ಸಿದ್ದಾಪುರ/ ಪಾಲಿಬೆಟ್ಟ, ಮಾ. ೧೩: ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಪಾಲಿಬೆಟ್ಟ ಗ್ರಾಮದಲ್ಲಿ ಬುಧವಾರ ನಡೆದಿದೆ. ಪಾಲಿಬೆಟ್ಟದ ಬೀಚ್ಲ್ಯಾಂಡ್ ಬಿ ಎಸ್ಟೇಟ್ನಲ್ಲಿ ಕಾರ್ಮಿಕಳಾಗಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಹೊಜ್ಭಾನು (೩೭) ಮೃತ ದುರ್ಧೈವಿ. ಬುಧವಾರ ಮಧ್ಯಾಹ್ನ ಕಾಫಿ ತೋಟದಲ್ಲಿ ಕಾಫಿಬೀಜ ಹೆಕ್ಕುವ ಸಂದರ್ಭ ಸಲಗವೊಂದು ಹಠಾತ್ತನೆ ಹಿಂಭಾಗದಿAದ ದಾಳಿ ನಡೆಸಿದೆ ಎನ್ನಲಾಗಿದೆ. ದಾಳಿ ನಡೆಸಿದ ಕಾಡಾನೆಯು ಮಹಿಳೆಯನ್ನು ಸೊಂಡಿಲಿನಿAದ ಎತ್ತಿ ಎಸೆದಿದೆ. ಅಲ್ಲದೆ, ಎದೆಯ ಭಾಗಕ್ಕೆ ತುಳಿದಿದೆ. ಬಳಿಕ ಮಹಿಳೆ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆನೆ ಆಕೆಯನ್ನು ಬೆನ್ನಟ್ಟಿ ಮತ್ತೆ ದಾಳಿ ಮಾಡಿದೆ. ಈ ಸಂದರ್ಭ ಮೃತ ಮಹಿಳೆಯೊಂದಿಗೆ ಇದ್ದ ಇನ್ನಿಬ್ಬರು ಕಾರ್ಮಿಕ ಮಹಿಳೆಯರು ಇದನ್ನು ಕಂಡು ಕಿರುಚಿದಾಗ ಆನೆಯು ತೋಟದೊಳಕ್ಕೆ ತೆರಳಿತು ಎಂದು ಪ್ರತ್ಯಕ್ಷ ದರ್ಶಿಗಳು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಜೀವನ್ಮರಣ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಪಾಲಿಬೆಟ್ಟ ಸರ್ಕಾರಿ ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾರೆ. ನಂತರ ಮೃತದೇಹವನ್ನು ಕೆಲಕಾಲ ಆಸ್ಪತ್ರೆಯಲ್ಲಿಟ್ಟು ಬಳಿಕ ಸಿದ್ದಾಪುರದ ಶವಾಗಾರಕ್ಕೆ ತರಲಾಯಿತು.