ನಾಪೋಕ್ಲು, ಮಾ. ೧೩: ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿರುವ ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆಯು ಏಪ್ರಿಲ್ ೧೮ ರಿಂದ ೨೧ ರವರೆಗೆ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾ ಸಮಿತಿಯ ಅಧ್ಯಕ್ಷ ಬೊಟ್ಟೋಳಂಡ ಗಣೇಶ್ ತಿಳಿಸಿದ್ದಾರೆ.

ಶ್ರೀ ಭಗವತಿ ದೇವಾಲಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ ಕ್ರೀಡಾ ಸಮಿತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಈಗಾಗಲೇ ಹಲವು ಕುಟುಂಬಗಳು ನೋಂದಾವಣೆೆ ಮಾಡಿಕೊಂಡಿದ್ದು ನೋಂದಾವಣೆÉ ಮಾಡಿಕೊಳ್ಳಲು ಬಾಕಿ ಉಳಿದ ಕುಟುಂಬಗಳು ತಾ.೧೫ ರ ಒಳಗೆ ಹೆಸರು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು. ಈ ಸಂದರ್ಭ ಸ್ಪರ್ಧಾ ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಂಚಾಲಕ ಮಿಟ್ಟು ಪೂಣಚ್ಚ, ಸಮಿತಿಯ ರವಿ ಕರಂಬಯ್ಯ, ಮದನ್, ಮೊಣ್ಣಪ್ಪ, ರಂಜಿ, ಆರ್ಯನ್, ಸುಜು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.