ಕುಶಾಲನಗರ, ಮಾ. ೧೩: ಕುಶಾಲನಗರದ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವ ಮತ್ತು ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಸಮಾಜದ ಆವರಣದಲ್ಲಿ ನಡೆಯಿತು.
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ. ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಪುರುಷರ ಸಮಾನ ಹಕ್ಕು ಮಹಿಳೆಯರಿಗೆ ದೊರೆಯಬೇಕು ಎನ್ನುವ ಆಶಯ ಬಹುತೇಕ ಈಡೇರಿದೆ. ಆದರೆ ಮಹಿಳೆ ಪುರುಷನಿಗಿಂತ ಹೆಚ್ಚು ಸಾಮರ್ಥ್ಯಶಾಲಿ ಎಂಬುದನ್ನು ಅರಿತುಕೊಳ್ಳಬೇಕು. ಹತ್ತು ಹಲವು ಜವಾಬ್ದಾರಿ ನಿಭಾಯಿಸುವ ಮಹಿಳೆಯರ ಬಗ್ಗೆ ಅಗೌರವ ಸಲ್ಲದು ಎಂದರು.
ಮಕ್ಕಳ ಆರೈಕೆ ಬಗ್ಗೆ ಕಿವಿಮಾತು ಹೇಳಿದ ಅವರು, ಮಕ್ಕಳನ್ನು ಆರೋಗ್ಯವಂತರಾಗಿಸುವಲ್ಲಿ ಪೋಷಕರ ಪಾತ್ರ ಬಹುಮುಖ್ಯ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಮಾತನಾಡಿ, ಅಂತರರಾಷ್ಟಿçÃಯ ಮಹಿಳಾ ದಿನದಲ್ಲಿ ಮದರ್ ಥೆರೆಸಾ ಅವರನ್ನು ಸ್ಮರಿಸಿಕೊಳ್ಳುವುದು ಎಲ್ಲಾ ಕಾಲಕ್ಕೂ ಶ್ರೇಷ್ಠ ಕಾರ್ಯ. ಮಹಿಳಾ ಮೀಸಲಾತಿ ಒದಗಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಎಂದಿಗೂ ಅಜರಾಮರ.
ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿದ ಮಹಿಳಾ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು. ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸಲೀನಾ ಡಿಕುನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಸಮಾಜದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸರಕಾರಿ ಬಾಲಕಿಯರ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ, ಮಾಜಿ ಸೈನಿಕ ಅಮೆ ಜನಾರ್ಧನ್, ಕೃಷಿ ಮಹಿಳೆ ರುದ್ರಾಂಬಿಕೆ, ಮಕ್ಕಳ ನಾಟಿ ವೈದ್ಯೆ ಅಯಿನಮಂಡ ಲೀಲಾವತಿ ಗಣಪತಿ, ಕೇಶ ವಿನ್ಯಾಸಕ ತರಬೇತುದಾರ ಆರ್.ಲೋಕೇಶ್, ಆಟೋಚಾಲಕಿ ಸುಜಾತ, ಸಂಚಾರಿ ಪೊಲೀಸ್ ಆಶಾ ಸುರೇಶ್, ಉಪನ್ಯಾಸಕಿ ಉಷಾ ಯತೀಶ್, ಡಾ. ಶಿವಕುಮಾರ್, ಶಿಕ್ಷಕಿ ಜ್ಯೋತಿ ಸೆಬಾಸ್ಟಿನ್, ಮಾಜಿ ನಿರ್ದೇಶಕಿ ಯಶೋಧಮ್ಮ, ಆಯಿಷಾ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಎನ್.ಎ. ಸುಶೀಲ, ಕಾರ್ಯದರ್ಶಿ ಶೈಲಕುಮಾರಿ ಸೇರಿದಂತೆ ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗದವರು, ಪೋಷಕರು ಇದ್ದರು.