ಕೂಡಿಗೆ, ಮಾ. ೧೨: ಕೊಡಗು ವಿಶ್ವವಿದ್ಯಾಲಯದ ಪ್ರವೇಶ ದ್ವಾರದಿಂದ ಸಂವಿಧಾನ ಜಾಗೃತಿ ಜಾಥಾದ ರಥದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್‌ರವರ, ಜಗಜ್ಯೋತಿ ಬಸವಣ್ಣನವರ, ಭಗವಾನ್ ಬುದ್ಧ ಮತ್ತು ಕೊಡಗಿನ ಕಾವೇರಿ ಮಾತೆ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರರವರು ಮತ್ತು ಕುಲಸಚಿವರಾದ ಡಾ. ಸೀನಪ್ಪರವರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳೊAದಿಗೆ ನೂರಾರು ವಿದ್ಯಾರ್ಥಿಗಳು ಪೂರ್ಣಕುಂಭ ಸ್ವಾಗತದೊಂದಿಗೆ ಜ್ಞಾನಕಾವೇರಿ ಆವರಣಕ್ಕೆ ರಥವನ್ನು ಬರಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಸಮಾಜಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಮಧು ಹೆಚ್.ಎಸ್. ಪ್ರಕಾಶ್, ವಿವಿಧ ವಿಭಾಗಗಳ ಉಪನ್ಯಾಸಕರುಗಳು, ಆಡಳಿತ ವೃಂದ, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ವಿನುರವರು ಸ್ವಾಗತಿಸಿ, ಸುದರ್ಶನ್ ಕುಮಾರ್ ವಂದಿಸಿದರು ಹಾಗೂ ಡಾ. ಜಮೀರ್ ಅಹಮದ್ ನಿರೂಪಿಸಿದರು.