ಕೂಡಿಗೆ, ಮಾ. ೧೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಸಮೀಪದಲ್ಲಿರುವ ಕೆರೆಕೊಪ್ಪಲು ಗ್ರಾಮದಲ್ಲಿರುವ ಕೆರೆಯು ಸಂಪೂರ್ಣವಾಗಿ ನೀರಿಲ್ಲದೆ ಬತ್ತಿದ ಹಿನ್ನೆಲೆಯಲ್ಲಿ ಆ ಗ್ರಾಮದ ಶಾಲಾ ವಿದ್ಯಾರ್ಥಿಗಳು ಮತ್ತು ಯುವಕರು ರಜೆಯ ದಿನಗಳಲ್ಲಿ ಆ ಜಾಗವನ್ನು ಆಟದ ಮೈದಾನವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬAದಿದೆ.
ಕೆರೆಕೊಪ್ಪಲಿನ ಕೆರೆಯು ಕೂಡಿಗೆ ಕೃಷಿ ಕ್ಷೇತ್ರದ ಜಮೀನಿನ ಸಮೀಪದಲ್ಲಿದ್ದು, ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಬತ್ತಿರುವುದರಿಂದಾಗಿ ಈ ವ್ಯಾಪ್ತಿಯ ದನಕರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿ ಎರಡು ಕಿಲೋಮೀಟರ್ ದೂರದಲ್ಲಿರುವ ಹಾರಂಗಿ ನದಿಯನ್ನು ಅವಲಂಬಿಸಬೇಕಾಗಿದೆ. ಕಳೆದ ೧೦ ವರ್ಷಗಳಿಂದಲೂ ಬತ್ತದ ಕೆರೆಯು ಈ ಬಾರಿ ಬತ್ತಿರುವುದರಿಂದಾಗಿ ಗ್ರಾಮದ ಯುವಕರು ಈ ಜಾಗವನ್ನು ಕ್ರಿಕೆಟ್ ಆಡಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಕೆ.ಕೆ. ನಾಗರಾಜಶೆಟ್ಟಿ