ಸಿದ್ದಾಪುರ, ಮಾ. ೧೨: ಕೊಡಗಿನ ಇತಿಹಾಸ ಪ್ರಸಿದ್ಧ ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಶ್ರೀ ಸತ್ಯನಾರಾಯಣ ದೇವರ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮಗಳು ತಾ.೧೯ ರಿಂದ ೨೧ ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ತಾ.೧೯ ಪ್ರಾತಕಾಲ ೬-೩೦ಕ್ಕೆ ಗಣಹೋಮ, ಸಂಜೆ ೬-೩೦ ಗಂಟೆಗೆ ತಕ್ಕನ ಮನೆಯಿಂದ ಭಂಡರಾ ಇಳಿಸುವುದು. ೭ಕ್ಕೆ ಶುದ್ಧ ಕಳಸ, ದೇವರ ಬಲಿ ಬರುವುದು. ತಾ. ೨೦ರಂದು ಬೆಳಿಗ್ಗೆ ೧೦-೩೦ಕ್ಕೆ ಸಾಮೂಹಿಕ ಅಶ್ಲೇಷಾ ಬಲಿ, ಮಧ್ಯಾಹ್ನ ೧೨-೩೦ಕ್ಕೆ ಮಹಾಪೂಜೆ ಪಟ್ಟಣಿ, ಮಹಾಪೂಜೆ ನಂತರ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ನೆರಪುಬಲಿ, ಮಹಾಪೂಜೆ, ಶ್ರೀ ದೇವರ ತೀರ್ಥ ಪ್ರಸಾದ, ಅನ್ನಸಂತರ್ಪಣೆ ತಾ.೨೧ರಂದು ಬೆಳಿಗ್ಗೆ ೮-೩೦ ಗಂಟೆಗೆ ಸಾನಿಧ್ಯ ಕಳಸ, ಬೆಳಿಗ್ಗೆ ೯-೩೦ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ೧-೩೦ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ೩-೩೦ ಗಂಟೆಗೆ ಹಿರಿಯರಿಗೆ ಹಾಗೂ ಮಕ್ಕಳಿಗೆ ತೆಂಗಿನಕಾಯಿ ಕೀಳಾಟ ಹಾಗೂ ಈಡುಗಾಯಿ ಒಡೆಯುವ ಸ್ಪರ್ಧೆ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ತಾ.೨೨ ರಂದು ಬೆಳಿಗ್ಗೆ ೧೦-೩೦ಕ್ಕೆ ಶುದ್ಧ ಕಳಸ ಮಹಾಪೂಜೆ, ದೇವರ ತೀರ್ಥ ಪ್ರಸಾದ ನಂತರ ಮಂತ್ರಾಕ್ಷತೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.