ಪೊನ್ನಂಪೇಟೆ, ಮಾ. ೧೩: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ೨೦೨೪ ರ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.
ನಿಕಟಪೂರ್ವ ಅಧ್ಯಕ್ಷ ನೀತ್ ಅಯ್ಯಪ್ಪ ನೂತನ ಅಧ್ಯಕ್ಷ ಪೆಮ್ಮಂಡ ಮಂಜು ಬೋಪಣ್ಣ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಕಾರ್ಯದರ್ಶಿಯಾಗಿ ಶರತ್ ಸೋಮಣ್ಣ, ಕೋಶಾಧಿಕಾರಿಯಾಗಿ ಬಿ.ಎಂ. ಚಂಗಪ್ಪ, ಸಹ ಕಾರ್ಯದರ್ಶಿಯಾಗಿ ಟಿ.ಎನ್. ಸುಜಿತ್, ಉಪಾಧ್ಯಕ್ಷರುಗಳಾಗಿ ಸೋಮಣ್ಣ, ಗಿರೀಶ್ ಎ.ಎಂ., ಬೋಪಣ್ಣ, ಅಯ್ಯಪ್ಪ, ಅಕ್ಷಯ್, ಸತೀಶ್ ಹೆಚ್.ಆರ್., ನಿರ್ದೇಶಕರು ಗಳಾಗಿ ಗೌತಮ್ ಪಿ.ಬಿ., ಬೋಪಣ್ಣ ಎಂ.ಪಿ., ಲಿಖಿತ್ ಕುಮಾರ್ ಟಿ.ಜೆ., ಸ್ವಾಮಿ ಜೆ.ಪಿ., ಬೋಪಣ್ಣ ಮತ್ತು ಜೂನಿಯರ್ ಜೆ.ಸಿ. ಚರಣ್ ಚಂಗಪ್ಪ ಎ.ಡಿ. ಪ್ರಮಾಣವಚನ ಸ್ವೀಕರಿಸಿದರು.
ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನ ಅನುಷ್ಠಾನ ಗೊಳಿಸುತ್ತಾ ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಜೆಸಿಐ ಮುಖ್ಯ ಪಾತ್ರ ವಹಿಸುತ್ತದೆ ಎಂದು ಜೆಸಿಐ ಅಂರ್ರಾಷ್ಟಿçÃಯ ಆಯೋಗದ ಅಧ್ಯಕ್ಷ ಮತ್ತು ೨೦೨೩ ರ ರಾಷ್ಟಿçÃಯ ಉಪಾಧ್ಯಕ್ಷ ಭರತ್ ಆಚಾರ್ಯ ಹೇಳಿದರು.
ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಜೆಸಿಐನ ಚಟುವಟಿಕೆಗಳು ಪೂರಕ ವೇದಿಕೆಯನ್ನು ಕಲ್ಪಿಸುತ್ತದೆ ಎಂದು ವಲಯ ಉಪಾಧ್ಯಕ್ಷೆ ಆಶಾ ಜೈನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಸಮುದಾಯದಲ್ಲಿ ಸಮಾನ ಮನಸ್ಥಿತಿಯನ್ನು ಕಟ್ಟುವ ಕಾರ್ಯಕ್ರಮವಾಗಿ ಜೆಸಿಐ ಪ್ರಮುಖ ಹೆಜ್ಜೆಯನ್ನು ಇಡುತ್ತಿದೆ. ಈ ನಿಟ್ಟಿನಲ್ಲಿ ಶಕ್ತಿಯುತ ಸಮಾಜ ವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ರಾಷ್ಟಿçÃಯ ಆಯೋಗದ ಉಪಾಧ್ಯಕ್ಷ ಕುಮಾರ್ ಕೆ.ಎಸ್. ತಿಳಿಸಿದರು.
ರಾಷ್ಟಿçÃಯ ಆಯೋಗದ ಉಪಾಧ್ಯಕ್ಷ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ವಲಯ ಉಪಾಧ್ಯಕ್ಷ ಎಂ.ಡಿ, ರಂಗಸ್ವಾಮಿ, ಜಿ. ರಾಕೇಶ್, ಜೆಸಿಐ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಜೆಸಿಐ ಕಾರ್ಯದರ್ಶಿ ಶರತ್ ಸೋಮಣ್ಣ ಸಿ.ಜಿ., ನಿಕಟಪೂರ್ವ ಅಧ್ಯಕ್ಷರುಗಳಾದ ಅಪ್ಪಂಡೇರAಡ ದಿನೇಶ್, ನೀತ್ ಅಯ್ಯಪ್ಪ, ಎಂ.ಎನ್. ವನಿತ್ಕುಮಾರ್, ಬಿ.ಇ. ಕಿರಣ್, ಎಂ.ಯು ಸಂದೀಪ್ ಮತ್ತು ಸಿ.ಆರ್. ಹರೀಶ್, ಅಣ್ಣಪ್ಪ, ಸುರೇಶ್ ಎನ್.ಜಿ. ಸೇರಿದಂತೆ ಜೆಸಿಐ ಇತರ ಸದಸ್ಯರುಗಳು ವಾರ್ಷಿಕ ವರದಿ ವಾಚನ, ನೆನಪಿನ ಕಾಣಿಕೆ ವಿತರಣೆ ಕಾರ್ಯಕ್ರಮವನ್ನು ನಿರ್ವಹಿಸಿದರು.