊಂಡು ಕೆಲಕಾಲ ಒದ್ದಾಟ ಮಾಡಿದೆ.
ಮರಿಯಾನೆ ಸಲೀಸಾಗಿ ಬ್ಯಾರಿಕೇಡ್ ದಾಟಿ ಅರಣ್ಯ ಭಾಗಕ್ಕೆ ತೆರಳಿದ ಸಂದರ್ಭ, ಮರಿಯನ್ನು ಹಿಂಬಾಲಿಸಿದ ಹೆಣ್ಣಾನೆ ಬ್ಯಾರಿಕೇಡ್ನೊಳಗೆ ನುಗ್ಗಲು ಯತ್ನಿಸಿದೆ. ಈ ಸಂದರ್ಭ ಅರ್ಧ ದೇಹ ಒಳಗೆ ಸಿಲುಕಿಕೊಂಡು ಮುಂದೆ ಹೋಗಲಾಗದೇ, ಹಿಂದೆಯೂ ಬರಲಾಗದೇ ಕೆಲಕಾಲ ಒದ್ದಾಡಿದೆ. ನಂತರ ಹೇಗೋ ಒದ್ದಾಟ ನಡೆಸಿ ವಾಪಸ್ ತೋಟದ ಭಾಗಕ್ಕೆ ಬಂದಿದ್ದು, ಸುಮಾರು ೧ ಕಿ.ಮೀ. ನಷ್ಟು ಸಂಚರಿಸಿ, ನಂತರ ಅರಣ್ಯದೊಳಗೆ ತೆರಳಿದೆ.
ಈ ಸಂದರ್ಭ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ಸ್ಥಳೀಯರ ಮೇಲೆ ಧಾಳಿಗೂ ಮುಂದಾಗಿದೆ. ಆರ್ಆರ್ಟಿ ಸಿಬ್ಬಂದಿಗಳಾದ ವಿನೋದ್, ದರ್ಶನ್, ಹರ್ಷಿತ್ ಅವರುಗಳು ಹರಸಾಹಸ ಪಟ್ಟು ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಿದ್ದಾರೆ.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಮುಕ್ತಾಯಗೊಂಡಿದ್ದರೂ ಕಾಡಾನೆಗಳ ಉಪಟಳದಿಂದ ಮಾತ್ರ ನಿಟ್ಟುಸಿರು ಬಿಡುವ ಸಮಯ ಬಂದಿಲ್ಲ.
ಕಾಡಾನೆಗಳು ರೈಲ್ವೇ ಬ್ಯಾರಿಕೇಡ್ ದಾಟಿಕೊಂಡು ಗ್ರಾಮದೊಳಗೆ ಬರುತ್ತಿವೆ. ಕೆಲವು ಕಾಡಾನೆಗಳು ಗೇಟ್ ತೆರೆದು ಒಳಪ್ರವೇಶಿಸುತ್ತಿವೆ. ಕೋಟಿಗಟ್ಟಲೆ ಹಣ ವಿನಿಯೋಗಿಸಿ ಬ್ಯಾರಿಕೇಡ್ ಅಳವಡಿಸಿರುವುದು ‘ಹರಿಯುವ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ’ಯಷ್ಟೇ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನವಸತಿ ಪ್ರದೇಶದಲ್ಲಿರುವ ಆನೆಗಳನ್ನು ಇಲ್ಲಿಂದ ಸ್ಥಳಾಂತರಿಸುವAತೆ ಸ್ಥಳೀಯರು ಒತ್ತಾಯಿಸಿದ್ದಾರೆ.
- ವಿಜಯ್ ಹಾನಗಲ್