ಮಡಿಕೇರಿ, ಮಾ. ೧೩: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಇಂದು ಹಿಂಪಡೆಯಲಾಯಿತು. ಡಿಸೆಂಬರ್ ತಿಂಗಳ ವೇತನವನ್ನು ಇಂದು ಪಾವತಿಸಲಾಗಿದೆ. ಕುಲಪತಿಗಳಾದ ಪ್ರೊ. ಧರ್ಮ ಅವರ ಕೋರಿಕೆಯ ಮೇರೆಗೆ ಮತ್ತು ಮಕ್ಕಳ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಧರಣಿಯನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಲಾಯಿತು ಎಂದು ಸೋಮಣ್ಣ ತಿಳಿಸಿದ್ದಾರೆ.